ADVERTISEMENT

ಪ್ಯಾರಾ ಈಜು: ಕರ್ನಾಟಕ ತಂಡಕ್ಕೆ ಸಮಗ್ರ ಪ್ರಶಸ್ತಿ

ಪಿಟಿಐ
Published 22 ಅಕ್ಟೋಬರ್ 2024, 16:04 IST
Last Updated 22 ಅಕ್ಟೋಬರ್ 2024, 16:04 IST
<div class="paragraphs"><p>ಈಜು (ಸಾಂದರ್ಭಿಕ ಚಿತ್ರ)</p></div>

ಈಜು (ಸಾಂದರ್ಭಿಕ ಚಿತ್ರ)

   

ಪಣಜಿ: ಕರ್ನಾಟಕ ತಂಡ, ಮಂಗಳವಾರ ಇಲ್ಲಿ ಮುಕ್ತಾಯಗೊಂಡ 24ನೇ ರಾಷ್ಟ್ರೀಯ ಪ್ಯಾರಾ ಈಜು ಚಾಂಪಿಯನ್‌ಷಿಪ್‌ನಲ್ಲಿ 392 ಪಾಯಿಂಟ್‌ಗಳೊಂದಿಗೆ ಸಮಗರ ಪ್ರಶಸ್ತಿ ಗೆದ್ದುಕೊಂಡಿತು.

ಮಹಾರಾಷ್ಟ್ರ 378 ಪಾಯಿಂಟ್ಸ್ ಕಲೆಹಾಕಿ ಎರಡನೇ ಸ್ಥಾನ ಪಡೆದರೆ, ರಾಜಸ್ಥಾನ (248) ಮೂರನೇ ಸ್ಥಾನ ಗಳಿಸಿತು. 28 ರಾಜ್ಯಗಳ 518 ಸ್ಪರ್ಧಿಗಳು ಭಾಗವಹಿಸಿದ್ದರು. 231 ಮಂದಿ ಮೊದಲ ಬಾರಿ ಭಾಗವಹಿಸಿದ್ದರು.

ADVERTISEMENT

ಕರ್ನಾಟಕದ ಶರಣ್ಯಾ, ಮಹಿಳೆಯರ ವಿಭಾಗದ ವೈಯಕ್ತಿಕ ಪ್ರಶಸ್ತಿ ಗೆದ್ದುಕೊಂಡರು. ಕೇರಳದ ಮೊಹಮ್ಮದ್ ಆಸಿಮ್ ಪುರುಷರ ವಿಭಾಗದ ವೈಯಕ್ತಿಕ ಚಾಂಪಿಯನ್ ಎನಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.