ADVERTISEMENT

ಬ್ಯಾಡ್ಮಿಂಟನ್‌ ರ‍್ಯಾಂಕಿಂಗ್: ದಾಖಲೆ ಬರೆದ ಕೆಂಟೊ

ರಾಯಿಟರ್ಸ್
Published 28 ಸೆಪ್ಟೆಂಬರ್ 2018, 15:13 IST
Last Updated 28 ಸೆಪ್ಟೆಂಬರ್ 2018, 15:13 IST
ಕೆಂಟೊ ಮೊಮೊಟಾ
ಕೆಂಟೊ ಮೊಮೊಟಾ   

ನ್ಯಾನ್‌ಜಿಂಗ್‌: ವಿಶ್ವ ಚಾಂಪಿಯನ್‌ ಕೆಂಟೊ ಮೊಮೊಟಾ ಅವರು ಶುಕ್ರವಾರ ಬಿಡಬ್ಲ್ಯುಎಫ್‌ ಪ್ರಕಟಿಸಿರುವ ಸಿಂಗಲ್ಸ್‌ ವಿಭಾಗದ ವಿಶ್ವ ರ‍್ಯಾಂಕಿಂಗ್‌ನಲ್ಲಿ ಅಗ್ರಸ್ಥಾನಕ್ಕೇರಿದ್ದಾರೆ.

ಇದರೊಂದಿಗೆ ಈ ಸಾಧನೆ ಮಾಡಿದ ಜಪಾನ್‌ನ ಮೊದಲ ಆಟಗಾರ ಎಂಬ ಹೆಗ್ಗಳಿಕೆ ತಮ್ಮದಾಗಿಸಿಕೊಂಡಿದ್ದಾರೆ.

24 ವರ್ಷ ವಯಸ್ಸಿನ ಕೆಂಟೊ, ಈ ವರ್ಷದ ಮಾರ್ಚ್‌ ಮತ್ತು ಏಪ್ರಿಲ್‌ನಲ್ಲಿ ನಡೆದಿದ್ದ ಹಲವು ಟೂರ್ನಿಗಳಲ್ಲಿ ಪ್ರಶಸ್ತಿ ಗೆದ್ದಿದ್ದರು. ಮಲೇಷ್ಯಾ ಹಾಗೂ ಚೀನಾ ಓಪನ್‌ ಟೂರ್ನಿಗಳಲ್ಲಿ ರನ್ನರ್‌ ಅಪ್‌ ಸಾಧನೆ ಮಾಡಿದ್ದರು.

ADVERTISEMENT

ಮೂರನೇ ಸ್ಥಾನಕ್ಕೆ ಕುಸಿದ ವಿಕ್ಟರ್‌: ಈ ಮೊದಲು ಅಗ್ರಸ್ಥಾನದಲ್ಲಿದ್ದ ವಿಕ್ಟರ್‌ ಆ್ಯಕ್ಸಲ್‌ಸನ್‌ ಮೂರನೇ ಸ್ಥಾನಕ್ಕೆ ಇಳಿದಿದ್ದಾರೆ. ಡೆನ್ಮಾರ್ಕ್‌ನ ವಿಕ್ಟರ್‌ 2017ರ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಪ್ರಶಸ್ತಿ ಜಯಿಸಿದ್ದರು. ಗಾಯದ ಕಾರಣ ಈ ವರ್ಷ ನಡೆದಿದ್ದ ಕೆಲ ಟೂರ್ನಿಗಳಿಂದ ಹಿಂದೆ ಸರಿದಿದ್ದರು. ಚೀನಾದ ಶಿ ಯೂಕಿ ಎರಡನೇ ಸ್ಥಾನಕ್ಕೆ ಬಡ್ತಿ ಹೊಂದಿದ್ದಾರೆ.

ಭಾರತದ ಕಿದಂಬಿ ಶ್ರೀಕಾಂತ್‌ ಎರಡು ಸ್ಥಾನ ಮೇಲೇರಿದ್ದು ಆರನೇ ಸ್ಥಾನ ಗಳಿಸಿದ್ದಾರೆ. ಮಲೇಷ್ಯಾದ ಲೀ ಚೊಂಗ್‌ ವೀ ಐದನೇ ಸ್ಥಾನದಲ್ಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.