ADVERTISEMENT

ಖೇಲ್ ರತ್ನ ಪ್ರಶಸ್ತಿಗೆ ರೋಹಿತ್, ವಿನೇಶಾ ಸೇರಿದಂತೆ ನಾಲ್ವರ ಹೆಸರು ಶಿಫಾರಸು

​ಪ್ರಜಾವಾಣಿ ವಾರ್ತೆ
Published 18 ಆಗಸ್ಟ್ 2020, 12:20 IST
Last Updated 18 ಆಗಸ್ಟ್ 2020, 12:20 IST
ರೋಹಿತ್ ಶರ್ಮಾ -ವಿನೇಶಾ
ರೋಹಿತ್ ಶರ್ಮಾ -ವಿನೇಶಾ    
""

ನವದೆಹಲಿ: ರಾಜೀವ್ ಗಾಂಧಿ ಖೇಲ್‌ರತ್ನ ಪ್ರಶಸ್ತಿಗೆ ಕ್ರಿಕೆಟಿಗ ರೋಹಿತ್ ಶರ್ಮಾ, ಕುಸ್ತಿಪಟು ವಿನೇಶಾ ಪೋಗಟ್ ಸೇರಿದಂತೆ ನಾಲ್ವರು ಕ್ರೀಡಾಪಟುಗಳ ಹೆಸರು ಶಿಫಾರಸು ಮಾಡಲಾಗಿದೆ.

ಟೇಬಲ್ ಟೆನ್ನಿಸ್ ಪಟು ಮನೀಕಾ ಬಾತ್ರಾ ಮತ್ತು ಪ್ಯಾರಾಲಿಂಪಿಕ್ ಚಿನ್ನದ ಪದಕ ವಿಜೇತ ಹೈಜಂಪರ್ ಮರಿಯಪ್ಪನ್ ತಂಗವೇಲು ಅವರ ಹೆಸರು ಕೂಡಾ ಈ ಪಟ್ಟಿಯಲ್ಲಿದೆ.

ಮರಿಯಪ್ಪನ್ ತಂಗವೇಲು ಮತ್ತು ಮನೀಕಾ ಬಾತ್ರಾ

ಈ ಪ್ರಶಸ್ತಿಗೆನಾಲ್ವರು ಕ್ರೀಡಾಪಟುಗಳು ಶಿಫಾರಸುಗೊಳ್ಳುತ್ತಿರುವುದು ಇದು ಎರಡನೇ ಬಾರಿ. 2016ರಲ್ಲಿ ಬ್ಯಾಡ್ಮಿಂಟನ್ ಪಟು ಪಿ.ವಿ.ಸಿಂಧು, ಜಿಮ್ನಾಸ್ಟಿಕ್‌ ತಾರೆ‌ ದೀಪಾ ಕರ್ಮಾಕರ್‌, ಶೂಟಿಂಗ್‌ ಪಟು ಜಿತು ರಾಯ್‌ ಹಾಗೂ ಕುಸ್ತಿಪಟು ಸಾಕ್ಷಿ ಮಲಿಕ್‌ ಅವರಿಗೆ ಈ ಪ್ರಶಸ್ತಿ ನೀಡಲಾಗಿತ್ತು.

ADVERTISEMENT

33 ವರ್ಷದ ರೋಹಿತ್‌ ಅವರು ಸಚಿನ್ ತೆಂಡೂಲ್ಕರ್‌, ಮಹೇಂದ್ರ ಸಿಂಗ್‌ ಧೋನಿ ಹಾಗೂ ವಿರಾಟ್‌ ಕೊಹ್ಲಿ ಅವರ ಬಳಿಕ ಖೇಲ್‌ರತ್ನ ಪ್ರಶಸ್ತಿ ಪಡೆಯಲಿರುವ ನಾಲ್ಕನೇ ಕ್ರಿಕೆಟಿಗ ಎಂಬ ಹಿರಿಮೆಗೆ ಪಾತ್ರವಾಗುತ್ತಿದ್ದಾರೆ. ತೆಂಡೂಲ್ಕರ್‌ ಅವರಿಗೆ 1998ರಲ್ಲಿ ಪ್ರಶಸ್ತಿ ಸಂದಿತ್ತು. 2007ರಲ್ಲಿ ಧೋನಿ ಅವರಿಗೆ, 2018ರಲ್ಲಿ ಕೊಹ್ಲಿ ಹಾಗೂ ವೇಟ್‌ಲಿಫ್ಟರ್‌ ಮೀರಾಬಾಯಿ ಚಾನು ಜಂಟಿಯಾಗಿ ಈ ಪ್ರಶಸ್ತಿ ಪಡೆದಿದ್ದರು.

ಕ್ರಿಕೆಟಿಗ ವೀರೇಂದ್ರ ಸೆಹ್ವಾಗ್‌ ಹಾಗೂ ಹಾಕಿ ದಿಗ್ಗಜ ಸರ್ದಾರ್‌ ಸಿಂಗ್‌ ಅವರನ್ನೊಳಗೊಂಡ ಆಯ್ಕೆ ಸಮಿತಿ ಸಭೆಯು ಇಲ್ಲಿಯ ಭಾರತ ಕ್ರೀಡಾ ಪ್ರಾಧಿಕಾರ (ಸಾಯ್‌) ಕಚೇರಿಯಲ್ಲಿ ಮಂಗಳವಾರ ನಡೆಯಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.