ADVERTISEMENT

ಖೇಲೊ ಇಂಡಿಯಾ: ಜೈನ್ ವಿವಿಗೆ ಉತ್ತಮ ಆರಂಭ

​ಪ್ರಜಾವಾಣಿ ವಾರ್ತೆ
Published 20 ಫೆಬ್ರುವರಿ 2024, 16:43 IST
Last Updated 20 ಫೆಬ್ರುವರಿ 2024, 16:43 IST
ಶುಭ್ರಂತ್ ಪತ್ರಾ
ಶುಭ್ರಂತ್ ಪತ್ರಾ   

ಬೆಂಗಳೂರು: ಇಲ್ಲಿನ ಜೈನ್‌ ವಿಶ್ವವಿದ್ಯಾಲಯ ತಂಡ ಖೇಲೊ ಇಂಡಿಯಾ ಯೂನಿವರ್ಸಿಟಿ ಗೇಮ್ಸ್‌ನ  ನಾಲ್ಕು ಚಿನ್ನ, ಒಂದು ಬೆಳ್ಳಿ ಮತ್ತು ಎರಡು ಕಂಚಿನ ಪದಕಗಳನ್ನು ಗೆದ್ದುಕೊಂಡು ಮೊದಲ ಎರಡು ದಿನ ಮೇಲುಗೈ ಸಾಧಿಸಿತು.

ಪುರುಷರ 200 ಮೀಟರ್ ಬಟರ್‌ಫ್ಲೈ ಈಜು ಸ್ಪರ್ಧೆಯಲ್ಲಿ ಶುಭ್ರಾಂತ್ ಪಾತ್ರಾ ಚಿನ್ನ ಗೆದ್ದರು, ಚಂಡೀಗಢ ವಿಶ್ವವಿದ್ಯಾಲಯದ ಹರ್ಷ್ ಸರೋಹಾ ಅವರಿಗಿಂತ ಅರ್ಧ ಸೆಕೆಂಡು ಮುಂದಿದ್ದರು. ನಂತರ ಅವರು ತಮ್ಮ ತಂಡ 4×100 ಮೀಟರ್ ಫ್ರೀಸ್ಟೈಲ್ ಸ್ಪರ್ಧೆಯಲ್ಲಿ ಪ್ರಾಬಲ್ಯ ಸಾಧಿಸಲು ಸಹಾಯ ಮಾಡಿದರು.

ಪುರುಷರ ಬ್ಯಾಸ್ಕೆಟ್‌ಬಾಲ್ ಸ್ಪರ್ಧೆಯಲ್ಲಿ ಜೈನ್ ವಿಶ್ವವಿದ್ಯಾಲಯ ಸೆಮಿಫೈನಲ್ ಪ್ರವೇಶಿಸಿದೆ.  ಮಹಿಳೆಯರ ತಂಡ ಫೈನಲ್‌ನಲ್ಲಿ ಮದ್ರಾಸ್ ವಿಶ್ವವಿದ್ಯಾಲಯವನ್ನು ಎದುರಿಸಲಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.