ಮ್ಯಾಡ್ರಿಡ್: ಭಾರತದ ಕಿದಂಬಿ ಶ್ರೀಕಾಂತ್ ಅವರು ಮ್ಯಾಡ್ರಿಡ್ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್‌ಫೈನಲ್‌ಗೆ ಲಗ್ಗೆಯಿಟ್ಟಿದ್ದಾರೆ.
ಇಲ್ಲಿ ನಡೆಯುತ್ತಿರುವ ಟೂರ್ನಿಯ ಪುರುಷರ ಸಿಂಗಲ್ಸ್ ವಿಭಾಗದ ಎರಡನೇ ಸುತ್ತಿನ ಪಂದ್ಯದಲ್ಲಿ ಶ್ರೀಕಾಂತ್ 21-15, 21-12ರಿಂದ ಭಾರತದವರೇ ಆದ ಬಿ.ಸಾಯಿ ಪ್ರಣೀತ್ ಅವರನ್ನು ಪರಾಭವಗೊಳಿಸಿದರು.
ವಿಶ್ವ ರ‍್ಯಾಂಕಿಂಗ್‌ನಲ್ಲಿ 21ನೇ ಸ್ಥಾನದಲ್ಲಿರುವ ಶ್ರೀಕಾಂತ್ 49ನೇ ಕ್ರಮಾಂಕದ ಆಟಗಾರನ ಎದುರು ಸುಲಭ ಜಯ ಸಂಪಾದಿಸಿದರು.
ಶ್ರೀಕಾಂತ್ ಅವರಿಗೆ ಎಂಟರಘಟ್ಟದಲ್ಲಿ ಕಠಿಣ ಸವಾಲು ಎದುರಾಗಿದೆ. ಅಗ್ರ ಶ್ರೇಯಾಂಕದ, ಜಪಾನ್ ಆಟಗಾರ ಕೆಂಟಾ ನಿಶಿಮೊಟೊ ಅವರ ಎದುರು ಸೆಣಸಬೇಕಿದೆ.
ನಿಶಿಮೊಟೊ ಅವರಿಗೆ ಎರಡನೇ ಸುತ್ತಿನಲ್ಲಿ ವಾಕ್‌ಓವರ್ ಲಭಿಸಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.