ಇಕ್ಸಾನ್ ಸಿಟಿ (ಕೊರಿಯಾ): ಅನಿರೀಕ್ಷಿತ ಫಲಿತಾಂಶದಲ್ಲಿ ಮೂರನೇ ಶ್ರೇಯಾಂಕದ ಆಟಗಾರ ಚಿ ಯು ಜೆನ್ ಅವರಿಗೆ ಗುರುವಾರ ಆಘಾತ ನೀಡಿದ ಭಾರತದ ಕಿರಣ್ ಜಾರ್ಜ್ ಅವರು ಕೊರಿಯಾ ಮಾಸ್ಟರ್ಸ್ ಬ್ಯಾಡ್ಮಿಂಟನ್ ಟೂರ್ನಿಯ ಪುರುಷರ ಸಿಂಗಲ್ಸ್ ಕ್ವಾರ್ಟರ್ಫೈನಲ್ ಪ್ರವೇಶಿಸಿದರು.
ಮೂರು ಗೇಮ್ಗಳನ್ನು ಕಂಡ ಎರಡನೇ ಸುತ್ತಿನ ಪಂದ್ಯದಲ್ಲಿ ಕಿರಣ್ 21–7, 19–21, 21–17 ರಿಂದ ವಿಶ್ವ ಕ್ರಮಾಂಕದ 31ನೇ ಸ್ಥಾನದಲ್ಲಿರುವ ಚೀನಾ ತೈಪೆ ಆಟಗಾರನನ್ನು ಹಿಮ್ಮೆಟ್ಟಿಸಿದರು. ಪಂದ್ಯ ಒಂದೂಕಾಲು ಗಂಟೆ ನಡೆಯಿತು.
ವಿಶ್ವ ಕ್ರಮಾಂಕದಲ್ಲಿ 44ನೇಸ್ಥಾನದಲ್ಲಿರುವ ಕಿರಣ್ ಎಂಟರ ಘಟ್ಟದ ಪಂದ್ಯದಲ್ಲಿ ಜಪಾನ್ನ ತಕುಮಾ ಒಬಯಾಶಿ ವಿರುದ್ಧ ಆಡಲಿದ್ದಾರೆ.
ಕಿರಣ್, ಈ ಟೂರ್ನಿಯಲ್ಲಿ ಭಾಗವಹಿಸಿರುವ ಭಾರತದ ಏಕೈಕ ಆಟಗಾರನಾಗಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್ಬುಕ್ ಮತ್ತು ಇನ್ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.