ADVERTISEMENT

ಕೊಡವ ಕುಟುಂಬಗಳ ನಡುವಿನ ಹಾಕಿ ಟೂರ್ನಿ: ಕಂಗಂಡ, ಪೊಂಜಂಡಕ್ಕೆ ಜಯ

​ಪ್ರಜಾವಾಣಿ ವಾರ್ತೆ
Published 11 ಏಪ್ರಿಲ್ 2024, 23:30 IST
Last Updated 11 ಏಪ್ರಿಲ್ 2024, 23:30 IST
ನಾಪೋಕ್ಲುವಿನ ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡವ ಕುಟುಂಬಗಳ ಹಾಕಿ ನಡುವಿನ ಟೂರ್ನಿಯ ಗುರುವಾರದ ಪಂದ್ಯದಲ್ಲಿ ಮಚ್ಚಾರಂಡ ಮತ್ತು ಕಂಗಂಡ ತಂಡಗಳ ನಡುವಿನ ಸೆಣೆಸಾಟ
ನಾಪೋಕ್ಲುವಿನ ಚೆರಿಯಪರಂಬುವಿನ ಜನರಲ್ ಕೆ.ಎಸ್.ತಿಮ್ಮಯ್ಯ ಕ್ರೀಡಾಂಗಣದಲ್ಲಿ ಕೊಡವ ಕುಟುಂಬಗಳ ಹಾಕಿ ನಡುವಿನ ಟೂರ್ನಿಯ ಗುರುವಾರದ ಪಂದ್ಯದಲ್ಲಿ ಮಚ್ಚಾರಂಡ ಮತ್ತು ಕಂಗಂಡ ತಂಡಗಳ ನಡುವಿನ ಸೆಣೆಸಾಟ   

ನಾಪೋಕ್ಲು (ಕೊಡಗು ಜಿಲ್ಲೆ): ಕಂಗಂಡ, ಪೊಂಜಂಡ, ಮೂಕಳೇರ, ಕೊಟ್ಟಂಗಡ, ತೀತಿಮಾಡ ತಂಡಗಳು ಕುಂಡ್ಯೋಳಂಡ ಕಪ್‌ಗಾಗಿ ನಡೆಯುತ್ತಿರುವ ಹಾಕಿ ಟೂರ್ನಿಯಲ್ಲಿ ಗುರುವಾರ ಜಯ ದಾಖಲಿಸಿದವು.

ಚೆರಿಯಪರಂಬುವಿನ ಜನರಲ್ ತಿಮ್ಮಯ್ಯ ಕ್ರೀಡಾಂಗಣದಲ್ಲಿ, ಪೆನಾಲ್ಟಿ ಶೂಟೌಟ್‌ನಲ್ಲಿ ಎದುರಾಳಿ ತಂಡಗಳ ವಿರುದ್ಧ ಪ್ರಾಬಲ್ಯ ಮೆರೆದವು.

ನಾಪಂಡ ತಂಡದವರು ಐದಂಡ ವಿರುದ್ಧ 5-1ರಿಂದ, ಮಾತ್ರಂಡ ತಂಡದವರು ಅಜ್ಜಟ್ಟಿರ ವಿರುದ್ಧ 4-0 ಗೋಲುಗಳಿಂದ ಜಯಗಳಿಸಿದರೆ, ಚೆಂದಂಡ ತಂಡವು ಮಂಡೆಯಂಡ ವಿರುದ್ಧ, ಚಟ್ಟಂಗಡ ತಂಡವು ಕಾರೇರ ವಿರುದ್ಧ, ಕೊಂಗೆಟಿರ ತಂಡವು ಮಲ್ಲಂಡ ವಿರುದ್ಧ 4-0 ಅಂತರದಿಂದ ಭರ್ಜರಿ ಗೆಲುವು ಸಾಧಿಸಿದವು.

ADVERTISEMENT

ಇನ್ನುಳಿದ ಪಂದ್ಯಗಳಲ್ಲಿ ಅಪ್ಪಚೆಟ್ಟೋಳಂಡ ಶಿವಚಾಳಿಯಂಡ ವಿರುದ್ದ 2-0ರಲ್ಲಿ, ಸೋಮಯಂಡ ನಿಡುಮಂಡ ವಿರುದ್ದ 3-0 ರಲ್ಲಿ, ಮಚ್ಚಾರಂಡ ಶಾಂತೆಯಂಡ ವಿರುದ್ಧ 2-1ರಲ್ಲಿ ಜಯಗಳಿಸಿದವು.

ಪಾಂಡಂಡ ತಂಡದವರು ಕಲ್ಲಂಗಡ ವಿರುದ್ಧ 2-1 ಗೋಲಿನಿಂದ, ಬಟ್ಟಿರ ವಿರುದ್ಧ ಮಲ್ಲಜಿರ 3-0 ರಲ್ಲಿ, ಅಲ್ಲಪಂಡ ತಂಡವು ಚಂಗುಲಂಡ ವಿರುದ್ಧ 3-1ರಲ್ಲಿ, ಅಲ್ಲಾರಂಡ ಪಟ್ಟ ತಂಡದವರು ಚರುವಂಡ ವಿರುದ್ಧ 2-1ರಲ್ಲಿ, ಪೆಮ್ಮಂಡ ತಂಡವು ಮುಕ್ಕಾಟಿರ (ಕುಂಜಿಲಗೇರಿ) ವಿರುದ್ಧ 3- 0 ಗೋಲುಗಳಿಂದ ಗೆಲುವು ಸಾಧಿಸಿದವು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.