ಇಂಚಿಯಾನ್, ದಕ್ಷಿಣ ಕೊರಿಯಾ: ಕಳೆದ ವಾರ ಚೀನಾ ಓಪನ್‌ನಲ್ಲಿ ಬೇಗ ನಿರ್ಗಮಿಸಿದ್ದ ವಿಶ್ವ ಚಾಂಪಿಯನ್ ಪಿ.ವಿ.ಸಿಂಧು, ಮಂಗಳವಾರ ಆರಂಭವಾಗುವ ಕೊರಿಯಾ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಉತ್ತಮ ಸಾಧನೆ ತೋರಿ, ಆ ನಿರಾಸೆ ಬೇಗ ಮರೆಯುವ ಗುರಿ ಹೊಂದಿದ್ದಾರೆ.
ಒಲಿಂಪಿಕ್ ಬೆಳ್ಳಿ ವಿಜೇತೆಯೂ ಆಗಿರುವ ಸಿಂಧು, ಚೀನಾ ಓಪನ್‌ನಲ್ಲಿ ಥಾಯ್ಲೆಂಡ್‌ನ ಆಟಗಾರ್ತಿ ಪೊರ್ನ್‌ಪವೀ ಚೊಚುವಾಂಗ್ ಅವರಿಗೆ ಎರಡನೇ ಸುತ್ತಿನಲ್ಲಿ ಮಣಿದಿದ್ದರು. 26 ವರ್ಷದ ಸಿಂಧು, 2017ರಲ್ಲಿ ಕೊರಿಯಾ ಓಪನ್‌ನಲ್ಲಿ ಚಾಂಪಿಯನ್ ಆಗಿದ್ದರು.
ಲಂಡನ್ ಒಲಿಂಪಿಕ್ಸ್‌ನಲ್ಲಿ (2012) ಕಂಚಿನ ಪಕದ ಗೆದ್ದುಕೊಂಡಿದ್ದ ಸೈನಾ ನೆಹ್ವಾಲ್ ಈ ವರ್ಷ ಅಂಥ ಯಶಸ್ಸು ಕಾಣುತ್ತಿಲ್ಲ. ಇಲ್ಲಿ ಎಂಟನೇ ಶ್ರೇಯಾಂಕ ಪಡೆದಿರುವ ಅವರು ಯಶಸ್ಸಿನ ಹಾದಿಗೆ ಮರಳುವ ತವಕದಲ್ಲಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.