ನವದೆಹಲಿ: ಮಾಜಿ ವಿಶ್ವ ಚಾಂಪಿಯನ್ ಬಾಕ್ಸರ್ ವ್ಲಾದಿಮಿರ್ ಕ್ಲಿಚ್‌ಕೊ ಮತ್ತು ಚೆಸ್ ಆಟಗಾರ ಗ್ಯಾರಿ ಕ್ಯಾಸ್ಪರೊವ್ ಅವರು ಉಕ್ರೇನ್ ಮೇಲಿನ ರಷ್ಯಾ ಆಕ್ರಮಣವನ್ನು ಖಂಡಿಸಿದ್ದಾರೆ. ಉಕ್ರೇನ್ ಈ ಸಂದಿಗ್ದ ಪರಿಸ್ಥಿತಿಯನ್ನು ದಿಟ್ಟವಾಗಿ ಎದುರಿಸಲಿದೆ ಎಂದು ಇಬ್ಬರೂ ನುಡಿದಿದ್ದಾರೆ.
ಒಲಿಂಪಿಕ್ಸ್‌ನಲ್ಲಿ ಚಿನ್ನದ ಪದಕ ಗೆದ್ದುಕೊಂಡಿರುವ ಮತ್ತು ಹೆವಿವೇಟ್ ಚಾಂಪಿಯನ್‌ಷಿಪ್‌ನಲ್ಲಿ ಎರಡು ಬಾರಿ ಪ್ರಶಸ್ತಿ ಗಳಿಸಿರುವ 45 ವರ್ಷದ ಬಾಕ್ಸರ್ ಕ್ಲಿಚ್‌ಕೊ ‘ಉಕ್ರೇನ್ ಪ್ರಬಲವಾಗಿದ್ದು ರಾಜಧಾನಿ ಕೀವ್ ಒಳಗೊಂಡಂತೆ ಬಲಿಷ್ಠ ನಗರಗಳನ್ನು ಒಳಗೊಂಡಿದೆ. ಇಲ್ಲಿನವರ ಮನೋಬಲವು ಗೆಲುವು ತಂದುಕೊಡಲಿದೆ‘ ಎಂದು ಟ್ವೀಟ್ ಮಾಡಿದ್ದಾರೆ.
2014ರಲ್ಲಿ ರಷ್ಯಾ ತೊರೆದಿರುವ ಕ್ಯಾಸ್ಪರೊವ್ ಈಗ ರಾಜಕಾರಣಿಯಾಗಿದ್ದು ರಷ್ಯಾ ಅಧ್ಯಕ್ಷ ವ್ಲಾದಿಮಿರ್ ಪುಟಿನ್ ಮೇಲೆ ಸತತ ವಾಗ್ದಾಳಿ ನಡೆಸುತ್ತಿದ್ದಾರೆ. ‘ವ್ಯವಹಾರದಲ್ಲಿ ಮಾಡಿರುವ ಅಕ್ರಮ ಮತ್ತು ಭ್ರಷ್ಟಾಚಾರದಿಂದ ಗಳಿಸಿರುವ ಹಣದಿಂದ ಪುಟಿನ್ ಯುದ್ಧ ಸಾಮಗ್ರಿಗಳನ್ನು ಸಂಗ್ರಹಿಸಿದ್ದಾರೆ’ ಎಂದು ಟ್ವಿಟರ್ ಮೂಲಕ ಕಿಡಿಕಾರಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.