ADVERTISEMENT

ಕಿಂಗ್‍ಫಿಷರ್ ಅಲ್ಟ್ರಾ ಡರ್ಬಿ ಬೆಂಗಳೂರು: ಲಗಾರ್ಡ್‌ ಮುಡಿಗೆ ಕಿರೀಟ

‘ಸಾವರಿನ್ ಲೆಜೆಂಡ್’ಗೆ 2ನೇ ಸ್ಥಾನ

​ಪ್ರಜಾವಾಣಿ ವಾರ್ತೆ
Published 26 ಜನವರಿ 2021, 18:54 IST
Last Updated 26 ಜನವರಿ 2021, 18:54 IST
ಬೆಂಗಳೂರು ಟರ್ಫ್‌ ಕ್ಲಬ್‌ನಲ್ಲಿ ಮಂಗಳವಾರ ನಡೆದ ಕಿಂಗ್‌ಫಿಷರ್ ಅಲ್ಟ್ರಾ ಡರ್ಬಿ ರೇಸ್‌ನಲ್ಲಿ ಪ್ರಶಸ್ತಿ ಗೆದ್ದ ಲಗಾರ್ಡ್‌ ಅಶ್ವದ ಟ್ರೇನರ್ ಎಸ್‌.ಎಸ್‌. ಅಟ್ಟೊಲಾಹಿ, ಜಾಕಿ ಅಕ್ಷಯ್ ಕುಮಾರ್, ಕೆ.ಎನ್. ಧುಂಜಿಭಾಯ್ (ಲಗಾರ್ಡ್‌ ಸಹಮಾಲೀಕ), ಬಿಟಿಸಿ ಅಧ್ಯಕ್ಷ ಡಿ. ವಿನೋದ್ ಶಿವಪ್ಪ, ಗುರುಪ್ರೀತ್ ಸಿಂಗ್ (ಯುಬಿ ಲಿಮಿಟೆಡ್ ಮಾರ್ಕೆಟಿಂಗ್ ಮುಖ್ಯಸ್ಥ), ರಾಮಶೇಷು ಎಯುನ್ನಿ (ಲಗಾರ್ಡ್‌ನ ಸಹಮಾಲೀಕ), ದೇವವ್ರತ ಮುಖರ್ಜಿ (ಯುಬಿ ಲಿಮಿಟೆಡ್ ಸಿಎಂಒ), ಪಿ. ಪ್ರಭಾಕರ್ ರೆಡ್ಡಿ (ಲಗಾರ್ಡ್‌ ಸಹಮಾಲೀಕ) ಇದ್ದಾರೆ –ಪ್ರಜಾವಾಣಿ ಚಿತ್ರ

ಬೆಂಗಳೂರು: ಮೊದಲೇ ನಿರೀಕ್ಷಿಸಿದಂತೆ ಸುಲೈಮಾನ್ ಅಟ್ಟೊಲಾಹಿ ತರಬೇತಿಯಲ್ಲಿ ಪಳಗಿರುವ ಲಗಾರ್ಡ್‌ ಮಂಗಳವಾರ ನಡೆದ ಕಿಂಗ್‌ಫಿಷರ್ ಅಲ್ಟ್ರಾ ಡರ್ಬಿ ರೇಸ್‌ ಪ್ರಶಸ್ತಿಯನ್ನು ಗೆದ್ದುಕೊಂಡಿತು.

ಜಾಕಿ ಅಕ್ಷಯ್‍ಕುಮಾರ್ ಸವಾರಿ ಮಾಡಿದ ಲಗಾರ್ಡ್‌ ಅಶ್ವವು ಈ ಗೆಲುವಿನೊಂದಿಗೆ ಕ್ಲಾಸಿಕ್ ಹ್ಯಾಟ್ರಿಕ್ ಸಾಧನೆ ಮಾಡಿತು. ಈಗಾಗಲೇ ಬೆಂಗಳೂರು ಮತ್ತು ಮುಂಬೈ 2000 ಗಿನ್ನೀಸ್ ರೇಸ್‌ಗಳನ್ನೂ ಲಗಾರ್ಡ್‌ ಗೆದ್ದಿತ್ತು.

2400 ಮೀಟರ್ಸ್ ದೂರದ ಈ ಡರ್ಬಿಯಲ್ಲಿ 2 ನಿಮಿಷ 32.21 ಸೆಕೆಂಡುಗಳಲ್ಲಿ ‘ಲಗಾರ್ಡ್’ ಜಯ ಸಾಧಿಸಿದೆ. ಈ ಗೆಲುವಿನೊಂದಿಗೆ ಸುಮಾರು ಎರಡು ಲಕ್ಷ ರೂಪಾಯಿ ಮೌಲ್ಯದ ಸುಂದರ ಟ್ರೋಫಿಯೊಂದಿಗೆ, ₹.77,56,154 ಗಳನ್ನು ‘ಲಗಾರ್ಡ್’ ತನ್ನದಾಗಿಸಿಕೊಂಡಿದೆ.

ADVERTISEMENT

ಲಗಾರ್ಡ್‌ ಗೆಲುವು ನಿರೀಕ್ಷಿತವೇ ಆಗಿದ್ದರೂ, ಬೆಟ್ಟಿಂಗ್ ನಿಟ್ಟಿನಲ್ಲಿ ಮುಕ್ತ ರೇಸ್ ಆಗಿತ್ತು. ಲಗಾರ್ಡನ ಸ್ಟೇಬಲ್‍ಮೇಟ್ 5 ರೇಸ್‍ಗಳಲ್ಲಿ ಅಜೇಯವಾಗಿದ್ದ ‘ಫಾರೆಸ್ಟ್ ಫ್ಲೇಮ್’ 5/2 ಆಸುಪಾಸಿನ ಫೇವರಿಟ್ ಆಗಿದ್ದರೆ, ಲಗಾರ್ಡ್ ಎರಡನೇ ಫೇವರಿಟ್ ಆಗಿ 3 ರಿಂದ 7/2 ಆಸುಪಾಸಿನ ಬೇಡಿಕೆಯಲ್ಲಿತ್ತು.

ಲಗಾರ್ಡ್‌ನ ಈ ಗೆಲುವು ಎಂದಿನ ಓಟದ ವೈಖರಿಯಾಗಿರದೆ ಭಿನ್ನ ರೀತಿಯದಾಗಿತ್ತು. 9 ಸ್ಪರ್ಧಿಗಳ ಡರ್ಬಿ ರೇಸ್‍ಗೆ ಚಾಲನೆ ದೊರೆತ ಕೂಡಲೇ ಲಗಾರ್ಡ್ ಮುನ್ನುಗ್ಗಿ ಲೀಡ್ ಪಡೆದು ‘ಸ್ಟಾರ್ಟ್ ಟು ಫಿನಿಷ್’ ಗೆಲುವು ಸಾಧಿಸಿತು.

ಕೊನೆಯ 400 ಮೀಟರ್ಸ್ ನೇರ ಓಟದಲ್ಲಿ ‘ಲಗಾರ್ಡ್’ ತುಸು ಒತ್ತಡದಲ್ಲಿ ಇದ್ದಂತೆ ಕಂಡಿತು. ಆದರೆ, ಜಾಕಿ ಅಕ್ಷಯ್‍ಕುಮಾರ್ ಧೃತಿಗೆಡದೆ ‘ಲಗಾರ್ಡ್’ಗೆ 1 1/2 ಲೆಂಗ್ತ್‌ಗಳ ಗೆಲುವು ಸಂಪಾದಿಸಿಕೊಡುವಲ್ಲಿ ಯಶಸ್ವಿ ಆದರು. ಎರಡನೇ ಸ್ಥಾನಕ್ಕಾಗಿ ನಡೆದ ತೀವ್ರ ಪೈಪೋಟಿಯಲ್ಲಿ ‘ಸಾವರಿನ್ ಲೆಜೆಂಡ್’ ‘ಫಾರೆಸ್ಟ್ ಫ್ಲೇರ್’ನ್ನು ಕೂದಲೆಳೆ ಅಂತರದಿಂದ ಮೂರನೇ ಸ್ಥಾನಕ್ಕೆ ತಳ್ಳಿತು. ‘ಫ್ಲಾರೆಸ್ಟ್ ಫ್ಲೇಮ್’ ನ 2 1/2 ಲೆಂಗ್ತ್ ಹಿಂದೆ ಓಡಿ ‘ಆಂಟೀಸ್’ ನಾಲ್ಕನೇ ಸ್ಥಾನಕ್ಕೆ ತೃಪ್ತಿಪಟ್ಟಿತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.