ADVERTISEMENT

ನೆಟ್ಟಕಲ್ಲಪ್ಪ ಈಜುಕೇಂದ್ರಕ್ಕೆ ‘ಸ್ವಿಮ್‌ ಅ್ಯಂಡ್ ಪ್ಲೇಬಾಲ್’ ಯೋಜನೆ

​ಪ್ರಜಾವಾಣಿ ವಾರ್ತೆ
Published 12 ಡಿಸೆಂಬರ್ 2023, 16:17 IST
Last Updated 12 ಡಿಸೆಂಬರ್ 2023, 16:17 IST
ಸಾಂದರ್ಭಿಕ ಚಿತ್ರ
ಸಾಂದರ್ಭಿಕ ಚಿತ್ರ   

ಬೆಂಗಳೂರು: ವಾಟರ್‌ಪೋಲೊ ಕ್ರೀಡೆಯನ್ನು ಉನ್ನತಮಟ್ಟದಲ್ಲಿ ಅಭಿವೃದ್ಧಿಪಡಿಸಲು ಭಾರತ ಈಜು ಫೆಡರೇಷನ್ ಇದೇ ಮೊದಲ ಬಾರಿಗೆ  ಆರಂಭಿಸಿರುವ ‘ಸ್ವಿಮ್ ಅ್ಯಂಡ್ ಪ್ಲೇಬಾಲ್‘ ಯೋಜನೆ ಜಾರಿಗೆ ನಗರದ ನೆಟ್ಟಕಲ್ಲಪ್ಪ ಅಕ್ವಾಟಿಕ್ ಸೆಂಟರ್ (ಎನ್‌ಎಸಿ) ಆಯ್ಕೆಯಾಗಿದೆ.

ಈ ಯೋಜನೆಗೆ ಆಯ್ಕೆಯಾದ ಮೊಟ್ಟಮೊದಲ ಈಜುಕೇಂದ್ರವೆಂಬ ಹೆಗ್ಗಳಿಕೆಗೆ ಎನ್‌ಎಸಿ ಪಾತ್ರವಾಗಿದೆ. ಪುಣೆಯ ಡೆಕ್ಕನ್ ಜಿಮ್‌ಖಾನಾದಲ್ಲಿ ಮಂಗಳವಾರ ನಡೆದ ಎಸ್‌ಎಫ್‌ಐ (ಭಾರತ ಈಜು ಫೆಡರೇಷನ್)  ಸಭೆಯಲ್ಲಿ ಈ ನಿರ್ಧಾರವನ್ನು ಪ್ರಕಟಿಸಲಾಯಿತು.

‘ಸಭೆಯಲ್ಲಿ ಭಾಗವಹಿಸಿದ್ದ ದೇಶದ ಬಹಳಷ್ಟು ಕ್ಲಬ್‌ಗಳು ಈ ಕಾರ್ಯಕ್ರಮವನ್ನು ತಮ್ಮದಾಗಿಸಿಕೊಳ್ಳಲು ಉತ್ಸುಕವಾಗಿದ್ದವು. ಇದರ ನಡುವೆ ಈ ಯೋಜನೆಯ ಜಾರಿಗೆ ನಮ್ಮ ಈಜುಕೇಂದ್ರವನ್ನು ಆಯ್ಕೆ ಮಾಡಿರುವುದು ಹೆಮ್ಮೆಯ ಸಂಗತಿ. ವಾಟರ್‌ ಪೋಲೊ ಕ್ರೀಡೆಯನ್ನು ಅಮೂಲಾಗ್ರವಾಗಿ ಅಭಿವೃದ್ಧಿಪಡಿಸುವ ಅವಕಾಶ ದೊರೆತಿದೆ. ಇದು ಭವಿಷ್ಯದಲ್ಲಿ ದಕ್ಷಿಣ ಭಾರತದ ಪ್ರತಿಭೆಗಳಿಗೆ ಹೆಚ್ಚು ಅನುಕೂಲವಾಗಲಿದೆ’ ಎಂದು ಎನ್‌ಎಸಿ ಮುಖ್ಯಸ್ಥ ವರುಣ್ ನಿಜವಾನ್ ‘ಪ್ರಜಾವಾಣಿ’ಗೆ ತಿಳಿಸಿದ್ದಾರೆ. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.