ಟೋಕಿಯೊ: ಜಪಾನ್‌ನ ಈಜುಪಟು ರಿಕಾಕೊ ಐಕಿ ಗುರುವಾರ ಮತ್ತೊಂದು ಸಾಧನೆ ಮಾಡಿದ್ದು ಮಹಿಳೆಯರ 100 ಮೀಟರ್ಸ್ ಫ್ರೀಸ್ಟೈಲ್‌ನಲ್ಲೂ ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದಾರೆ. ರಾಷ್ಟ್ರೀಯ ಚಾಂಪಿಯನ್‌ಷಿಪ್‌ನಲ್ಲಿ ಅವರು ಚಿನ್ನ ಗೆದ್ದು ಟೋಕಿಯೊ ಟಿಕೆಟ್ ಗಳಿಸಿದರು.
ಲುಕೇಮಿಯಾಗೆ ಚಿಕಿತ್ಸೆ ಪಡೆದುಕೊಂಡಿದ್ದ ರಿಕಾಕೊ ಎಂಟು ತಿಂಗಳ ಹಿಂದಷ್ಟೇ ಸ್ಪರ್ಧಾ ಕಣಕ್ಕೆ ಇಳಿದಿದ್ದರು. ನಾಲ್ಕು ದಿನಗಳ ಹಿಂದೆ ನಡೆದಿದ್ದ 100 ಮೀಟರ್ಸ್ ಬಟರ್‌ಫ್ಲೈ ವಿಭಾಗದಲ್ಲೂ ಮೊದಲಿಗರಾಗಿದ್ದ ಅವರು ಒಲಿಂಪಿಕ್ಸ್‌ಗೆ ಅರ್ಹತೆ ಗಳಿಸಿದ್ದರು.
ಎರಡರಿಂದ ನಾಲ್ಕನೇ ಸ್ಥಾನಗಳನ್ನು ಗಳಿಸಿದ ನಟ್ಸುಮಿ ಸಕಾಯಿ, ಚಿಹಿರೊ ಇಗರಶಿ ಮತ್ತು ರಿಕಾ ಒಮೊಟೊ ಕೂಡ ಒಲಿಂಪಿಕ್ಸ್‌ನಲ್ಲಿ ಪಾಲ್ಗೊಳ್ಳಲಿದ್ದಾರೆ.
2018ರ ಏಷ್ಯನ್ ಗೇಮ್ಸ್‌ನಲ್ಲಿ ಆರು ಚಿನ್ನದ ಪದಕ ಗಳಿಸಿದ ಐಕಿ ಮುಂದಿನ ವರ್ಷ ಲುಕೇಮಿಯಾಗೆ ಒಳಗಾಗಿದ್ದರು. ಚಿಕಿತ್ಸೆ ಪಡೆದ ನಂತರ ಕಳೆದ ವರ್ಷ ಆಗಸ್ಟ್‌ನಲ್ಲಿ ಸ್ಪರ್ಧಾಕಣಕ್ಕೆ ಮರಳಿದ್ದರು. ಈ ವಾರದಲ್ಲಿ ಅವರು 50 ಮೀಟರ್ಸ್ ಫ್ರೀಸ್ಟೈಲ್ ವಿಭಾಗದಲ್ಲೂ ಸ್ಪರ್ಧಿಸಲಿದ್ದು ಮೂರನೇ ಅವಕಾಶ ಗಳಿಸುವ ಭರವಸೆ ಮೂಡಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.