ADVERTISEMENT

ಲಾಂಗ್‌ಜಂಪ್‌: ರಾಜ್ಯದ ಐಶ್ವರ್ಯಗೆ ಮತ್ತೊಂದು ಚಿನ್ನ

​ಪ್ರಜಾವಾಣಿ ವಾರ್ತೆ
Published 14 ಜೂನ್ 2022, 20:05 IST
Last Updated 14 ಜೂನ್ 2022, 20:05 IST
ಐಶ್ವರ್ಯ ಬಾಬು
ಐಶ್ವರ್ಯ ಬಾಬು   

ಬೆಂಗಳೂರು: ಕರ್ನಾಟಕದ ಐಶ್ವರ್ಯ ಬಾಬು ಅಂತರರಾಜ್ಯ ಸೀನಿಯರ್ ಅಥ್ಲೆಟಿಕ್ಸ್ ಚಾಂಪಿಯನ್‌ಷಿಪ್‌ ನಲ್ಲಿ ಮತ್ತೊಂದು ಚಿನ್ನದ ಪದಕಕ್ಕೆ ಮುತ್ತಿಟ್ಟರು.

ಚೆನ್ನೈನ ಜವಾಹರಲಾಲ್ ನೆಹರೂ ಕ್ರೀಡಾಂಗಣದಲ್ಲಿ ಕೊನೆಗೊಂಡ ಕೂಟದ ಲಾಂಗ್‌ಜಂಪ್‌ನಲ್ಲಿ ಅವರು 6.60 ಮೀಟರ್ಸ್ ಉದ್ದ ಜಿಗಿದು ಅಗ್ರಸ್ಥಾನ ಗಳಿಸಿದರು. ಕಾಮನ್‌ವೆಲ್ತ್ ಗೇಮ್ಸ್‌ಗೆ ಅರ್ಹತೆ ಗಳಿಸಿದರು.

ಅಭಿನ್ ದೇವಾಡಿಗ 200 ಮೀಟರ್ಸ್ ಓಟದಲ್ಲಿ 21.42 ಸೆಕೆಂಡು ಗಳಲ್ಲಿ ಗುರಿ ತಲುಪಿ ಬೆಳ್ಳಿ ಜಯಿಸಿದರು. ಅಭಿನ್, ನಿಹಾಲ್ ಜೋಯಲ್‌, ವಿಶ್ವಾಂಬರ ಕೋಳೆಕರ್ ಮತ್ತು ಮಹಾಂತೇಶ್ ಅವರಿದ್ದ ರಾಜ್ಯ ತಂಡವು 4X400 ಮೀ. ರಿಲೇಯಲ್ಲಿ ಮೂರನೇ ಸ್ಥಾನ ಗಳಿಸಿತು.

ADVERTISEMENT

ವಿಶ್ವಚಾಂಪಿಯನ್‌ಷಿಪ್‌ಗೆ ಪ್ರವೀಣ್‌: ತಮಿಳುನಾಡಿನ ಪ್ರವೀಣ್ ಟ್ರಿಪಲ್‌ ಜಂಪ್‌ನಲ್ಲಿ 17.18 ಮೀ.ಸಾಧನೆಯ ಮೂಲಕ ಕೂಟ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು. ಇದರೊಂದಿಗೆ ವಿಶ್ವ ಚಾಂಪಿಯನ್‌ಷಿಪ್ ಅರ್ಹತಾ ಮಾನದಂಡವನ್ನು(17.14 ಮೀ.) ಮೀರಿದರು.

ಪ್ರವೀಣ್ ಅವರ ಸಾಧನೆಯು ಭಾರತದ ಟ್ರಿಪಲ್ ಜಂಪ್ ಅಥ್ಲೀಟ್‌ಗಳ ಪೈಕಿ ಮೂರನೇ ಶ್ರೇಷ್ಠ ಸಾಧನೆಯಾಗಿದೆ. 2016ರಲ್ಲಿ ರಂಜೀತ್ ಮಹೇಶ್ವರಿ (17.30 ಮೀ.) ಮತ್ತು ಕಳೆದ ತಿಂಗಳು ಕೇರಳದ ಅಬ್ದುಲ್ಲಾ ಅಬೂಬಕ್ಕರ್‌ (17.19) ಈ ಮೊದಲು ಉತ್ತಮ ಸಾಧನೆ ತೋರಿದವರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.