ADVERTISEMENT

Asian Athletics Championships: ಕ್ರೀಡಾಕೂಟದ ಮ್ಯಾಸ್ಕಟ್ 'ಹನುಮಾನ್'

ಪಿಟಿಐ
Published 11 ಜುಲೈ 2023, 12:31 IST
Last Updated 11 ಜುಲೈ 2023, 12:31 IST
   

ಬ್ಯಾಂಕಾಕ್: ಥಾಯ್ಲೆಂಡ್‌ನಲ್ಲಿ ನಡೆಯಲಿರುವ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ ಮ್ಯಾಸ್ಕಟ್ ಆಗಿ 'ಹನುಮಾನ್' ದೇವರನ್ನು ಆಯ್ಕೆ ಮಾಡಲಾಗಿದೆ.

ಏಷ್ಯನ್‌ ಅಥ್ಲೆಟಿಕ್ಸ್ ಸಂಸ್ಥೆ ಅಸ್ತಿತ್ವಕ್ಕೆ ಬಂದು 50ನೇ ವರ್ಷಾಚರಣೆಯ ಅಂಗವಾಗಿ ಕ್ರೀಡಾಕೂಟವನ್ನು ಆಯೋಜಿಸಲಾಗಿದೆ.

ವೇಗ, ಶಕ್ತಿ, ಧೈರ್ಯ ಮ್ತತು ಬುದ್ಧಿವಂತಿಕೆ ಸೇರಿದಂತೆ ರಾಮ ದೇವರ ಸೇವೆಯಲ್ಲಿ ಹನುಮಂತನು ಅಸಾಧಾರಣ ಗುಣಗಳನ್ನು ಹೊಂದಿರುತ್ತಾನೆ. ಭಕ್ತಿ ಹಾಗೂ ಪರಮನಿಷ್ಠೆ ಹನುಮಾನ್ ದೇವರ ಶ್ರೇಷ್ಠ ಗುಣಗಳಲ್ಲಿ ಒಂದಾಗಿದೆ ಎಂದು ಏಷ್ಯನ್‌ ಅಥ್ಲೆಟಿಕ್‌ ಸಂಸ್ಥೆಯು ತನ್ನ ವೆಬ್‌ಸೈಟ್‌ನಲ್ಲಿ ತಿಳಿಸಿದೆ.

ADVERTISEMENT

25ನೇ ಏಷ್ಯನ್ ಅಥ್ಲೆಟಿಕ್ಸ್ ಚಾಂಪಿಯನ್‌ಶಿಪ್‌ನ 2023ರ ಲಾಂಛನವು ಅಥ್ಲೀಟ್‌ಗಳ ಆಟ, ಕೌಶಲ್ಯ, ಟೀಮ್ ವರ್ಕ್, ಪ್ರದರ್ಶನ, ಅರ್ಪಣಾ ಮನೋಭಾವ ಮತ್ತು ಕ್ರೀಡಾಸ್ಪೂರ್ತಿಯನ್ನು ಸಂಕೇತಿಸುತ್ತದೆ.

ಕ್ರೀಡಾಕೂಟದಲ್ಲಿ ಭಾರತದ ಷಾಟ್‌ಪಟ್‌ ಪಟು ತಜಿಂದರ್‌ಪಾಲ್‌ ಸಿಂಗ್‌ ತೂರ್‌ ಹಾಗೂ ಲಾಂಗ್‌ಜಂಪ್ ಅಥ್ಲೀಟ್ ಮುರಳಿ ಶ್ರೀಶಂಕರ್ ಸೇರಿದಂತೆ ಪ್ರಮುಖರು ಸ್ಪರ್ಧಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.