ಕ್ವಾಲಾಲಂಪುರ: ಭಾರತದ ಎಚ್.ಎಸ್.ಪ್ರಣಯ್ ಅವರು ಮಲೇಷ್ಯಾ ಓಪನ್ ಸೂಪರ್ 750 ಬ್ಯಾಡ್ಮಿಂಟನ್ ಟೂರ್ನಿಯ ಕ್ವಾರ್ಟರ್ ಫೈನಲ್‌ನಲ್ಲಿ ಸೋತರು.
ಶುಕ್ರವಾರ ನಡೆದ ಹಣಾಹಣಿಯಲ್ಲಿ 30 ವರ್ಷದ ಪ್ರಣಯ್ 16–21, 21–19, 10–21 ರಲ್ಲಿ ಜಪಾನ್‌ನ ಕೊಡೈ ನರವೊಕಾ ಕೈಯಲ್ಲಿ ಪರಾಭವಗೊಂಡರು. 84 ನಿಮಿಷಗಳ ಹೋರಾಟದಲ್ಲಿ ಜಪಾನ್‌ನ ಆಟಗಾರ ವೇಗದ ಸ್ಮ್ಯಾಷ್ ಮತ್ತು ಚುರುಕಿನ ಡ್ರಾಪ್ ಶಾಟ್‌ಗಳ ಮೂಲಕ ಗಮನ ಸೆಳೆದರು.
ಈ ಗೆಲುವಿನೊಂದಿಗೆ ಕೊಡೈ ಅವರು ಪ್ರಣಯ್ ವಿರುದ್ಧ ಅಜೇಯ ಸಾಧನೆ ಮುಂದುವರಿಸಿದ್ದಾರೆ. ಇವರಿಬ್ಬರು ಇದುವರೆಗೆ ಮೂರು ಸಲ ಪೈಪೋಟಿ ನಡೆಸಿದ್ದು, ಪ್ರಣಯ್ ಒಮ್ಮೆಯೂ ಗೆದ್ದಿಲ್ಲ. ಈ ಹಿಂದೆ ಸಿಂಗಪುರ ಓಪನ್ ಮತ್ತು ವಿಶ್ವ ಟೂರ್ ಫೈನಲ್ಸ್‌ನಲ್ಲಿ ಕೊಡೈ ಅವರು ಭಾರತದ ಆಟಗಾರನನ್ನು ಮಣಿಸಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.