ಬೆಂಗಳೂರು: ಸ್ವಿಟ್ಜರ್ಲೆಂಡ್‌ನ ಬಾಸೆಲ್‌ನಲ್ಲಿ ನಡೆದ ವಿಶ್ವ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಚಿನ್ನ ಗೆದ್ದ ಮಾನಸಿ ಜೋಶಿ, 2 ಚಿನ್ನ ಗೆದ್ದ ಪ್ರಮೋದ್ ಭಗತ್ ಮತ್ತು ಇತರ ಬ್ಯಾಡ್ಮಿಂಟನ್ ಪಟುಗಳ ಬಗ್ಗೆ ಕ್ರೀಡಾ ಪ್ರೇಮಿಗಳು ಸಾಮಾಜಿಕ ತಾಣಗಳಲ್ಲಿ ಮೆಚ್ಚುಗೆಯ ನುಡಿಗಳನ್ನಾಡಿದ್ದಾರೆ.
30 ವರ್ಷದ ಮಾನಸಿ, ಮಹಿಳೆಯರ ಎಸ್‌ಎಲ್–3 ವಿಭಾಗದಲ್ಲಿ ವಿಶ್ವದ ಅಗ್ರ ಕ್ರಮಾಂಕದ ಆಟಗಾರ್ತಿ ಪಾರುಲ್ ಪರ್ಮಾರ್ ಅವರನ್ನು 21–12, 21–7ರಲ್ಲಿ ಮಣಿಸಿ ಚೊಚ್ಚಲ ಪ್ರಶಸ್ತಿ ತಮ್ಮದಾಗಿಸಿಕೊಂಡಿದ್ದರು.
ಪ್ರಧಾನಿ ನರೇಂದ್ರ ಮೋದಿ, ಮಧ್ಯಪ್ರದೇಶದ ಮುಖ್ಯಮಂತ್ರಿ ಶಿವರಾಜ್ ಸಿಂಗ್ ಚೌಹಾಣ್, ಐಪಿಎಸ್ ಅಧಿಕಾರಿ ಕಿರಣ್ ಬೇಡಿ ಒಳಗೊಂಡಂತೆ ಹಲವು ಗಣ್ಯರು ಮತ್ತು ಇತರರು ಸಾಮಾಜಿಕ ತಾಣಗಳಲ್ಲಿ ಮಾನಸಿ ಅವರನ್ನು ಹೊಗಳಿದ್ದಾರೆ.
ಪ್ರಮೋದ್ ಭಗತ್ 2 ಚಿನ್ನ, ಮನೋಜ್ ಸರ್ಕಾರ್ 1 ಚಿನ್ನ, ತರುಣ್ 2 ಬೆಳ್ಳಿ, ನಿತೇಶ್ ಕುಮಾರ್, ನಾಗರ್ ಕೃಷ್ಣ ಮತ್ತು ರಾಜ ಮಗೋತ್ರ, ಪಾರುಲ್ ಪರ್ಮಾರ್ ತಲಾ 1 ಬೆಳ್ಳಿ, ಮನೋಜ್ ಸರ್ಕಾರ್, ಸುಖಾಂತ್ ಕದಂ, ನಾಗರ್ ಕೃಷ್ಣ, ಉಮೇಶ್ ಕುಮಾರ್, ರಾಜ್ ಕುಮಾರ್ ಹಾಗೂ ರಾಕೇಶ್ ಪಾಂಡೆ ತಲಾ ಒಂದು ಕಂಚಿನ ಪದಕ ಗಳಿಸಿದ್ದರು. ಇವರೆಲ್ಲರಿಗೆ ಕ್ರೀಡಾ ಸಚಿವ ಕಿರಣ್ ರಿಜುಜು ಒಟ್ಟು ₹ 1.82 ಕೋಟಿ ಮೊತ್ತವನ್ನು ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.