ಮುಂಬೈ: ಮುಂದಿನ ವರ್ಷ ಟೊಕಿಯೊದಲ್ಲಿ ನಡೆಯಲಿರುವ ಪ್ಯಾರಾಲಿಂಪಿಕ್ಸ್‌ನ ಬ್ಯಾಡ್ಮಿಂಟನ್ ವಿಶ್ವ ಡಬಲ್ಸ್‌ನಲ್ಲಿ ಅರ್ಹತೆ ಗಳಿಸುವತ್ತ ಭಾರತದ ಮಾನಸಿ ಜೋಶಿ ಚಿತ್ತ ನೆಟ್ಟಿದ್ದಾರೆ.
ಸ್ವಿಟ್ಜರ್‌ಲೆಂಡ್‌ನ ಬಾಸೆಲ್‌ನಲ್ಲಿ ಈಚೆಗೆ ನಡೆದಿದ್ದ ವಿಶ್ವ ಪ್ಯಾರಾ ಬ್ಯಾಡ್ಮಿಂಟನ್ ಚಾಂಪಿಯನ್‌ಷಿಪ್‌ನಲ್ಲಿ ಮಾನಸಿ ಜೋಶಿ ಚಿನ್ನ ಗೆದ್ದಿದ್ದರು. ಗುರುವಾರ ಅವರು ಮಿಶ್ರ ಡಬಲ್ಸ್‌ನಲ್ಲಿ ಮಿಂಚುವತ್ತ ಗಮನ ನೆಟ್ಟಿದ್ದಾರೆ.
‘ಪ್ಯಾರಾಲಿಂಪಿಕ್ಸ್‌ನಲ್ಲಿ ನಮ್ಮ ವಿಭಾಗದವರ ಸಿಂಗಲ್ಸ್ ಸ್ಪರ್ಧೆ ಇಲ್ಲ. ರಾಕೇಶ್ ಪಾಂಡೆ ಅವರೊಂದಿಗೆ ನಾನು ವಿಶ್ವ ಡಬಲ್ಸ್‌ನಲ್ಲಿ ಸ್ಪರ್ಧಿಸಲಿದ್ದೇನೆ. ಪಾಂಡೆ ಅವರು 13ನೇ ರ‍್ಯಾಂಕ್ ಹೊಂದಿದ್ದಾರೆ. ಪ್ಯಾರಾಲಿಂಪಿಕ್ಸ್ ಅರ್ಹತಾ ಟೂರ್ನಿಯಲ್ಲಿ ನಮ್ಮ ಜೋಡಿಯು ಅಗ್ರ ಆರರಲ್ಲಿ ಸ್ಥಾನ ಪಡೆದುಕೊಂಡರೆ ಅರ್ಹತೆ ಪಡೆಯಬಹುದು. ಇಂಡೋನೆಷ್ಯಾ, ಥಾಯ್ಲೆಂಡ್, ಜಪಾನ್ ಮತ್ತು ಜರ್ಮನಿಯ ಆಟಗಾರರನ್ನು ಎದುರಿಸುವುದು ಕಠಿಣ ಸವಾಲು’ ಎಂದು ಮಾನಸಿ ಹೇಳಿದ್ದಾರೆ.
ಹೈದರಾಬಾದಿನ ಪುಲ್ಲೇಲ ಗೋಪಿಚಂದ್ ಅವರ ಅಕಾಡೆಮಿಯಲ್ಲಿ ಅಭ್ಯಾಸ ಮಾಡುತ್ತಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.