ಮಂಗಳೂರು: ನಗರದ ಮಂಗಳಾ ಬ್ಯಾಡ್ಮಿಂಟನ್ ಸಂಸ್ಥೆ (ಎಂಬಿಎ) ಆಯೋಜಿಸಿರುವ ‘ಮಂಗಳಾ ಕಪ್’ ರಾಷ್ಟ್ರೀಯ ಮುಕ್ತ ಬ್ಯಾಡ್ಮಿಂಟನ್ ಟೂರ್ನಿ ಇದೇ 10ರಿಂದ 12ರವರೆಗೆ ಲಾಲ್‌ಬಾಗ್‌ನಲ್ಲಿರುವ ಯು.ಎಸ್. ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆಯಲಿದೆ.
ಒಟ್ಟು ₹5 ಲಕ್ಷ 83 ಸಾವಿರ ಬಹುಮಾನ ಮೊತ್ತದ ಟೂರ್ನಿಯಲ್ಲಿ 9 ವಿಭಾಗಗಳಲ್ಲಿ ಸ್ಪರ್ಧೆಗಳು ನಡೆಯಲಿದ್ದು ರಾಷ್ಟ್ರೀಯ ಟೂರ್ನಿಯಲ್ಲಿ ವಿವಿಧ ರಾಜ್ಯಗಳನ್ನು ಪ್ರತಿನಿಧಿಸಿದ ಬ್ಯಾಡ್ಮಿಂಟನ್ ಪಟುಗಳು ಪಾಲ್ಗೊಳ್ಳಲಿದ್ದಾರೆ ಎಂದು ಎಂಬಿಎ ಅಧ್ಯಕ್ಷ ಸುಪ್ರೀತ್ ಆಳ್ವ ತಿಳಿಸಿದರು.
ಸೋಮವಾರ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು ಪುರುಷ ಮತ್ತು ಮಹಿಳೆಯರ ಸಿಂಗಲ್ಸ್ ಹಾಗೂ ಡಬಲ್ಸ್, ಮಿಶ್ರ ಡಬಲ್ಸ್, 30ವರ್ಷ ಮೇಲಿನ ಪುರುಷರ ಡಬಲ್ಸ್, ಮಹಿಳೆಯರ ಡಬಲ್ಸ್, 40 ಹಾಗೂ 50 ವರ್ಷ ಮೇಲಿನ ಪುರುಷರ ಡಬಲ್ಸ್ ಪಂದ್ಯಗಳು ನಡೆಯಲಿವೆ ಎಂದು ತಿಳಿಸಿದರು. ಪುರುಷರ ಡಬಲ್ಸ್‌ನಲ್ಲಿ ವಿಜೇತ ಜೋಡಿಗೆ ಗರಿಷ್ಠ ₹50 ಸಾವಿರ, ಪುರುಷರ ಸಿಂಗಲ್ಸ್ ವಿಜೇತರಿಗೆ ₹35 ಸಾವಿರ ಬಹುಮಾನ ಮೊತ್ತ ನೀಡಲಾಗುವುದು ಎಂದು ಅವರು ವಿವರಿಸಿದರು.
ಪುರುಷರ ಸಿಂಗಲ್ಸ್ ರನ್ನರ್ ಅಪ್‌ಗೆ ₹15 ಸಾವಿರ, ಡಬಲ್ಸ್ ರನ್ನರ್ ಅಪ್ ಜೋಡಿಗೆ ₹25 ಸಾವಿರ, ಮಹಿಳೆಯರ ಸಿಂಗಲ್ಸ್ ವಿಜೇತರಿಗೆ ₹15 ಸಾವಿರ, ರನ್ನರ್ ಅಪ್‌ಗೆ ₹7 ಸಾವಿರ, ಡಬಲ್ಸ್ ವಿಜೇತರಿಗೆ ₹22 ಸಾವಿರ, ರನ್ನರ್ ಅಪ್‌ಗೆ ₹11 ಸಾವಿರ, ಮಿಶ್ರ ಡಬಲ್ಸ್ ವಿಜೇತರಿಗೆ ₹20 ಸಾವಿರ, ರನ್ನರ್ ಅಪ್‌ಗೆ ₹11 ಸಾವಿರ, 30ರಿಂದ 50 ವರ್ಷದ ವರೆಗಿನವರ ಪಂದ್ಯಗಳ ವಿಜೇತರಿಗೆ ₹15 ಸಾವಿರದಿಂದ ₹30 ಸಾವಿರದ ವರೆಗೆ ಬಹುಮಾನ ಮೊತ್ತ ನೀಡಲಾಗುವುದು. ಎಲ್ಲ ವಿಭಾಗಗಳಲ್ಲೂ ಕ್ವಾರ್ಟರ್ ಫೈನಲ್‌ನಿಂದ ಸೆಮಿಫೈನಲ್ ವರೆಗೆ ತಲುಪಿದವರಿಗೆ ಪ್ರತ್ಯೇಕ ಬಹುಮಾನ ಮೊತ್ತ ನೀಡಲಾಗುವುದು ಎಂದು ಅವರು ತಿಳಿಸಿದರು.
ಕಾರ್ಯದರ್ಶಿ ದೀಪಕ್ ಕುಮಾರ್, ಖಜಾಂಚಿ ಲಕ್ಷ್ಮಿ ಸುವರ್ಣ, ಸಂಘಟನಾ ಕಾರ್ಯದರ್ಶಿ ಸಿ.ಎಸ್. ಭಂಡಾರಿ, ಕ್ರೀಡಾ ಸಂಚಾಲಕ ಅಜಯ್ ಟೆರೆನ್ಸ್, ಅಭಿವೃದ್ಧಿ ವಿಭಾಗದ ಸಂಚಾಲಕ ಸಂತೋಷ್ ಕುಮಾರ್ ಶೆಟ್ಟಿ ಇದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.