ADVERTISEMENT

ಡಬ್ಲ್ಯುಟಿಟಿ: ಮಣಿಕಾ ಅಭಿಯಾನಕ್ಕೆ ತೆರೆ

ಪಿಟಿಐ
Published 27 ಅಕ್ಟೋಬರ್ 2024, 14:02 IST
Last Updated 27 ಅಕ್ಟೋಬರ್ 2024, 14:02 IST
ಮಣಿಕಾ ಬಾತ್ರಾ
ಮಣಿಕಾ ಬಾತ್ರಾ   

ನವದೆಹಲಿ: ಭಾರತದ ಟೇಬಲ್‌ ಟೆನಿಸ್‌ ತಾರೆ ಮಣಿಕಾ ಬಾತ್ರಾ ಅವರು ಫ್ರಾನ್ಸ್‌ನ ಮಾಂಟ್‌ ಪೆಲೀರ್‌ನಲ್ಲಿ ನಡೆಯುತ್ತಿರುವ ಡಬ್ಲ್ಯುಟಿಟಿ ಚಾಂಪಿಯನ್ಸ್‌ ಮಹಿಳೆಯರ ಸಿಂಗಲ್ಸ್‌ನ ಕ್ವಾರ್ಟರ್‌ ಫೈನಲ್‌ನಲ್ಲಿ ಹೊರಬಿದ್ದರು.

ಶನಿವಾರ ರಾತ್ರಿ ನಡೆದ ಪಂದ್ಯದಲ್ಲಿ ಭಾರತದ 29 ವರ್ಷ ವಯಸ್ಸಿನ ಮಣಿಕಾ 3–0 (8-11, 8-11, 10-12) ನೇರ ಗೇಮ್‌ಗಳಿಂದ ಚೀನಾದ ಕಿಯಾನ್ ತಿಯಾನಿ ಅವರಿಗೆ ಶರಣಾದರು.

ವಿಶ್ವದ 30ನೇ ಕ್ರಮಾಂಕದ ಮಣಿಕಾ, ಪ್ರಿ ಕ್ವಾರ್ಟರ್‌ ಫೈನಲ್‌ನಲ್ಲಿ ವಿಶ್ವದ 14ನೇ ಕ್ರಮಾಂಕದ ರೊಮೇನಿಯಾದ ಬರ್ನಾಡೆಟ್ ಸ್ಜೋಕ್ಸ್‌ಗೆ ಆಘಾತ ನೀಡಿ ಡಬ್ಲ್ಯುಟಿಟಿ ಚಾಂಪಿಯನ್ಸ್‌ನಲ್ಲಿ ಎಂಟರ ಘಟ್ಟ ಪ್ರವೇಶಿಸಿದ ಮೊದಲ ಭಾರತದ ಆಟಗಾರ್ತಿ ಎಂಬ ಹಿರಿಮೆಗೆ ಪಾತ್ರವಾಗಿದ್ದರು.

ADVERTISEMENT

ಭಾರತದ ಅಗ್ರಮಾನ್ಯ ಸಿಂಗಲ್ಸ್‌ ಆಟಗಾರ್ತಿ ಶ್ರೀಜಾ ಅಕುಲಾ ಮೊದಲ ಸುತ್ತಿನಲ್ಲೇ ನಿರಾಸೆ ಅನುಭವಿಸಿದ್ದರು. ಅವರು 2-3 (11-6, 7-11, 1-11, 11-8, 8-11) ರಿಂದ ವಿಶ್ವದ ವಿಶ್ವದ 13ನೇ ಕ್ರಮಾಂಕದ ಆ್ಯಡ್ರಿಯಾನಾ ಡಯಾಜ್ (ಪೋರ್ಟೊ ರಿಕೊ) ಅವರಿಗೆ ಮಣಿದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.