ADVERTISEMENT

Paris Olympics: ಮಣಿಕಾಗೆ ಅನ್ನಾ ಮೊದಲ ಎದುರಾಳಿ

​ಪ್ರಜಾವಾಣಿ ವಾರ್ತೆ
Published 25 ಜುಲೈ 2024, 3:34 IST
Last Updated 25 ಜುಲೈ 2024, 3:34 IST
<div class="paragraphs"><p>ಮಣಿಕಾ ಬಾತ್ರಾ</p></div>

ಮಣಿಕಾ ಬಾತ್ರಾ

   

(ಪಿಟಿಐ ಚಿತ್ರ)

ಪ್ಯಾರಿಸ್‌ : ಭಾರತದ ಟೇಬಲ್‌ ಟೆನಿಸ್‌ ಆಟಗಾರ್ತಿ ಮಣಿಕಾ ಬಾತ್ರಾ ಅವರು ಒಲಿಂಪಿಕ್ಸ್‌ನ ಮಹಿಳಾ ಸಿಂಗಲ್ಸ್‌ನ ಮೊದಲ ಸುತ್ತಿನಲ್ಲಿ ಶನಿವಾರ ಬ್ರಿಟನ್‌ ಅನ್ನಾ ಹರ್ಸೆ ಅವರನ್ನು ಎದುರಿಸಲಿದ್ದಾರೆ. ಪುರುಷರ ಸಿಂಗಲ್ಸ್‌ನಲ್ಲಿ ಅನುಭವಿ ಅಚಂತ ಶರತ್ ಕಮಲ್ ಅವರು ಸ್ಲೊವೇನಿಯಾದ ಡೆನಿ ಕೊಜುಲ್ ವಿರುದ್ಧ ಅಭಿಯಾನ ಆರಂಭಿಸುವರು.

ADVERTISEMENT

ಪುರುಷರ ಮತ್ತು ಮಹಿಳೆಯರ ಸಿಂಗಲ್ಸ್‌ ಸ್ಪರ್ಧೆಗಳ ಡ್ರಾ ಬುಧವಾರ ಪ್ರಕಟಿಸಲಾಯಿತು. 2021ರ ಟೋಕಿಯೊ ಒಲಿಂಪಿಕ್ಸ್‌ನಲ್ಲಿ ಸಿಂಗಲ್ಸ್‌ನಲ್ಲಿ 32ನೇ ಸುತ್ತಿಗೆ ಪ್ರವೇಶಿಸಿದ್ದ ಭಾರತದ ಮೊದಲ ಮಹಿಳಾ ಟೇಬಲ್ ಟೆನಿಸ್ ಆಟಗಾರ್ತಿ ಮಣಿಕಾ ಇಲ್ಲಿ 18ನೇ ಶ್ರೇಯಾಂಕ ಪಡೆದಿದ್ದಾರೆ. ಅವರಿಗೆ ಇದು ಮೂರನೇ ಒಲಿಂಪಿಕ್ಸ್‌ ಆಗಿದೆ.

ಕಾಮನ್‌ವೆಲ್ತ್ ಗೇಮ್ಸ್ ಚಾಂಪಿಯನ್ ಶರತ್ ಕಮಲ್ ಅವರು ಆರು ಸದಸ್ಯರ ಭಾರತದ ಟೇಬಲ್ ಟೆನಿಸ್ ತಂಡವನ್ನು ಮುನ್ನಡೆಸುತ್ತಿದ್ದಾರೆ. 41 ವರ್ಷದ ಅವರಿಗೆ ಇದು ಐದನೇ ಒಲಿಂಪಿಕ್ಸ್‌ ಆಗಿದೆ.

ಹರ್ಮೀತ್ ದೇಸಾಯಿ ಆರಂಭಿಕ ಸುತ್ತಿನಲ್ಲಿ ಜೋರ್ಡಾನ್‌ನ ಅಬೋ ಯಮನ್ ವಿರುದ್ಧ; 16ನೇ ಶ್ರೇಯಾಂಕದ ಶ್ರೀಜಾ ಅಕುಲಾ ಅವರು ಸ್ವೀಡನ್‌ನ ಕ್ರಿಸ್ಟಿನಾ ಕಾಲ್‌ಬರ್ಗ್ ವಿರುದ್ಧ ಅಭಿಯಾನ ಆರಂಭಿಸಲಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.