ನವದೆಹಲಿ: ಮುಂಬರುವ ಏಷ್ಯನ್ ಚಾಂಪಿಯನ್ಸ್ ಟ್ರೋಫಿ ಹಾಕಿ ಟೂರ್ನಿಗೆಮಿಡ್‌ಫೀಲ್ಡರ್ ಮನ್‌ಪ್ರೀತ್ ಸಿಂಗ್ ಅವರು ಭಾರತ ತಂಡವನ್ನು ಮುನ್ನಡೆಸಲಿದ್ದಾರೆ.
ಈ ಟೂರ್ನಿಯು ಮುಂದಿನ ತಿಂಗಳು ಮಸ್ಕತ್‌ನಲ್ಲಿ ನಡೆಯಲಿದೆ. ಇದಕ್ಕಾಗಿ 18 ಆಟಗಾರರ ಭಾರತ ತಂಡವನ್ನು ಹಾಕಿ ಇಂಡಿಯಾ ಬುಧವಾರ ಪ್ರಕಟಿಸಿದೆ. 2016ರಲ್ಲಿ ನಡೆದಿದ್ದ ಟೂರ್ನಿಯಲ್ಲಿ ಭಾರತ ತಂಡ ಚಾಂಪಿಯನ್ ಆಗಿತ್ತು. ಅದು ಫೈನಲ್‌ನಲ್ಲಿ 3–2ರಿಂದ ಪಾಕಿಸ್ತಾನ ತಂಡವನ್ನು ಮಣಿಸಿತ್ತು.
20 ವರ್ಷದ ಹಾರ್ದಿಕ್ ಸಿಂಗ್ ಅವರು ತಂಡದಲ್ಲಿ ಮೊದಲ ಬಾರಿ ಸ್ಥಾನ ಗಳಿಸಿದ್ದಾರೆ. 23 ವರ್ಷದ ಗುರ್ಜಂತ್ ಸಿಂಗ್ ಅವರು ತಂಡಕ್ಕೆ ಮರಳಿದ್ದಾರೆ.
‘ವಿಭಿನ್ನ ಸಾಮರ್ಥ್ಯವಿರುವ, ಉತ್ತಮ ಆಟಗಾರರಿರುವ ತಂಡ ಇದಾಗಿದೆ. ಈ ಆಟಗಾರರಿಂದಾಗಿ ಎಲ್ಲ ವಿಭಾಗಗಳಲ್ಲಿ ಸಮತೋಲನ ಕಾಪಾಡಲು ಸಾಧ್ಯವಿದೆ’ ಎಂದು ತಂಡದ ಕೋಚ್ ಹರೇಂದ್ರ ಸಿಂಗ್ ಹೇಳಿದ್ದಾರೆ.
ವಿಶ್ವ ರ‍್ಯಾಂಕಿಂಗ್‌ನಲ್ಲಿ ಸದ್ಯ ಐದನೇ ಸ್ಥಾನದಲ್ಲಿರುವ ಭಾರತ ತಂಡವು ಟೂರ್ನಿಯಲ್ಲಿ ಮಲೇಷ್ಯಾ, ಪಾಕಿಸ್ತಾನ, ದಕ್ಷಿಣ ಕೊರಿಯಾ, ಜಪಾನ್ ಹಾಗೂ ಆತಿಥೇಯ ಓಮನ್ ರಾಷ್ಟ್ರಗಳ ಎದುರು ಸೆಣಸಲಿದೆ.
ತಂಡ ಇಂತಿದೆ: ಗೋಲ್‌ಕೀಪರ್ಸ್: ಪಿ. ಆರ್. ಶ್ರೀಜೇಶ್, ಕೃಷ್ಣನ್ ಪಾಠಕ್.
ಡಿಫೆಂಡರ್ಸ್: ಹರ್ಮನ್‌ಪ್ರೀತ್ ಸಿಂಗ್, ಗುರೀಂದರ್ ಸಿಂಗ್, ವರುಣ್ ಕುಮಾರ್, ಕೊಥಾಜಿತ್ ಸಿಂಗ್ ಕದಂಗ್‌ಬಮ್, ಸುರೇಂದರ್ ಕುಮಾರ್, ಜರ್ಮನ್‌ಪ್ರೀತ್ ಸಿಂಗ್, ಹಾರ್ದಿಕ್ ಸಿಂಗ್.
ಮಿಡ್‌ಫೀಲ್ಡರ್ಸ್: ಮನ್‌ಪ್ರೀತ್ ಸಿಂಗ್ (ನಾಯಕ), ಸುಮಿತ್ ನೀಲಕಂಠ ಶರ್ಮಾ, ಲಲಿತ್ ಕುಮಾರ್ ಉಪಾಧ್ಯಾಯ, ಚಿಂಗ್ಲನ್‌ಸೇನಾ ಸಿಂಗ್ (ಉಪ ನಾಯಕ).
ಫಾರ್ವರ್ಡ್ಸ್: ಆಕಾಶ್‌ದೀಪ್ ಸಿಂಗ್, ಗುರ್ಜಂತ್ ಸಿಂಗ್, ಮಂದೀಪ್ ಸಿಂಗ್, ದಿಲ್‌ಪ್ರೀತ್ ಸಿಂಗ್.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.