ನವದೆಹಲಿ: ಮಹಿಳಾ ಬಾಕ್ಸರ್ ಮೇರಿ ಕೋಮ್, ಬ್ಯಾಡ್ಮಿಂಟನ್ ಆಟಗಾರ್ತಿ ಪಿ.ವಿ.ಸಿಂಧು ಮತ್ತು ವೇಟ್‌ಲಿಫ್ಟರ್ ಮೀರಾಬಾಯಿ ಚಾನು ಸೇರಿ 10 ಮಂದಿ ಕ್ರೀಡಾಪಟುಗಳು ಭಾರತ ಒಲಿಂಪಿಕ್ ಸಂಸ್ಥೆಯ (ಐಒಎ) ಅಥ್ಲೀಟ್‌ಗಳ ಸಮಿತಿಯ ಸದಸ್ಯರಾಗಿ ಸೋಮವಾರ ಅವಿರೋಧವಾಗಿ ಆಯ್ಕೆಯಾದರು.
ವಿಂಟರ್ ಒಲಿಂಪಿಯನ್ ಶಿವ ಕೇಶವನ್, ಶೂಟರ್ ಗಗನ್ ನಾರಂಗ್, ಟೇಬಲ್ ಟೆನಿಸ್ ಪಟು ಅಚಂತ ಶರತ್ ಕಮಲ್, ಹಾಕಿ ಆಟಗಾರ್ತಿ ರಾಣಿ ರಾಂಪಾಲ್, ಫೆನ್ಸರ್ ಭವಾನಿ ದೇವಿ, ರೋವರ್ ಬಜರಂಗ್ ಲಾಲ್ ಮತ್ತು ಮಾಜಿ ಶಾಟ್‌ಪಟ್ ಪಟು ಒ.ಪಿ. ಖರಾನಾ ಅಪೆಕ್ಸ್ ಸಮಿತಿಗೆ ಆಯ್ಕೆಯಾದ ಇನ್ನುಳಿದ ಅಥ್ಲೀಟ್‌ಗಳು.
ಚುನಾವಣೆಗೆ ಈ ಹತ್ತು ಮಂದಿ ಮಾತ್ರ ನಾಮಪತ್ರ ಸಲ್ಲಿಸಿದ್ದರು. ಮುಂಬರುವ ಐಒಎ ಚುನಾವಣೆಗೆ ಚುನಾವಣಾಧಿಕಾರಿಯಾಗಿರುವ ಉಮೇಶ್ ಸಿನ್ಹಾ ಅವರು ಅಥ್ಲೀಟ್‌ಗಳು ಅವಿರೋಧವಾಗಿ ಆಯ್ಕೆಯಾಗಿದ್ದಾರೆಂದು ಪ್ರಕಟಿಸಿದರು.
ಮಾಜಿ ಶೂಟಿಂಗ್ ಪಟು ಅಭಿನವ್ ಬಿಂದ್ರಾ ಮತ್ತು ಹಾಕಿ ತಂಡದ ಮಾಜಿ ನಾಯಕ ಸರ್ದಾರ್ ಸಿಂಗ್ ಕ್ರಮವಾಗಿ ಅಂತರರಾಷ್ಟ್ರೀಯ ಒಲಿಂಪಿಕ್ ಸಮಿತಿ ಮತ್ತು ಏಷ್ಯಾ ಒಲಿಂಪಿಕ್ ಕೌನ್ಸಿಲ್‌ನ ಸದಸ್ಯರಾಗಿರುವುದರಿಂದ ಅವರೂ ಐಒಎನ ಅಥ್ಲೀಟ್‌ಗಳ ಸಮಿತಿಯಲ್ಲಿ ಸ್ಥಾನ ಪಡೆದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.