ಮಂಗಳೂರು: ಆರಂಭದಿಂದಲೇ ಆಧಿಪತ್ಯ ಸ್ಥಾಪಿಸುತ್ತ ಮುನ್ನುಗ್ಗಿದ ಮೇವರಿಕ್ಸ್ ತಂಡ ಇಲ್ಲಿ ಶುಕ್ರವಾರ ಕೊನೆಗೊಂಡ ರಾಷ್ಟ್ರೀಯ ಬ್ರಿಜ್ ಚಾಂಪಿಯನ್‌ಷಿಪ್‌ನ ‘ಗೋಲ್ಡ್’ ವಿಭಾಗದ ಪ್ರಶಸ್ತಿ ಮುಡಿಗೇರಿಸಿಕೊಂಡಿತು. ಸುಭಾಷ್ ಗುಪ್ತಾ ಮ್ಯಾಚ್ ಪಾಯಿಂಟ್ ಪೇರ್ ವಿಭಾಗದ ಪ್ರಶಸ್ತಿ ರಾಜೇಶ್ವರ್ ತಿವಾರಿ ಮತ್ತು ಸುಮಿತ್ ಮುಖರ್ಜಿ ಅವರ ಪಾಲಾಯಿತು.
ಸುಬೋಧ್ ಮಸ್ಕರ, ಸುಭಾಷ್ ಗುಪ್ತಾ, ಕೈಜದ್ ಅಂಕ್ಲೇಸರಿಯಾ, ಅನಾಲ್ ಶಾ, ಸಂದೀಪ್ ತಕ್ರಾಲ್ ಮತ್ತು ಜಗ್ಗಿ ಶಿವದಾಸಾನಿ ಅವರನ್ನು ಒಳಗೊಂಡ ಮೇವರಿಕ್ಸ್ ತಂಡ ಸ್ವಿಸ್ ಲೀಗ್ ಹಂತದಿಂದಲೇ ಪಾರುಪತ್ಯ ಸ್ಥಾಪಿಸಿತ್ತು. ಫೈನಲ್‌ನಲ್ಲಿ ಮೋನಿಕಾ ಜಾಜೂ ತಂಡವನ್ನು ಹಿಂದಿಕ್ಕಿತು.
ವಿನೋದ್ ಕುಮಾರ್ ಶಾ, ಸಂಜಿತ್ ಡೇ, ಮೋನಿಕಾ ಜಾಜೂ, ಸೋಮೇಶ್ ಭಟ್ಟಾಚಾರ್ಯ, ವಿಕ್ರಾಂತ್ ಮೆಹ್ತಾ ಮತ್ತು ಸುಕಮಲ್ ದಾಸ್ ರನ್ನರ್ ಅಪ್ ತಂಡದಲ್ಲಿದ್ದರು. ಡಿಯೊರಾಸ್ ಡೆಕಾನ್ಸ್ ಮತ್ತು ಫೋರ್ಮಿಡೇಬಲ್ ತಂಡಗಳು ಕ್ರಮವಾಗಿ ಮೂರು ಮತ್ತು ನಾಲ್ಕನೇ ಸ್ಥಾನ ಗಳಿಸಿದವು.
ಸುಭಾಷ್ ಗುಪ್ತಾ ಮ್ಯಾಚ್ ಪಾಯಿಂಟ್ ಪೇರ್ಸ್ ವಿಭಾಗದಲ್ಲಿ ಶಂಭುನಾಥ್ ಘೋಷ್ ಮತ್ತು ವಿಶ್ವಜೀತ್ ಪೋದ್ದಾರ್ ಜೋಡಿಯನ್ನು ಮಣಿಸಿ ರಾಜೇಶ್ವರ್ ತಿವಾರಿ ಮತ್ತು ಸುಮಿತ್ ಮುಖರ್ಜಿ ಪ್ರಶಸ್ತಿಗೆ ಮುತ್ತಿಕ್ಕಿದರು. ಫೈನಲ್‌ನಲ್ಲಿ ರಾಜೇಶ್ವರ್–ಸುಮಿತ್ 854.16 ಸ್ಕೋರು ಕಲೆ ಹಾಕಿದರೆ ಶಂಭುನಾಥ್ ಮತ್ತು ವಿಶ್ವಜೀತ್ 839.55 ಸ್ಕೋರು ಗಳಿಸಿದರು.
ಸುಭಾಷ್ ಗುಪ್ತಾ ಮ್ಯಾಚ್ ಪಾಯಿಂಟ್ ಪೇರ್ಸ್ ವಿಭಾಗದಲ್ಲಿ ಮೊದಲ 10 ಸ್ಥಾನ ಗಳಿಸಿದ ಜೋಡಿ: ರಾಜೇಶ್ವರ್ ತಿವಾರಿ ಮತ್ತು ಸುಮಿತ್ ಮುಖರ್ಜಿ–1 (ಸ್ಕೋರು: 854.16), ಶಂಭುನಾಥ್ ಘೋಷ್, ವಿಶ್ವಜೀತ್ ಪೋದ್ದಾರ್–2 (839.55), ಅಜಯ್ ಪಿ.ಖಾರೆ, ರಾಜು ತೋಲಾನಿ–3 (820.42), ಜಗ್ಗಿ ಬಿ.ಶಿವದಾಸಾನಿ, ಸಂದೀಪ್ ತಕ್ರಾಲ್–4 (800.55), ಟಿ.ವಿ.ರಮಣಿ, ಸುಭಾಷ್ ಭವನಾನಿ–5 (791.12), ಗೋಪಿನಾಥ್ ಮನಾ, ಸಂದೀಪ್ ದತ್ತಾ–6 (783.62), ಸಾಗನಿಕ್ ರಾಯ್, ಕೌಸ್ತಭ್ ನಂದಿ–7 (782.81), ಸುಕಾಂತ ದಾಸ್, ರಾಜೇಂದ್ರ ಸಿರೋಹಿಯ–8 (781.24), ಅರುಣ್ ಬಾಪಟ್, ಸಮೀರ್ ಬಾಸಕ್–9 (776.40), ಸಪನ್ ದೇಸಾಯಿ, ಶ್ರೀಧರನ್–10 (757.46).
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.