ADVERTISEMENT

ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟ | ಇಯಾನ್‌, ಸಂಹಿತಾಗೆ ಚಿನ್ನದ ಪದಕ

​ಪ್ರಜಾವಾಣಿ ವಾರ್ತೆ
Published 19 ನವೆಂಬರ್ 2024, 16:23 IST
Last Updated 19 ನವೆಂಬರ್ 2024, 16:23 IST
ಬಾಲಕರ 4x100 ಮೀಟರ್‌ ರಿಲೆನಲ್ಲಿ ಚಿನ್ನ ಗೆದ್ದ ದಕ್ಷಿಣ ಕನ್ನಡದ ತಂಡ
ಬಾಲಕರ 4x100 ಮೀಟರ್‌ ರಿಲೆನಲ್ಲಿ ಚಿನ್ನ ಗೆದ್ದ ದಕ್ಷಿಣ ಕನ್ನಡದ ತಂಡ   

ಬೆಂಗಳೂರು: ದಕ್ಷಿಣ ಕನ್ನಡ ಸಂಹಿತಾ ಜಿ.ರಾವ್‌ ಮತ್ತು ಇಯಾನ್‌ ಅಮನ್ನ ಅವರು ಕರ್ನಾಟಕ ಒಲಿಂಪಿಕ್‌ ಸಂಸ್ಥೆ (ಕೆಒಎ) ಆಶ್ರಯದಲ್ಲಿ ಇಲ್ಲಿ ನಡೆಯುತ್ತಿರುವ ಮಿನಿ ಒಲಿಂಪಿಕ್ಸ್‌ ಕ್ರೀಡಾಕೂಟದಲ್ಲಿ ಕ್ರಮವಾಗಿ ಬಾಲಕಿಯರ ಮತ್ತು ಬಾಲಕರ 200 ಮೀಟರ್‌ ಓಟದಲ್ಲಿ ಚಿನ್ನ ಗೆದ್ದರು.

ಕ್ರೀಡಾಕೂಟದ ಆರನೇ ದಿನವಾದ ಮಂಗಳವಾರ ನಡೆದ ಸ್ಪರ್ಧೆಯಲ್ಲಿ ಸಂಹಿತಾ ಜಿ. ರಾವ್ 27.8 ಸೆಕೆಂಡ್‌ನಲ್ಲಿ ಗುರಿ ಮುಟ್ಟಿದರು. 100 ಮೀಟರ್‌ ಓಟದಲ್ಲೂ ಚಾಂಪಿಯನ್‌ ಆಗಿದ್ದ ಇಯಾನ್‌ ಅಮನ್ನ 24.55 ಸೆಕೆಂಡ್‌ನಲ್ಲಿ ಗುರಿ ತಲುಪಿದರು.

ಫಲಿತಾಂಶ: ಬಾಲಕರು: 200 ಮೀ ಓಟ: ಇಯಾನ್‌ ಅಮನ್ನ (ಮಂಗಳೂರು, ಕಾಲ 24.55ಸೆ)–1, ಈರಣ್ಣ ಬಿ. ಹಡಪಾಡಿ (ಉಡುಪಿ)–2, ಆಶೀಶ್ ಆರ್. (ಮೈಸೂರು)–3; 600 ಮೀ. ಓಟ: ಅಜಯ್ ಪೃಥ್ವಿರಾಜ್ ಎಂ.ಎಲ್. (ಮೈಸೂರು, 1ನಿ. 28.6ಸೆ)–1, ಚಿರಂತ್ ಎಂ. ಕಶ್ಯಪ್‌ (ಚಿಕ್ಕಬಳ್ಳಾಪುರ)–2, ಆದಿತ್ಯ (ದಕ್ಷಿಣ ಕನ್ನಡ)–3; ಲಾಂಗ್‌ಜಂಪ್‌: ಮಿಹಿರ್ ಮುಕುಲ್ ಕರ್ಕೇರ (ಉಡುಪಿ, ಜಿಗಿತ 5.84 ಮೀ)–1, ಕೌಶಿಕ್ ಪಿ. ಶೆಟ್ಟಿಗಾರ್‌ (ದಕ್ಷಿಣ ಕನ್ನಡ)–2, ಜಿಷ್ಣು ಯಶಸ್ಸನ್ (ಹಾಸನ)–3; ಜಾವೆಲಿನ್‌ ಥ್ರೋ: ಚಿರಾಗ್‌ ಎಂ.ಎಲ್‌ (ತುಮಕೂರು, ಎಸೆತ 36.80 ಮೀ)–1, ಧನುಷ್‌ ಡಿ.ಆರ್‌. (ಕೋಲಾರ)–2, ನಿರಂಜನ್‌ ಎಂ.ಕೆ. (ರಾಮನಗರ)–3; 4x100 ಮೀ. ರಿಲೇ: ದಕ್ಷಿಣ ಕನ್ನಡ (ಕಾಲ 49.2ಸೆ)–1, ಶಿವಮೊಗ್ಗ–3; 60 ಮೀ ಓಟ: ಸಲೀಮ್‌ ಮೊಹಮ್ಮದ್ ಗೊರೆಸಾಬ್ (ದಕ್ಷಿಣ ಕನ್ನಡ, ಕಾಲ 7.5ಸೆ)–1, ವಂಶಿ ಟಿ. (ಶಿವಮೊಗ್ಗ)–2, ಸಿದ್ಧ ರೆಡ್ಡಿ (ಯಾದಗಿರಿ)–3

ADVERTISEMENT

ಬಾಲಕಿಯರು: 200 ಮೀ. ಓಟ: ಸಂಹಿತಾ ಜಿ. ರಾವ್ (ದಕ್ಷಿಣ ಕನ್ನಡ, ಕಾಲ 27.8ಸೆ)–1, ನಿಶ್ಚಿತಾ ಪಿ ಗೌಡ (ಮೈಸೂರು)–2, ಮಾಣಿಕಾ ಆದ್ಯಾ ಎಸ್ (ಮೈಸೂರು)–3; 600 ಮೀ. ಓಟ: ಗೌರಿ ಪೂಜಾರಿ (ಬೆಳಗಾವಿ, ಕಾಲ 1ನಿ. 40.6ಸೆ)–1, ಪೃಥ್ವಿ ಧರೆಪ್ಪ ಬೈಕೋಡ (ಬಾಗಲಕೋಟೆ)–2, ದಿವ್ಯಾ ಎನ್‌. (ರಾಮನಗರ)–3; ಷಾಟ್‌ಪಟ್‌: ತೇಜಸ್ವಿನಿ ಜಿ.ಆರ್‌ (ಬೆಂಗಳೂರು ನಗರ, ಎಸೆತ 11.62 ಮೀ)–1, ಪರಿಣಿತಾ ಕೆ. (ರಾರಾಜಿನಗರ)–2, ವೈಷ್ಣವಿ ಎಸ್‌. ಗೌಡ (ರಾಮನಗರ)–3; 4x100 ಮೀ. ರಿಲೇ: ಮೈಸೂರು (ಕಾಲ 53.4ಸೆ)–1, ಬೆಂಗಳೂರು ನಗರ–2, ತುಮಕೂರು–3; 60 ಮೀ ಓಟ: ಪೂಜಾ (ಉಡುಪಿ, ಕಾಲ 8ಸೆ)–1, ಖುಷಿ ಎಸ್‌. (ಶಿವಮೊಗ್ಗ)–2, ಯುಕ್ತಿ ಕೆ. (ಮೈಸೂರು)–3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.