ADVERTISEMENT

ಮಿನಿ ಒಲಿಂಪಿಕ್ಸ್ | ಸೈಕ್ಲಿಂಗ್: ಸಂಗಮೇಶ್, ನಂದಿನಿ ಮಿಂಚು

ಆರ್ಚರಿಯಲ್ಲಿ ದಕ್ಷ, ಮಕೂಲಿಕಾಗೆ ಚಿನ್ನ

​ಪ್ರಜಾವಾಣಿ ವಾರ್ತೆ
Published 16 ನವೆಂಬರ್ 2024, 19:01 IST
Last Updated 16 ನವೆಂಬರ್ 2024, 19:01 IST
   

ಬೆಂಗಳೂರು: ಬಾಗಲಕೋಟೆಯ ಸಂಗಮೇಶ್ ತೋಳಮಟ್ಟಿ ಅವರು ಇಲ್ಲಿ ನಡೆಯುತ್ತಿರುವ ಮಿನಿ ಒಲಿಂಪಿಕ್ ಕ್ರೀಡಾಕೂಟದ ಬಾಲಕರ ಸೈಕ್ಲಿಂಗ್‌ನಲ್ಲಿ 20 ಕಿ.ಮೀ ರೋಡ್‌ ಮಾಸ್ ಸ್ಟಾರ್ಟ್‌ ವಿಭಾಗದಲ್ಲಿ ಮೊದಲ ಸ್ಥಾನ ಗಳಿಸಿದರು. ಬಾಲಕಿಯರ ವಿಭಾಗದದಲ್ಲಿ ನಂದಿನಿ ಲಮಾಣಿ ಪ್ರಥಮರಾದರು. 

ಬಾಲಕರ ಆರ್ಚರಿ ವಿಭಾಗದಲ್ಲಿ ಬೆಂಗಳೂರಿನ ಎಸ್‌.ಪಿ ದಕ್ಷ ಹಾಗೂ ಬಾಲಕಿಯರ ವಿಭಾಗದಲ್ಲಿ ಮಕೂಲಿಕಾ ಚಟರ್ಜಿ ಅವರು ಚಿನ್ನದ ಪದಕ ಗೆದ್ದರು.

ಫಲಿತಾಂಶಗಳು: ಬಾಲಕರು: ಆರ್ಚರಿ: ಇಂಡಿಯನ್ ರೌಡ್ –20 ಮೀ: ಎಸ್‌.ಪಿ. ದಕ್ಷ–1, ನಮನ್ ಚಿನ್ನಪ್ಪ–2, ಆರ್. ಜಿ. ತಿರಿಸ್ –3 (ಎಲ್ಲರೂ ಬೆಂಗಳೂರು). ಇಂಡಿಯನ್ ಓವರ್‌ಆಲ್‌: ಎಸ್.ಪಿ. ದಕ್ಷ–1, ಆರ್ಯವ್ ತೇಜಸ್–2, ನವೀನ್–3 (ಎಲ್ಲರೂ ಬೆಂಗಳೂರು). ಇಂಡಿಯನ್ ಎಲಿಮಿನೇಷನ್: ನಮನ್ ಚಿನ್ನಪ್ಪ–1, ಆದಿರಾಜು  (ಬೆಂಗಳೂರು)–1, ಉದಯ ವಿಹಾನ (ಬೆಂಗಳೂರು ಅರ್ಬನ್)–2, ಆರ್. ಜಿ. ತಿರಿಸ್ (ಬೆಂಗಳೂರು)–3. ಕಂಪೌಂಡ್ ರ‍್ಯಾಂಕಿಂಗ್: ಭುವಾಸ್ ಶರ್ಮಾ (ಬೆಂಗಳೂರು)–1, ಶ್ರೀ ಸುಧನ್ವ ಗೌಡ (ಬೆಂಗಳೂರು ಅರ್ಬನ್)–2, ಬಿ.ಎ. ಗೌರವ್ (ಬೆಂಗಳೂರು)–3. 

ADVERTISEMENT

ಸೈಕ್ಲಿಂಗ್: 20 ಕಿ.ಮೀ. ರೋಡ್ ಮಾಸ್‌ ಸ್ಟಾರ್ಟ್: ಸಂಗಮೇಶ್ ತೋಳಮಟ್ಟಿ (ಬಾಗಲಕೋಟೆ)–1, ನಿಖಿಲ್‌ರಾದೊಯ್ ತೆರಿನಗಡ್ಡಿ (ಗದಗ)–2, ವಿ. ವಾಗೀಶ್ ಗೌಡ (ಮೈಸೂರು)–3. 

ಜಿಮ್ನಾಸ್ಟಿಕ್ಸ್: ಆರ್ಟಿಸ್ಟಿಕ್ ಟೀಮ್: ಬೆಂಗಳೂರು –1, ತುಮಕೂರು–2, ಧಾರವಾಡ–3. ಆಲ್‌ರೌಂಡ್ ವೈಯಕ್ತಿಕ: ರಿಯಾ ಬಾಫಣಾ (ಬೆಂಗಳೂರು)–1, ತುಮಕೂರು–2, ಧಾರವಾಡ–3. ಆಲ್‌ರೌಂಡ್ ವೈಯಕ್ತಿಕ: ಉತ್ಕರ್ಷ ಬೊಕಾರಿಯಾ (ಬೆಂಗಳೂರು)–1, ಕ್ಯಾಲ್ವಿನ್ ಆ್ಯಷ್ಲೆ ಚಾರ್ಲ್ಸ್ (ಬೆಂಗಳೂರು)–2, ಸಂಕೇತ್ ಮಾನೆ (ಧಾರವಾಡ)–3. 

ಬಾಲಕಿಯರು: ಆರ್ಚರಿ: ರಿಕರ್ವ್ ರೌಂಡ್ (70ಮೀ) – ಮಕೂಲಿಕಾ ಚಟರ್ಜಿ –1, ಶ್ರೀಯಾ ಶರಣ್ –2, ಭೂಮಿಕುಮಾರಿ –3 (ಎಲ್ಲರೂ ಬೆಂಗಳೂರು). ಇಂಡಿಯನ್: ಅನ್ನಪೂರ್ಣ (ಯಾದಗಿರ)–1, ಆರ್. ಸ್ಪಂದನಾ (ಬೆಂಗಳೂರು)–2, ವಿ. ಐಶ್ವರ್ಯಾ (ಬೆಂಗಳೂರು)–3. ರಿಕರ್ವ್ ಎಲಿಮಿನೇಷನ್: ಮಕೂಲಿಕಾ ಚಟರ್ಜಿ (ಬೆಂಗಳೂರು)–1, ಭೂಮಿಕುಮಾರಿ (ಬೆಂಗಳೂರು)–2, ಶ್ರಿಯಾ ಶರಣ್ (ಬೆಂಗಳೂರು)–3, ಇಂಡಿಯನ್ ರೌಂಡ್ ಓವರ್‌ ಆಲ್: ಆರ್. ಸ್ಪಂದನಾ (ಬೆಂಗಳೂರು)–1, ಅನ್ನಪೂರ್ಣಾ (ಯಾದಗಿರ)–2, ವಿ. ಐಶ್ವರ್ಯಾ (ಬೆಂಗಳೂರು)–3.  ಇಂಡಿಯನ್ ರೌಂಡ್ ಎಲಿಮಿನೇಷನ್: ಆರ್. ಸ್ಪಂದನಾ (ಬೆಂಗಳೂರು)–1, ಬದ್ದೆಲಾ ಕೋವಿದಾಶ್ರೀ (ಬೆಂಗಳೂರು)–2, ಅನ್ನಪೂರ್ಣಾ (ಯಾದಗೀರ)–3. 

ಸೈಕ್ಲಿಂಗ್: 20 ಕಿ.ಮೀ ರಸ್ತೆ ಮಾಸ್‌ಸ್ಟಾರ್ಟ್‌: ನಂದಿನಿ ಲಮಾಣಿ (ಬಾಗಲಕೋಟೆ)–1, ನಿತಿಲಾ ದಾಸ್ (ಬೆಂಗಳೂರು)–2, ಕೌಶಲ್ಯಾ ಬಿ ರಾಮಗೊಂಡ (ಧಾರವಾಡ)–3

ಜಿಮ್ನಾಸ್ಟಿಕ್ಸ್: ರಿಧಮಿಕ್ (ಕ್ಲಬ್ಸ್‌): ರಿಯಾ ಬಾಫಣಾ (ಬೆಂಗಳೂರು)–1, ದಿತ್ಯಾ ಕೆ. ಮುರಳೀಧರ್ (ಬೆಂಗಳೂರು)–2, ಪೂರ್ವಿ ರವಿ ದೊಡ್ಡಮನಿ (ಧಾರವಾಡ)–3. ರಿಧಮಿಕ್ ಹೂಪ್: ರಿಯಾ ಬಾಫಣಾ (ಬೆಂಗಳೂರು)–1, ದಿತ್ಯಾ ಮುರಳೀಧರ್ (ಬೆಂಗಳೂರು)–2, ಅನನ್ಯಾ ಬಿ ಮೆಣಸಿನಕಾಯಿ (ಧಾರವಾಡ)–3. ರಿಧಮಿಕ್ ಕಬಾಲ್: ದಿತ್ಯಾ ಮುರಳೀಧರ್ –1, ರಿಯಾ ಬಾಫಣಾ –2, ಅನನ್ಯಾ ಮೆಣಸಿನಕಾಯಿ–3. ರಿಬ್ಬನ್: ರಿಯಾ ಬಾಫಣಾ–1, ದಿತ್ಯಾ ಮುರಳೀಧರ್–2, ಅನನ್ಯಾ ಮೆಣಸಿನಕಾಯಿ–3 ಆಲ್‌ರೌಂಡ್‌ ವೈಯಕ್ತಿಕ: ರಿಯಾ ಬಾಫಣಾ–1, ದಿತ್ಯಾ ಮುರಳೀಧರ–2, ಪೂರ್ವಿ ರವಿ ದೊಡ್ಡಮನಿ (ಧಾರವಾಡ)–3. ಟೀಮ್ ಚಾಂಪಿಯನ್‌ಷಿಪ್: ಬೆಂಗಳೂರು –1, ಮೈಸೂರು–2, ಧಾರವಾಡ–3

ವೇಟ್‌ಲಿಫ್ಟಿಂಗ್: 45 ಕೆಜಿ: ನಿಶಾ –1, ಶಾನಿಕಾ –2 (ಇಬ್ಬರೂ ದಕ್ಷಿಣ ಕನ್ನಡ ಜಿಲ್ಲೆ), ವತ್ಸಲಾ ಶ್ರೀ ವಿಷ್ಣು (ಮೈಸೂರು)–3.  

ಫೆನ್ಸಿಂಗ್: ಫಾಯಲ್: ಅದಿತಿ ಜಿ ಗೌತಮ್ –1, ಶ್ರೇಯಾ ಎಲ್ ಗೌಡ–2, ಆರ್.ಕೆ. ಮನ್ವಿತಾ–3(ಎಲ್ಲರೂ ಬೆಂಗಳೂರು). ಈಪೀ: ಶ್ರೀದೇವಿ ತೇಜಸ್ವಿನಿ (ಬೆಂಗಳೂರು)–1, ಟಿ. ಪಾವನಿ (ಬೆಂಗಳೂರು)–2, ಎನ್. ಕೃತಿಕಾ (ಚಾಮರಾಜನಗರ)–3. ಸೆಬ್ರೆ: ದೀಕ್ಷಾ ಎಲ್ ಗೌಡ(ಬೆಂಗಳೂರು)–1, ಆರ್. ಕನಿಷ್ಕಾ (ಬೆಂಗಳೂರು)–2, ಅನಿಕಾ ತೆಜಪುಷ್ಪಲ್, ಎಸ್‌. ಸ್ಪೂರ್ತಿ (ಬೆಂಗಳೂರು–3

ಟೇಬಲ್ ಟೆನಿಸ್: ಸಿಂಗಲ್ಸ್: ಮಿಹಿಕಾ ಉಡುಪಾ –1, ರಾಶಿ ವಿ ರಾವ್ –2, ಐರಿನ್ ಅನಾ ಸುಭಾಶ್ –3 (ಎಲ್ಲರೂ ಬೆಂಗಳೂರು). ಡಬಲ್ಸ್: ಐರಿನ್ ಅನಾ ಸುಭಾಷ್–ಮಿಹಿಕಾ ಉಡುಪಾ–1, ದೀಕ್ಷಾ ನಾಯಕ್–ರಾಶಿ ರಾವ್ –2, ಜ್ಯೋತಿ ಮನೋಹರ್ ಮುಗಟಿ–ಸಾನ್ವಿ ಭಸ್ಮೆ (ಬೆಂಗಳೂರು–3. ಲಕ್ಷಿತಾ–ಸಂಜನಾ ಭುವನೇಶ್ವರ್ (ಮಂಡ್ಯ)–3. 

ಜುಡೊ: 28 ಕೆಜಿ: ಸ್ವರೂಪಾ ನಿಂಗುರೆ (ಬೆಳಗಾವಿ)–1, ಎಸ್. ತನ್ವಿತಾ (ಚಿಕ್ಕಮಗಳೂರು)–2, ಎ.ಆರ್. ಅನನ್ಯಾ (ದ.ಕ)–3, ಅನುಷ್ಕಾ (ತುಮಕೂರು)–3. 32 ಕೆಜಿ: ಕಾವೇರಿ ಸೂರ್ಯವಂಶಿ (ಬೆಳಗಾವಿ)–1, ಬಿ. ಅಮೃತಾ (ಚಿಕ್ಕಮಗಳೂರು)–2, ಆರ್. ಧನ್ಯಶ್ರೀ (ಬೆಂಗಳೂರು)–3, ದರ್ಶಿನಿ ಬಾರಂಗಿ (ಬೆಳಗಾವಿ)–3. 

36 ಕೆ.ಜಿ: ಆರ್. ನವಿರಾ (ಬೆಂಗಳೂರು)–1, ಎನ್. ತೇಜು (ಶಿವಮೊಗ್ಗ)–2, ಅರ್ಪಿತಾ ಕಾಮತೆ (ಬೆಳಗಾವಿ)–3. ಕೆ.ಬಿ. ಮಿಲನಾ (ತುಮಕೂರು)–3.  40 ಕೆಜಿ: ಶ್ರಾವಂತಿ ಸಿಂಗ್ (ಚಿಕ್ಕಮಗಳೂರು)–1, ಸೃಷ್ಠಿ ಸೊಂಟಕ್ಕಿ (ಬೆಳಗಾವಿ)–2, ಹಂಸಿಕಾ (ದ.ಕ)–3.  ಡಿ.ಆರ್. ಸಂಗೀತಾ (ಶಿವಮೊಗ್ಗ)–3. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.