ADVERTISEMENT

ಕುಸ್ತಿಪಟುಗಳ ನಡೆಗೆ ಸಚಿವಾಲಯ ಅಸಮಾಧಾನ

​ಪ್ರಜಾವಾಣಿ ವಾರ್ತೆ
Published 25 ಫೆಬ್ರುವರಿ 2023, 22:30 IST
Last Updated 25 ಫೆಬ್ರುವರಿ 2023, 22:30 IST
   

ನವದೆಹಲಿ: ಅಂತರರಾಷ್ಟ್ರೀಯ ಸ್ಪರ್ಧೆಗಳಿಂದ ಭಾರತದ ಪ್ರಮುಖ ಕುಸ್ತಿಪಟುಗಳು ಹಿಂದೆ ಸರಿಯುತ್ತಿರುವುದು ಕೇಂದ್ರ ಕ್ರೀಡಾ ಸಚಿವಾಲಯದ ಅಸಮಾಧಾನಕ್ಕೆ ಕಾರಣವಾಗಿದೆ.

ವಿನೇಶಾ ಪೋಗಟ್‌, ಬಜರಂಗ್ ಪುನಿಯಾ, ರವಿ ದಹಿಯಾ, ದೀಪಕ್ ಪುನಿಯಾ, ಅನ್ಶು ಮಲಿಕ್‌ ಮತ್ತು ಸಂಗೀತಾ ಮೊರ್ ಅವರು ಜಾಗ್ರೆಬ್‌ ಮತ್ತು ಅಲೆಕ್ಸಾಂಡ್ರಿಯಾದಲ್ಲಿ ನಿಗದಿಯಾಗಿರುವ ಯುಡಬ್ಲ್ಯುಡಬ್ಲ್ಯು ರ‍್ಯಾಂಕಿಂಗ್ ಸಿರೀಸ್ ಟೂರ್ನಿಗಳಿಂದ ಹಿಂದೆ ಸರಿದಿದ್ದರು. ಈ ಹಿಂದೆ ನಡೆದಿದ್ದ ಕೂಟದಿಂದಲೂ ಪ್ರಮುಖ ಕುಸ್ತಿಪಟುಗಳು ಹಿಂದೆ ಸರಿದಿದ್ದರು.

ಟಾರ್ಗೆಟ್‌ ಒಲಿಂಪಿಕ್ಸ್‌ ಪೋಡಿಯಂ ಯೋಜನೆಯಡಿ (ಟಾಪ್ಸ್) ಕುಸ್ತಿಪಟುಗಳ ಸಿದ್ಧತೆ ಮತ್ತು ತರಬೇತಿಗಾಗಿ ಧನಸಹಾಯ ನೀಡುವ ಸರ್ಕಾರಕ್ಕೆ ಈ ನಡೆಯಿಂದ ಕಿರಿಕಿರಿಯಾಗಿದೆ.

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.