ADVERTISEMENT

ಭಾರತ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ರಾಣಿ ರಾಂಪಾಲ್‌ ಸಾಧನೆ: ಮೋದಿ ಶ್ಲಾಘನೆ

ಪಿಟಿಐ
Published 29 ಅಕ್ಟೋಬರ್ 2024, 4:15 IST
Last Updated 29 ಅಕ್ಟೋಬರ್ 2024, 4:15 IST

ರಾಣಿ ರಾಂಪಾಲ್‌

ರಾಣಿ ರಾಂಪಾಲ್‌

ನವದೆಹಲಿ: ಅಂತರರಾಷ್ಟ್ರೀಯ ಈಚೆಗೆ ನಿವೃತ್ತಿ ಘೋಷಿಸಿದ ಭಾರತ ಮಹಿಳಾ ಹಾಕಿ ತಂಡದ ಮಾಜಿ ನಾಯಕಿ ರಾಣಿ ರಾಂಪಾಲ್‌ ಅವರ ಸಾಧನೆಯನ್ನು ಪ್ರಧಾನಿ ನರೇಂದ್ರ ಮೋದಿ ಶ್ಲಾಘಿಸಿದ್ದಾರೆ.

ADVERTISEMENT

29 ವರ್ಷ ವಯಸ್ಸಿನ ರಾಣಿ ಅವರು 16 ವರ್ಷಗಳ ಹಾಕಿ ವೃತ್ತಿಜೀವನಕ್ಕೆ ಗುರುವಾರ ವಿದಾಯ ಹೇಳಿದರು. ಅವರ ನೇತೃತ್ವದಲ್ಲಿ ಭಾರತ ತಂಡವು 2021ರ ಟೋಕಿಯೊ ಒಲಿಂಪಿಕ್ಸ್‌ ನಲ್ಲಿ ನಾಲ್ಕನೇ ಸ್ಥಾನ ಗಳಿಸಿತ್ತು. ಫಾರ್ವರ್ಡ್‌ ಆಟಗಾರ್ತಿಯಾಗಿದ್ದ ಅವರು, 254 ಪಂದ್ಯಗಳಲ್ಲಿ 205 ಗೋಲು ಗಳಿಸಿದ್ದಾರೆ.

‘ಭಾರತ ಮಹಿಳಾ ಹಾಕಿಯಲ್ಲಿ ನಿಮ್ಮ ಜರ್ಸಿ ಸಂಖ್ಯೆ ‘28’ ಸಾಟಿಯಿಲ್ಲದ ಕೌಶಲ ಮತ್ತು ತಡೆಯಲಾಗದ ಗೋಲುಗಳಿಗೆ ಸಮನಾಗಿದೆ. ದೇಶದ ದಿಗ್ಗಜ ಆಟಗಾರರ ಸಾಲಿನಲ್ಲಿ ನೀವು ಸ್ಥಾನ ಪಡೆದಿದ್ದೀರಿ’ ಎಂಬ ಮೋದಿ ಹೊಗಳಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.