ಪ್ಯಾರಿಸ್: ಮೊರಾಕ್ಕೊದ ಫಾತಿಮಾ ಎಝ್ರಾ ಎಲ್ ಇದ್ರಿಸಿ ಅವರು ಪ್ಯಾರಾಲಿಂಪಿಕ್ಸ್ ಕೊನೆಯ ದಿನವಾದ ಭಾನುವಾರ ದೃಷ್ಟಿದೋಷವುಳ್ಳವರ ಮ್ಯಾರಥಾನ್ ಓಟದ ಮಹಿಳೆಯರ ವಿಭಾಗದಲ್ಲಿ ವಿಶ್ವ ದಾಖಲೆ ಮುರಿದು ಗಮನ ಸೆಳೆದರು.
ಎಲ್ ಇದ್ರಿಸ್ಸಿ 2 ಗಂಟೆ 48 ನಿಮಿಷ 36 ಸೆಕೆಂಡುಗಳಲ್ಲಿ ಗುರಿತಲುಪಿದರು. ಹಳೆಯ ದಾಖಲೆ ಜಪಾನ್‌ನ ಮಿಸಾಟೊ ಮಿಷಿಶಿಟಾ ಅವರ ಹೆಸರಿನಲ್ಲಿತ್ತು. ಅವರು ಹೋಫು ನಗರದಲ್ಲಿ 2020ರಲ್ಲಿ ಈ ಓಟವನ್ನು ಮುಗಿಸಲು ಸುಮಾರು ಆರು ನಿಮಿಷ ಹೆಚ್ಚು ತೆಗೆದುಕೊಂಡಿದ್ದರು. ಮೊರಾಕ್ಕೊದವರೇ ಆದ ಮೇರಿಯಂ ಎನ್–ನೂರ್ಹಿ ಅವರು 9 ನಿಮಿಷ ಹಿಂದೆಬಿದ್ದು ಬೆಳ್ಳಿ ಗೆದ್ದರೆ, ಜಪಾನ್‌ನ ಮಿಚಿಶಿಟಾ ಕಂಚು ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.