ADVERTISEMENT

ಹಾಕಿ ಆಟಗಾರ ವಿವೇಕ್‌ಗೆ ₹1ಕೋಟಿ ಬಹುಮಾನ ಘೋಷಿಸಿದ ಮಧ್ಯ ಪ್ರದೇಶದ ಸರ್ಕಾರ

ಪಿಟಿಐ
Published 9 ಆಗಸ್ಟ್ 2024, 12:27 IST
Last Updated 9 ಆಗಸ್ಟ್ 2024, 12:27 IST
<div class="paragraphs"><p>ವಿವೇಕ್ ಸಾಗರ್ ಪ್ರಸಾದ್ (ಬಲಬದಿ)</p></div>

ವಿವೇಕ್ ಸಾಗರ್ ಪ್ರಸಾದ್ (ಬಲಬದಿ)

   

(ರಾಯಿಟರ್ಸ್ ಚಿತ್ರ)

ಭೋಪಾಲ್‌: ಪ್ಯಾರಿಸ್‌ ಕ್ರೀಡೆಗಳಲ್ಲಿ ಕಂಚಿನ ಪದಕ ಗೆದ್ದ ಭಾರತ ಹಾಕಿ ತಂಡದ ಸದಸ್ಯರಲ್ಲಿ ಒಬ್ಬರಾದ ವಿವೇಕ್ ಸಾಗರ್ ಪ್ರಸಾದ್ ಅವರಿಗೆ ಮಧ್ಯ ಪ್ರದೇಶದ ಸರ್ಕಾರ ಶುಕ್ರವಾರ ₹1ಕೋಟಿ ಬಹುಮಾನ ಘೋಷಿಸಿದೆ.

ADVERTISEMENT

52 ವರ್ಷಗಳ ನಂತರ ಭಾರತ ಹಾಕಿ ತಂಡ ಸತತ ಒಲಿಂಪಿಕ್ಸ್‌ಗಳಲ್ಲಿ ಕಂಚಿನ ಪದಕ ಗೆದ್ದುಕೊಂಡಿತ್ತು. ಗುರುವಾರ ಪ್ಲೇ ಆಫ್‌ ಪಂದ್ಯದಲ್ಲಿ 2–1 ಗೋಲುಗಳಿಂ ಸ್ಪೇನ್ ಮೇಲೆ ಜಯಗಳಿಸಿತ್ತು.

ವಿವೇಕ್ ಸಾಗರ್ ಅವರು ಮಧ್ಯಪ್ರದೇಶದವರು. ಅವರನ್ನು ಅಭಿನಂದಿಸಿರುವ  ಮುಖ್ಯಮಂತ್ತಿ ಮೋಹನ್ ಯಾದವ್‌ ಬಹುಮಾನ ಪ್ರಕಟಿಸಿದರು. ದೂರವಾಣಿಯಲ್ಲಿ ಅವರನ್ನು ಅಭಿನಂದಿಸಿದ ಯಾದವ್‌, ನಿಮಗೆ ಬಹುಮಾನವಾಗಿ ಮಧ್ಯಪ್ರದೇಶ ಸರ್ಕಾರ ₹1ಕೋಟಿ ಮೊತ್ತವನ್ನು ನಿಮ್ಮ ಖಾತೆಗೆ ವರ್ಗಾಯಿಸಲಿದೆ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.