ಬೆಂಗಳೂರು: ಅಥರ್ವ ನವರಂಗ ಮತ್ತು ಸಹನಾ ಎಚ್. ಮೂರ್ತಿ ಅವರು ಶುಕ್ರವಾರ ಡಾ.ಎಂ.ಎಸ್.ರಾಮಯ್ಯ ಸ್ಮಾರಕ ಕರ್ನಾಟಕ ರಾಜ್ಯ ರ‍್ಯಾಂಕಿಂಗ್ ಟೇಬಲ್ ಟೆನಿಸ್ ಟೂರ್ನಿಯಲ್ಲಿ ಕ್ರಮವಾಗಿ 19 ವರ್ಷದೊಳಗಿನ ಬಾಲಕರ ಮತ್ತು ಬಾಲಕಿಯರ ಪ್ರಶಸ್ತಿಯನ್ನು ಗೆದ್ದರು.
ದೊಡ್ಡಬಳ್ಳಾಪುರದ ಹಿಲ್ ಸ್ಪೋರ್ಟ್ಸ್ ಅಕಾಡೆಮಿಯಲ್ಲಿ ಆರಂಭವಾದ ಟೂರ್ನಿಯ ಮೊದಲ ದಿನ ಬಾಲಕರ ಫೈನಲ್‌ನಲ್ಲಿ ಅಥರ್ವ 4–2ರಿಂದ (8-11, 11-9, 7-11, 11-3, 11-9, 11-7) ಅರ್ಣವ್ ಎನ್. ಅವರನ್ನು ಮಣಿಸಿದರು. ಸೆಮಿಫೈನಲ್‌ನಲ್ಲಿ ಅಥರ್ವ 3–0ಯಿಂದ ವಿಭಾಸ್ ವಿ.ಜಿ. ವಿರುದ್ಧ; ಅರ್ಣವ್ 3–2ರಿಂದ ಬಿ.ಆರ್.ಗೌರವ್ ವಿರುದ್ಧ ಜಯ ಸಾಧಿಸಿದ್ದರು.
ಬಾಲಕಿಯರ ಫೈನಲ್‌ನಲ್ಲಿ ಸಹನಾ 4–2ರಿಂದ (11-9, 11-7, 11-4, 11-13, 9-11 , 11- 4) ಹಿಮಾಂಶಿ ಚೌಧರಿ ಅವರನ್ನು ಸೋಲಿಸಿದರು. ಸೆಮಿಫೈನಲ್‌ನಲ್ಲಿ ಸಹನಾ 3–0ಯಿಂದ ತೃಪ್ತಿ ಪುರೋಹಿತ್ ಅವರನ್ನು; ಹಿಮಾಂಶಿ 3–1ರಿಂದ ನೀತಿ ಅಗರವಾಲ್ ಅವರನ್ನು ಮಣಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.