ADVERTISEMENT

ಪಿಬಿಎಲ್‌: ರಾಕೆಟ್ಸ್ ಸೆಮಿಫೈನಲ್‌ಗೆ

​ಪ್ರಜಾವಾಣಿ ವಾರ್ತೆ
Published 5 ಜನವರಿ 2019, 20:15 IST
Last Updated 5 ಜನವರಿ 2019, 20:15 IST
ಸಮೀರ್ ವರ್ಮಾ
ಸಮೀರ್ ವರ್ಮಾ   

ಅಹಮದಾಬಾದ್‌ (ಪಿಟಿಐ): ಆ್ಯಂಟನ್‌ಸೆನ್ ಮತ್ತು ಸಮೀರ್ ವರ್ಮಾ ಅವರ ಅಮೋಘ ಆಟದ ಬಲದಿಂದ ಮುಂಬೈ ರಾಕೆಟ್ಸ್‌ ತಂಡ ಪ್ರೀಮಿಯರ್ ಬ್ಯಾಡ್ಮಿಂಟನ್ ಲೀಗ್‌ನ ಶನಿವಾರದ ಹಣಾಹಣಿಯಲ್ಲಿ ಚೆನ್ನೈ ಸ್ಮ್ಯಾಷರ್ಸ್‌ ಎದುರು ಗೆದ್ದಿತು. ಈ ಮೂಲಕ ಸೆಮಿಫೈನಲ್‌ ಪ್ರವೇಶಿಸಿತು.

ದಿ ಅರೆನಾ ಬೈ ಟ್ರಾನ್ಸ್‌ಸ್ಟೇಡಿಯಾದಲ್ಲಿ ರಾತ್ರಿ ನಡೆದ ಹಣಾಹಣಿಯಲ್ಲಿ ಟ್ರಂಪ್ ಪಂದ್ಯಗಳ ಸಮೇತ ನಾಲ್ಕು ಪಂದ್ಯಗಳಲ್ಲಿ ಮುಂಬೈ ಭರ್ಜರಿ ಜಯ ಸಾಧಿಸಿತು.

ಮೊದಲ ಪಂದ್ಯದಲ್ಲಿ ಆ್ಯಂಟನ್‌ಸೆನ್‌, 15–14, 15–11ರಿಂದ ಔಸೇಪ್‌ ಎದುರು ಗೆದ್ದು ಶುಭಾರಂಭ ಮಾಡಿದರು. ಮಿಶ್ರ ಡಬಲ್ಸ್‌ನಲ್ಲಿ ಜಂಗ್ ಮತ್ತು ಬೆರ್ನಾದೆತ್‌ ಜೋಡಿ 15–14, 15–14ರಿಂದ ಅಡ್ಕಾಕ್ ದಂಪತಿಯನ್ನು ಮಣಿಸಿತು. ಇದು ಚೆನ್ನೈಗೆ ಟ್ರಂಪ್ ಪಂದ್ಯ ಆಗಿತ್ತು. ಮೂರನೇ ಪಂದ್ಯದಲ್ಲಿ ಪ್ರಭುದೇಸಾಯಿ ವಿರುದ್ಧ 15–7, 15–8ರಿಂದ ಗೆದ್ದ ಹ್ಯೂನ್‌ ಸ್ಮ್ಯಾಷರ್ಸ್‌ಗೆ ಮೊದಲ ಜಯ ಗಳಿಸಿಕೊಟ್ಟರು.

ADVERTISEMENT

ಕಶ್ಯಪ್‌ಗೆ ಸೋಲು: ಮುಂದಿನ, ಪುರುಷರ ಸಿಂಗಲ್ಸ್‌ ಪಂದ್ಯ ಮುಂಬೈನ ಟ್ರಂಪ್ ಪಂದ್ಯ ಆಗಿತ್ತು. ಪರುಪ್ಪಳ್ಳಿ ಕಶ್ಯಪ್ ಅವರನ್ನು 12–15, 15–13, 15–9ರಿಂದ ಸೋಲಿ ಸಿದ ಸಮೀರ್ ವರ್ಮಾ ಎರಡು ಪಾಯಿಂಟ್‌ ಗಳನ್ನು ಗಳಿಸಿದರು. ಕೊನೆಯಲ್ಲಿ ಜಂಗ್ ಮತ್ತು ಡೋ ಜೋಡಿ ಚಂಗ್‌ ಮತ್ತು ಸುಮೀತ್‌ ರೆಡ್ಡಿ ಅವರನ್ನು 15–8, 15–10ರಿಂದ ಮಣಿಸಿದರು.

ಬೆಂಗಳೂರು ರ‍್ಯಾಪ್ಟರ್ಸ್ ಜಯಭೇರಿ: ಮತ್ತೊಂದು ಹಣಾಹಣಿಯಲ್ಲಿ ಬೆಂಗಳೂರು ರ‍್ಯಾಪ್ಟರ್ಸ್ ತಂಡ ನಾರ್ತ್ ಈಸ್ಟರ್ನ್ ವಾರಿಯರ್ಸ್‌ ಎದುರು 4–3ರಿಂದ ಗೆದ್ದಿತು. ಅಹ್ಸಾನ್ ಮತ್ತು ಹೇಂದ್ರ ಸತ್ಯವಾನ್‌ ಜೋಡಿ, ಕಿದಂಬಿ ಶ್ರೀಕಾಂತ್‌, ಸಾಯಿ ಪ್ರಣೀತ್‌ ಅವರು ರ‍್ಯಾಪ್ಟರ್ಸ್‌ನ ಪಂದ್ಯಗಳನ್ನು ಗೆದ್ದರು.

ಸೈನಾ ನೆಹ್ವಾಲ್‌ ಟ್ರಂಪ್ ಪಂದ್ಯಗಳನ್ನು ಗೆದ್ದು ನಾರ್ತ್ ಈಸ್ಟ್‌ಗೆ ಎರಡು ಪಾಯಿಂಟ್ ತಂದುಕೊಟ್ಟರು. ಕೊನೆಯ ಪಂದ್ಯದಲ್ಲಿ ಚುನ್ ಮತ್ತು ನಾ ಜೋಡಿ ಎಲಿಸ್ ಮತ್ತು ಸ್ಮಿತ್ ವಿರುದ್ಧ ಗೆದ್ದು ನಾರ್ತ್ ಈಸ್ಟ್‌ನ ಸೋಲಿನ ಅಂತರ ಕಡಿಮೆ ಮಾಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.