ADVERTISEMENT

commonwealth games 2022: ಲಾಂಗ್‌ಜಂಪ್‌ ಫೈನಲ್‌ಗೆ ಮುರಳಿ, ಯಹ್ಯಾ

ಪಿಟಿಐ
Published 2 ಆಗಸ್ಟ್ 2022, 13:33 IST
Last Updated 2 ಆಗಸ್ಟ್ 2022, 13:33 IST
ಮುರಳಿ ಶ್ರೀಶಂಕರ್ ಜಿಗಿತದ ಪರಿ– ಎಎಫ್‌ಪಿ ಚಿತ್ರ
ಮುರಳಿ ಶ್ರೀಶಂಕರ್ ಜಿಗಿತದ ಪರಿ– ಎಎಫ್‌ಪಿ ಚಿತ್ರ   

ಬರ್ಮಿಂಗ್‌ಹ್ಯಾಮ್‌: ಉತ್ತಮ ಸಾಮರ್ಥ್ಯ ತೋರಿದ ಭಾರತದ ಮುರಳಿ ಶ್ರೀಶಂಕರ್‌ ಮತ್ತು ಮುಹಮ್ಮದ್ ಅನೀಸ್‌ ಯಹ್ಯಾ ಅವರು ಕ್ರೀಡಾಕೂಟದ ಲಾಂಗ್‌ಜಂಪ್ ಸ್ಪರ್ಧೆಯಲ್ಲಿ ಫೈನಲ್‌ಗೆ ಲಗ್ಗೆಯಿಟ್ಟರು.

ರಾಷ್ಟ್ರೀಯ ದಾಖಲೆ ಹೊಂದಿರುವ 23 ವರ್ಷದ ಮುರಳಿ, ಮಂಗಳವಾರ ‘ಎ’ ಗುಂಪಿನ ಸ್ಪರ್ಧೆಯಲ್ಲಿ 8.05 ಮೀಟರ್ಸ್ ಸಾಧನೆ ಮಾಡಿದರು. ಇದರೊಂದಿಗೆ ಅರ್ಹತಾ ಸುತ್ತಿನಲ್ಲಿ ಮೊದಲಿಗರಾದರು. ಮೊದಲ ಸುತ್ತಿನಲ್ಲೇ ಅರ್ಹತಾ ಮಾನದಂಡ (8 ಮೀ.ಗಿಂತ ಹೆಚ್ಚು) ಮೀರಿದ್ದರಿಂದ ಬಳಿಕ ಹೆಚ್ಚಿನ ಪ್ರಯತ್ನಗಳನ್ನು ಅವರು ಮಾಡಲಿಲ್ಲ. ಅರ್ಹತಾ ಸುತ್ತಿನಲ್ಲಿ ಗಾಳಿಯ ವೇಗವೂ ಅವರಿಗೆ ನೆರವಾಯಿತು.

ಇತ್ತೀಚೆಗೆ ಅಮೆರಿಕದ ಯೂಜೀನ್‌ನಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಮುರಳಿ ಏಳನೇ ಸ್ಥಾನ (8.36 ಮೀ.) ಗಳಿಸಿದ್ದರು. ಅಲ್ಲಿ ವೈಯಕ್ತಿಕ ಶ್ರೇಷ್ಠ ದೂರವನ್ನೂ ದಾಖಲಿಸಿದ್ದರು.

ADVERTISEMENT

ಯಹ್ಯಾ ಅವರು ಬಿ ಗುಂಪಿನ ಅರ್ಹತಾ ಸ್ಪರ್ಧೆಯಲ್ಲಿ 7.68 ಮೀ. ಸಾಧನೆಯೊಂದಿಗೆ ಮೂರನೇ ಸ್ಥಾನ ಗಳಿಸಿದರು. 8.15 ಮೀಟರ್ಸ್ ಅವರ ವೈಯಕ್ತಿಕ ಶ್ರೇಷ್ಠ ಸಾಧನೆಯಾಗಿದೆ.

ಲಾಂಗ್‌ಜಂಪ್‌ ಫೈನಲ್ಸ್ ಗುರುವಾರ ನಡೆಯಲಿವೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.