ADVERTISEMENT

ಕರ್ನಾಟಕದ ಜೇಕಬ್‌ಗೆ ಕಂಚು: ನಾಡಾ ಗೈರು

ಲಖನೌನಲ್ಲಿ 59ನೇ ರಾಷ್ಟ್ರೀಯ ಅಂತರರಾಜ್ಯ ಅಥ್ಲೆಟಿಕ್ಸ್‌ ಆರಂಭ: ತಮಿಳುನಾಡು ಪ್ರಾಬಲ್ಯ

ಪಿಟಿಐ
Published 27 ಆಗಸ್ಟ್ 2019, 20:00 IST
Last Updated 27 ಆಗಸ್ಟ್ 2019, 20:00 IST

ಲಖನೌ: ಕರ್ನಾಟಕದ ಅಥ್ಲೀಟ್ ಬಿನೀಶ್ ಜೇಕಬ್ ಮಂಗಳವಾರ ಇಲ್ಲಿ ಆರಂಭವಾದ 59ನೇ ರಾಷ್ಟ್ರಮಟ್ಟದ ಅಂತರರಾಜ್ಯ ಅಥ್ಲೆಟಿಕ್ಸ್‌ ಕೂಟದ ಪುರುಷರ ಪೋಲ್‌ವಾಲ್ಟ್‌ನಲ್ಲಿ ಕಂಚಿನ ಪದಕ ಪಡೆದರು.

ತುರುಸಿನ ಪೈಪೋಟಿಯಲ್ಲಿ 4.80 ಮೀಟರ್ಸ್‌ ಎತ್ತರ ಜಿಗಿದ ಜೇಕಬ್ ಮೂರನೇ ಸ್ಥಾನ ಪಡೆದರು. ಕೇರಳದ ಜೆಸ್ಸನ್ (4.90 ಮೀ) ಮೊದಲಿಗರಾದರು. ಅವರದ್ದೇ ರಾಜ್ಯದವರಾದ ಎಬಿನ್ ಸನ್ನಿ ಎರಡನೇ ಸ್ಥಾನ ಪಡೆದರು.

ನಾಡಾ ಗೈರು: ಮಹತ್ವದ ಚಾಂಪಿಯನ್‌ಷಿಪ್ ಇದಾಗಿದ್ದು ಮೊದಲ ದಿನದ ವಿಜೇತರನ್ನು ಉದ್ದೀಪನ ಮದ್ದು ಸೇವನೆ ತಪಾಸಣೆಗೆ ಒಳಪಡಿಸಬೇಕಿದ್ದ ನಾಡಾ ಅಧಿಕಾರಿಗಳು ಗೈರಾಗಿದ್ದರು.

ADVERTISEMENT

ನಾಡಾ ಅಧಿಕಾರಿಗಳು ಮಂಗಳವಾರ ಇಲ್ಲಿಗೆ ಬರುತ್ತಾರೆ. ಪ್ರತಿದಿನವೂ ಪದಕವಿಜೇತರ ಸ್ಯಾಂಪಲ್ (ಮಾದರಿ) ಸಂಗ್ರಹಿಸಿ ಪರೀಕ್ಷೆಗೆ ಕಳಿಸಲಿದ್ದಾರೆ ಎಂದು ಉತ್ತರಪ್ರದೇಶ ಅಥ್ಲೆಟಿಕ್ಸ್‌ ಸಂಸ್ಥೆಯ ಅಧಿಕಾರಿಗಳು ಪಿ.ಕೆ. ಶ್ರೀವಾಸ್ತವ ಈ ಮೊದಲೇ ತಿಳಿಸಿದ್ದರು. ಆದರೆ, ಅಧಿಕಾರಿಗಳು ಬರಲಿಲ್ಲ. ಇದೀಗ ಚರ್ಚೆಗೆ ಗ್ರಾಸವಾಗಿದೆ.

ಫಲಿತಾಂಶಗಳು:

ಪುರುಷರು: 5000 ಮೀ ಓಟ: ಜಿ. ಲಕ್ಷ್ಮಣನ್ (ತಮಿಳುನಾಡು; ಕಾಲ: 14ನಿಮಿಷ, 34.30ಸೆಕೆಂಡು)–1, ಭೂಗಾತಾ ಶ್ರೀನು (ಆಂಧ್ರಪ್ರದೇಶ)–2, ಮಾನ್ ಸಿಂಗ್ (ಉತ್ತರಾಖಂಡ)–3; ಪೋಲ್‌ವಾಲ್ಟ್‌: ಜೆಸ್ಸನ್ (ಕೇರಳ; 4.90 ಮೀಟರ್ಸ್)–1, ಎಬಿನ್ ಸನ್ನಿ (ಕೇರಳ)–2, ಬಿನೀಶ್ ಜೇಕಬ್ (ಕರ್ನಾಟಕ – 4.80ಮೀಟರ್ಸ್) –3.

ಮಹಿಳೆಯರು : 200 ಮೀ ಓಟ: ಅರ್ಚನಾ ಸುಶೀಂದ್ರನ್ (ಕಾಲ: 23.39ಸೆ)–1, ವಿ. ರೇವತಿ –2, ಧನಲಕ್ಷ್ಮೀ –3 (ಮೂವರೂ ತಮಿಳುನಾಡಿನವರು). 5000 ಮೀ: ಪರುಲ್ ಚೌಧರಿ (ಉತ್ತರಪ್ರದೇಶ)–1, ಎಲ್ ಸುರಿಯಾ (ತಮಿಳುನಾಡು)–2, ಆರತಿ ಪಾಟೀಲ (ಮಹಾರಾಷ್ಟ್ರ)–3. ಡಿಸ್ಕಸ್‌ ಥ್ರೋ: ನವಜೀತ್ ಕೌರ್ ಧಿಲ್ಲೊನ್ (ಪಂಜಾಬ್; ದೂರ: 55.42ಮೀ)–1, ಸುರವಿ ಬಿಸ್ವಾವಸ್ (ಬಂಗಾಳ)–2, ಪ್ರಮಿಳಾ (ರಾಜಸ್ಥಾನ)–3. ಹ್ಯಾಮರ್ ಥ್ರೋ: ಮಂಜು ಬಾಲಾ (ರಾಜಸ್ಥಾನ; 57.71ಮೀ)–1, ಜ್ಯೋತಿ ಜಾಖಡ್ (ಹರಿಯಾಣ)–2, ಅನ್ಮೋಲ್ ಕೌರ್ (ಪಂಜಾಬ್)–3. ಹೈಜಂಪ್: ಅತಿರಾ ಸೋಮರಾಜ್ (ಕೇರಳ)–1, ಲಿಬಿಯಾ ಶಾಜಿ (ಕೇರಳ)–2, ಲೈಮ್ವಾನ್ ನಾಙರಿ (ಅಸ್ಸಾಂ)–3. 20 ಕಿ.ಮೀ ನಡಿಗೆ: ಬಿ. ಸೌಮ್ಯಾ (ಕೇರಳ)–1, ಪ್ರಿಯಾಂಕಾ ಗೋಸ್ವಾಮಿ (ಉತ್ತರಪ್ರದೇಶ)–2, ಸೋನಲ್ ಸುಖ್ವಾಲ್ (ರಾಜಸ್ಥಾನ)–3. 4X400 ಮೀಟರ್‌ ರಿಲೆ ಮಿಶ್ರ ವಿಭಾಗ: ಕೇರಳ (ಸಿ. ಕಣ್ಣನ್, ಪಿ.ಒ. ಸಯಾನಾ, ಎಸ್‌. ರಾಜೇಂದ್ರನ್, ಎನ್‌.ಎದ್‌. ಫೈಯಿಜ್)–1, ದೆಹಲಿ –2, ಮಹಾರಾಷ್ಟ್ರ–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.