ADVERTISEMENT

ಇಂದಿನಿಂದ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್

​ಪ್ರಜಾವಾಣಿ ವಾರ್ತೆ
Published 8 ಏಪ್ರಿಲ್ 2024, 23:30 IST
Last Updated 8 ಏಪ್ರಿಲ್ 2024, 23:30 IST
ಬ್ಯಾಸ್ಕೆಟ್‌ಬಾಲ್
ಬ್ಯಾಸ್ಕೆಟ್‌ಬಾಲ್   

ಬೆಂಗಳೂರು: ಪುದುಚೇರಿಯ ರಾಜೀವ್ ಗಾಂಧಿ ಒಳಾಂಗಣ ಕ್ರೀಡಾಂಗಣದಲ್ಲಿ ಮಂಗಳವಾರ ಆರಂಭವಾಗಲಿರುವ 38ನೇ ರಾಷ್ಟ್ರೀಯ ಬ್ಯಾಸ್ಕೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ಕರ್ನಾಟಕದ ಪುರುಷರ ತಂಡವು ‘ಡಿ’ ಗುಂಪಿನಲ್ಲಿ ಮತ್ತು ಮಹಿಳೆಯರ ತಂಡವು ‘ಬಿ’ ಗುಂಪಿನಲ್ಲಿ ಸ್ಥಾನ ಪಡೆದಿದೆ.

ಪುರುಷರ ‘ಡಿ’ ಗುಂಪಿನಲ್ಲಿ ಹಿಮಾಚಲ ಪ್ರದೇಶ, ಮಿಜೋರಾಂ ಮತ್ತು ಪಶ್ಚಿಮ ಬಂಗಾಳ ತಂಡಗಳಿದ್ದು, ಇವುಗಳೊಂದಿಗೆ ಕರ್ನಾಟಕ ಸೆಣಸಲಿದೆ. ಮಹಿಳೆಯರ ‘ಬಿ’ ಗುಂಪಿನಲ್ಲಿ ಮಧ್ಯಪ್ರದೇಶ, ಉತ್ತರ ಪ್ರದೇಶ, ತಮಿಳುನಾಡು, ತೆಲಂಗಾಣ ತಂಡಗಳಿದ್ದು, ಇವುಗಳೊಂದಿಗೆ ಕರ್ನಾಟಕ ಮುಖಾಮುಖಿಯಾಗಲಿದೆ. 

ಗುಂಪುಗಳು ಹೀಗಿವೆ: ಪುರುಷರ ವಿಭಾಗ: ಲೆವಲ್‌ 1: ಎ ಗುಂಪು: ಪಂಜಾಬ್‌, ಕೇರಳ, ಉತ್ತರ ಪ್ರದೇಶ, ಚಂಡೀಗಢ, ಒಡಿಶಾ, ತೆಲಂಗಾಣ, ಸರ್ವಿಸ್‌.

ADVERTISEMENT

ಬಿ ಗುಂಪು: ಮಧ್ಯಪ್ರದೇಶ, ತಮಿಳುನಾಡು, ರಾಜಸ್ಥಾನ, ಬಿಹಾರ, ಹರಿಯಾಣ. ಲೆವಲ್‌ 2: ಸಿ ಗುಂಪು: ಮಹಾರಾಷ್ಟ್ರ, ಜಮ್ಮು ಮತ್ತು ಕಾಶ್ಮೀರ, ಜಾರ್ಖಂಡ್‌

ಡಿ ಗುಂಪು: ಕರ್ನಾಟಕ, ಹಿಮಾಚಲ ಪ್ರದೇಶ, ಮಿಜೇರಾಂ, ಪಶ್ಚಿಮ ಬಂಗಾಳ

ಇ ಗುಂಪು: ಆಂಧ್ರ ಪ್ರದೇಶ, ಗುಜರಾತ್‌, ಪಾಂಡಿಚೇರಿ, ಉತ್ತರಾಖಂಡ. ಎಫ್‌ ಗುಂಪು: ಛತ್ತೀಸಗಢ, ದೆಹಲಿ, ಸಿಕ್ಕಿಂ, ತೆಲಂಗಾಣ

ಮಹಿಳೆಯರ ವಿಭಾಗ: ಲೆವಲ್‌ 1; ಎ ಗುಂಪು: ಮಹಾರಾಷ್ಟ್ರ, ರಾಜಸ್ಥಾನ, ಕೇರಳ, ಪಂಜಾಬ್‌, ದೆಹಲಿ

ಬಿ ಗುಂಪು: ಮಧ್ಯಪ್ರದೇಶ, ಕರ್ನಾಟಕ, ತಮಿಳುನಾಡು, ತೆಲಂಗಾಣ

ಲೆವಲ್‌ 2: ಸಿ ಗುಂಪು: ಚಂಡೀಗಢ, ಗುಜರಾತ್‌, ಹಿಮಾಚಲ ಪ್ರದೇಶ

ಡಿ ಗುಂಪು: ಹರಿಯಾಣ, ಛತ್ತೀಸ್‌ಗಡ, ಜಾರ್ಖಂಡ್

ಇ ಗುಂಪು: ಒಡಿಶಾ, ಬಿಹಾರ, ಪುದುಚೇರಿ. ಎಫ್‌ ಗುಂಪು: ಪಶ್ಚಿಮ ಬಂಗಾಳ, ಆಂಧ್ರಪ್ರದೇಶ, ಸಿಕ್ಕಿಂ, ಉತ್ತರಾಖಂಡ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.