ADVERTISEMENT

ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್: ಕರ್ನಾಟಕ ಮಹಿಳೆಯರಿಗೆ ರಿಲೆಯಲ್ಲಿ ಚಿನ್ನ

ಕೇರಳದ ಜೋಮನ್ ಜಾಯ್‌ ಹೈಜಂಪ್‌ನಲ್ಲಿ ಪ್ರಥಮ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2024, 3:31 IST
Last Updated 2 ಸೆಪ್ಟೆಂಬರ್ 2024, 3:31 IST
ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್‌ನ ರಿಲೆಯಲ್ಲಿ ಚಿನ್ನದ ಪದಕ ಜಯಿಸಿದ ಕರ್ನಾಟಕ ತಂಡ (ಎಡದಿಂದ) ಸ್ನೇಹಾ ಎಸ್‌ಎಸ್‌., ಕಾವೇರಿ ಪಾಟೀಲ, ಎ.ಟಿ. ದಾನೇಶ್ವರಿ, ಜ್ಯೋತಿಕಾ  –ಪ್ರಜಾವಾಣಿ ಚಿತ್ರ/ಪುಷ್ಕರ್ ವಿ.
ಬೆಂಗಳೂರಿನಲ್ಲಿ ನಡೆದ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್‌ನ ರಿಲೆಯಲ್ಲಿ ಚಿನ್ನದ ಪದಕ ಜಯಿಸಿದ ಕರ್ನಾಟಕ ತಂಡ (ಎಡದಿಂದ) ಸ್ನೇಹಾ ಎಸ್‌ಎಸ್‌., ಕಾವೇರಿ ಪಾಟೀಲ, ಎ.ಟಿ. ದಾನೇಶ್ವರಿ, ಜ್ಯೋತಿಕಾ  –ಪ್ರಜಾವಾಣಿ ಚಿತ್ರ/ಪುಷ್ಕರ್ ವಿ.    

ಬೆಂಗಳೂರು: ಆತಿಥೇಯ ಕರ್ನಾಟಕದ ಮಹಿಳೆಯರ ತಂಡವು 63ನೇ ರಾಷ್ಟ್ರೀಯ ಓಪನ್ ಅಥ್ಲೆಟಿಕ್ಸ್‌ನಲ್ಲಿ 4X100 ಮೀಟರ್ಸ್ ರಿಲೆಯಲ್ಲಿ ಚಿನ್ನದ ಪದಕ ಜಯಿಸಿತು. ಎಸ್‌.ಎಸ್‌. ಸ್ನೇಹಾ, ಟಿ. ದಾನೇಶ್ವರಿ, ಕಾವೇರಿ ಪಾಟೀಲ ಮತ್ತು ಜ್ಯೋತಿಕಾ ಅವರು ತಂಡದಲ್ಲಿದ್ದರು. 

ಕಂಠೀರವ ಕ್ರೀಡಾಂಗಣದಲ್ಲಿ ಭಾನುವಾರ ನಡೆದ ಸ್ಪರ್ಧೆಯಲ್ಲಿ ಕರ್ನಾಟಕ ತಂಡವು 45.21 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಮೊದಲ ಸ್ಥಾನ ಪಡೆಯಿತು. ತೀವ್ರ ಪೈಪೋಟಿಯೊಡ್ಡಿದ ರೈಲ್ವೇ ಕ್ರೀಡಾ ಮಂಡಳಿ (ನಿತ್ಯಾ ಗಂಧೆ, ಹಿಮಶ್ರೀ ರಾಯ್, ಅವಂತಿಕಾ ನರಳೆ ಮತ್ತು ಜಿ. ರವಿಕುಮಾರ್) ತಂಡವು 45.29 ಸೆಕೆಂಡುಗಳಲ್ಲಿ ಗುರಿ ಮುಟ್ಟಿ ಬೆಳ್ಳಿ ಪಡೆಯಿತು. ಒಡಿಶಾ ತಂಡವು (45.93 ಸೆಕೆಂಡು) ಮೂರನೇ ಸ್ಥಾನ ಪಡೆಯಿತು. 

ಫಲಿತಾಂಶಗಳು

ADVERTISEMENT

ಪುರುಷರು– ಲಾಂಗ್‌ಜಂಪ್: ಎಸ್‌. ಆರ್ಯ (ರಾಜಸ್ಥಾನ; 7.89ಮೀ)–1, ಮೊಹಮ್ಮದ್ ಯಾಹಿಯಾ (ಕೇರಳ)–2, ಜಗರೂಪ್ (ಪಂಜಾಬ್)–3. ಹೈಜಂಪ್: ಜೊಮನ್ ರಾಯ್ (ಕೇರಳ; 2.14 ಮೀ)–1, ಆದರ್ಶರಾಮ್ (ರಾಜಸ್ಥಾನ)–2, ರೋಹಿತ್ (ಹರಿಯಾಣ)–3. ಹ್ಯಾಮರ್ ಥ್ರೋ: ರವಿ (ರಾಜಸ್ಥಾನ; 66.41ಮೀ)–1, ಆಶಿಶ್ ಜಾಖಡ್ (ಎಸ್‌ಎಸ್‌ಸಿಬಿ)–2, ನಿತೇಶ್ ಪೂನಿಯಾ (ರಾಜಸ್ಥಾನ)–3. ಶಾಟ್‌ಪಟ್: ಸಮರದೀಪ್ ಗಿಲ್ (ಮಧ್ಯಪ್ರದೇಶ; 19.27ಮೀ)–1, ಅಭಿಲಾಶ್ ಸಕ್ಸೆನಾ (ಮಧ್ಯಪ್ರದೇಶ)–2, ಧನವೀರ್ ಸಿಂಗ್ (ಎಸ್‌ಎಸ್‌ಸಿಬಿ)–3. 4X100 ಮೀ ರಿಲೆ: ಓಡಿಶಾ (39.65ಸೆ)–1, ರೈಲ್ವೆಸ್ ಸ್ಪೋರ್ಟ್ಸ್ (39.82ಸೆ)–2, ಎಸ್‌ಎಸ್‌ಸಿಬಿ (39.99ಸೆ)–3

35 ಕಿ.ಮೀ ರೇಸ್‌ವಾಕ್: ಅಮಿತ್ (ಹರಿಯಾಣ; 2ಗಂಟೆ, 38ನಿಮಿಷ) –1, ವಿಜಯ್ ವಿಶ್ವಕರ್ಮ (ಎಸ್‌ಎಸ್‌ಸಿಬಿ)–2, ಏಕನಾಥ್ ತುರಂಬೆಕರ್ (ರಾಜಸ್ಥಾನ)–3.

ಮಹಿಳೆಯರು: ಪೋಲ್‌ವಾಲ್ಟ್‌: ಬರೊನಿಕಾ ಇಳಂಗೋವನ್ (ರಾಜಸ್ಥಾನ; 4.15 ಮೀ)–1, ಕೃಷ್ಣಾ ರಚನ್ (ರಾಜಸ್ಥಾನ)–2, ಪವಿತ್ರಾ ವೆಂಕಟೇಶ್ (ತಮಿಳುನಾಡು)–3. 

4X100 ಮೀ ರಿಲೆ ಕರ್ನಾಟಕ (45.21ಸೆ)–1, ರೈಲ್ವೆ ಸ್ಪೋರ್ಟ್ಸ್–2, ಒಡಿಶಾ –3.

35 ಕಿ.ಮೀ ರೇಸ್‌ವಾಕ್: ಪಾಯಲ್ (ರಾಜಸ್ಥಾನ; 3ಗಂಟೆ, 02.24ಸೆ)–1, ರಮಣದೀಪ್ ಕೌರ್ (ರಾಜಸ್ಥಾನ)–2, ಬಂಧನಾ ಪಟೇಲ್ (ಉತ್ತರಪ್ರದೇಶ)–3

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.