ಬೆಂಗಳೂರು: ಪ್ಯಾರಾ ಜಾವೆಲಿನ್ ಥ್ರೋ ಸ್ಪರ್ಧಿ ಸುಮಿತ್ ಅಂಟಿಲ್ ಮತ್ತು ಡಿಸ್ಕಸ್ ಥ್ರೋ ಸ್ಪರ್ಧಿ ಯೋಗೇಶ್ ಕಥುನಿಯಾ ಇಲ್ಲಿ ನಡೆಯುತ್ತಿರುವ ರಾಷ್ಟ್ರೀಯ ಪ್ಯಾರಾ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನಲ್ಲಿ ವಿಶ್ವ ದಾಖಲೆ ಸ್ಥಾಪಿಸಿದರು.
ಟೋಕಿಯೊ ಪ್ಯಾರಾಲಿಂಪಿಕ್ಸ್‌ನಲ್ಲಿ ಚಿನ್ನ ಜಯಿಸಿದ್ದ ಸುಮಿತ್ ಅವರು 68.62 ಮೀ. ಸಾಧನೆ ಮೂಲಕ ತಮ್ಮದೇ ಹೆಸರಲ್ಲಿದ್ದ ವಿಶ್ವದಾಖಲೆ ಉತ್ತಮಪಡಿಸಿಕೊಂಡರು. ಎಫ್64 ವಿಭಾಗದಲ್ಲಿ ಸ್ಪರ್ಧಿಸುವ ಅವರ ಹಿಂದಿನ ವಿಶ್ವದಾಖಲೆಯ ದೂರ 68.55 ಮೀ. ಆಗಿತ್ತು. ಟೋಕಿಯೊ ಕೂಟದಲ್ಲಿ ಈ ಸಾಧನೆ ಮೂಡಿಬಂದಿತ್ತು.
ಡಿಸ್ಕಸ್ ಥ್ರೋನಲ್ಲಿ ಯೋಗೇಶ್ ಅವರು 48.34 ಮೀ. ಸಾಧನೆಯೊಂದಿಗೆ ವಿಶ್ವದಾಖಲೆ ಸ್ಥಾಪಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.