ADVERTISEMENT

ದಾಖಲೆಯೊಂದಿಗೆ ಚಿನ್ನ ಗೆದ್ದ ಸಲೋನಿ

ರಾಷ್ಟ್ರೀಯ ಸೀನಿಯರ್‌ ಈಜು ಚಾಂಪಿಯನ್‌ಷಿಪ್

​ಪ್ರಜಾವಾಣಿ ವಾರ್ತೆ
Published 22 ಸೆಪ್ಟೆಂಬರ್ 2018, 19:30 IST
Last Updated 22 ಸೆಪ್ಟೆಂಬರ್ 2018, 19:30 IST
ಸಲೋನಿ ದಲಾಲ್‌
ಸಲೋನಿ ದಲಾಲ್‌   

ತಿರುವನಂತಪುರ: ಅಮೋಘ ಸಾಮರ್ಥ್ಯ ತೋರಿದ ಕರ್ನಾಟಕದ ಸಲೋನಿ ದಲಾಲ್‌, ಶನಿವಾರ ಇಲ್ಲಿನ ಬಿ.ಆರ್‌.ಅಂಬೇಡ್ಕರ್‌ ಈಜು ಕೇಂದ್ರದಲ್ಲಿ ರಾಷ್ಟ್ರೀಯ ದಾಖಲೆಯೊಂದಿಗೆ ಚಿನ್ನದ ಪದಕಕ್ಕೆ ಕೊರಳೊಡ್ಡಿದರು.

72ನೇ ಗ್ಲೆನ್‌ಮಾರ್ಕ್‌ ರಾಷ್ಟ್ರೀಯ ಸೀನಿಯರ್‌ ಈಜು ಚಾಂಪಿಯನ್‌ಷಿಪ್‌ನ ಮಹಿಳೆಯರ 100 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್ ವಿಭಾಗದಲ್ಲಿ ಅವರಿಂದ ಈ ಸಾಧನೆ ಮೂಡಿಬಂತು.

1 ನಿಮಿಷ 14.87 ಸೆಕೆಂಡುಗಳಲ್ಲಿ ಗುರಿ ಮುಟ್ಟಿದ ಸಲೋನಿ, ಚಾಹತ್‌ ಅರೋರ ಹೆಸರಿನಲ್ಲಿದ್ದ ದಾಖಲೆಯನ್ನು ಮೀರಿ ನಿಂತರು. ಹೋದ ವರ್ಷ ಭೋಪಾಲ್‌ನಲ್ಲಿ ನಡೆದಿದ್ದ ಚಾಂಪಿಯನ್‌ಷಿಪ್‌ನಲ್ಲಿ ಚಾಹತ್‌ 1 ನಿಮಿಷ 15.19 ಸೆಕೆಂಡುಗಳಲ್ಲಿ ಗುರಿ ತಲುಪಿದ್ದರು.

ADVERTISEMENT

ಫಲಿತಾಂಶಗಳು: ಪುರುಷರು: 100 ಮೀಟರ್ಸ್‌ ಫ್ರೀಸ್ಟೈಲ್‌: ನೀಲ್‌ ರಾಯ್‌ (ಎಸ್‌ಎಫ್‌ಐ; 51.45 ಸೆಕೆಂಡು)–1, ಶ್ರೀಹರಿ ನಟರಾಜ್‌ (ಕರ್ನಾಟಕ; 51.64ಸೆ.)–2, ಅನ್ಸುಲ್‌ ಕೊಠಾರಿ (ಗುಜರಾತ್‌; 52.22ಸೆ.)–3.

100 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌: ಸಂದೀಪ್‌ ಸೆಜ್ವಾಲ್‌ (ದೆಹಲಿ; 1ನಿಮಿಷ 02.60ಸೆಕೆಂಡು)–1, ಎಸ್‌.ಪಿ.ಲಿಖಿತ್‌ (ಕರ್ನಾಟಕ; 1:03.09)–2, ಪುನೀತ್‌ ರಾಣಾ (ಪೊಲೀಸ್‌; 1:04.14)–3.

50 ಮೀಟರ್ಸ್‌ ಬಟರ್‌ಫ್ಲೈ: ವೀರ್‌ಧವಳ್‌ ಖಾಡೆ (ಎಸ್‌ಎಫ್‌ಐ; 24.26ಸೆಕೆಂಡು, ನೂತನ ರಾಷ್ಟ್ರೀಯ ದಾಖಲೆ)–1, ಸುಪ್ರಿಯ ಮಂಡಲ್‌ (ಆರ್‌ಎಸ್‌ಪಿಬಿ; 24.86)–2, ಶರ್ಮಾ ಎಸ್‌.ಪಿ ನಾಯರ್ (ಆರ್‌ಎಸ್‌ಪಿಬಿ; 25.19)–3.

400 ಮೀಟರ್ಸ್‌ ಮೆಡ್ಲೆ: ಅದ್ವೈತ್‌ ಪಗೆ (ಮಧ್ಯಪ್ರದೇಶ; 4ನಿಮಿಷ 30.92 ಸೆಕೆಂಡು)–1, ಟಿ.ಎಮಿಲ್‌ ರಾಬಿನ್‌ ಸಿಂಗ್‌ (ತಮಿಳುನಾಡು; 4:37.14)–2, ಸಾನು ದೇವನಾಥ್‌ (ಆರ್‌ಎಸ್‌ಪಿಬಿ; 4:39.71)–3.

4X200 ಮೀಟರ್ಸ್‌ ಫ್ರೀಸ್ಟೈಲ್‌ ರಿಲೆ: ಕರ್ನಾಟಕ (7 ನಿಮಿಷ 48.05 ಸೆಕೆಂಡು)–1, ಎಸ್‌ಎಫ್‌ಐ (7:51.29)–2, ಆರ್‌ಎಸ್‌ಪಿಬಿ (7:52.75)–3.

ಮಹಿಳೆಯರು: 100 ಮೀಟರ್ಸ್‌ ಫ್ರೀಸ್ಟೈಲ್‌: ಕೆನಿಶಾ ಗುಪ್ತಾ (ಎಸ್‌ಎಫ್‌ಐ; 58.75 ಸೆಕೆಂಡು)–1, ಶಿವಾನಿ ಕಟಾರಿಯಾ (ಹರಿಯಾಣ; 58.77)–2, ಅದಿತಿ ಧುಮಾತ್ಕರ್‌ (ಆರ್‌ಎಸ್‌ಪಿಬಿ; 59.13)–3.

800 ಮೀಟರ್ಸ್‌ ಫ್ರೀಸ್ಟೈಲ್‌: ರಿಚಾ ಮಿಶ್ರಾ (ಪೊಲೀಸ್‌; 9 ನಿಮಿಷ 14.22 ಸೆಕೆಂಡು)–1, ಭವಿಕಾ ದುಗಾರ್‌ (ತಮಿಳುನಾಡು; 9:22.57)–2, ಖುಷಿ ದಿನೇಶ್‌ (9:22.62)–3.

100 ಮೀಟರ್ಸ್‌ ಬ್ರೆಸ್ಟ್‌ಸ್ಟ್ರೋಕ್‌: ಸಲೋನಿ ದಲಾಲ್‌ (ಕರ್ನಾಟಕ; 1 ನಿಮಿಷ 14.87ಸೆಕೆಂಡು)–1, ಕರೀನಾ ಶಂಕ್ತಾ (ಎಸ್‌ಎಫ್ಐ; 1:15.24)–2, ಅನ್ನಿ ಜೈನ್‌ (1:17.75)–3.

50 ಮೀಟರ್ಸ್‌ ಬಟರ್‌ಫ್ಲೈ: ದಿವ್ಯಾ ಸತಿಜಾ (ಹರಿಯಾಣ; 28.72 ಸೆಕೆಂಡು)–1, ಕೆನಿಶಾ ಗುಪ್ತಾ (ಎಸ್‌ಎಫ್‌ಐ; 28.94)–2, ಲಿಯಾನ ಫಾತೀಮಾ ಉಮೆರ್‌ (ಕೇರಳ; 29.00)–3.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.