ಉಡುಪಿ: ಹರಿಯಾಣದ ಅಮನ್ ಕುಮಾರ್ ಅವರು ರಾಷ್ಟ್ರೀಯ ಯೂತ್ ಅಥ್ಲೆಟಿಕ್ ಚಾಂಪಿಯನ್‌ಷಿಪ್‌ನ 18 ವರ್ಷದೊಳಗಿನವರ 3,000 ಮೀಟರ್ಸ್ ಓಟದಲ್ಲಿ ಚಿನ್ನದ ಪದಕ ಜಯಿಸಿದರು.
ಇಲ್ಲಿಯ ಮಹಾತ್ಮ ಗಾಂಧಿ ಜಿಲ್ಲಾ ಕ್ರೀಡಾಂಗಣದಲ್ಲಿ ಶುಕ್ರವಾರ ಆರಂಭವಾದ ಚಾಂಪಿಯನ್‌ಷಿಪ್‌ನಲ್ಲಿ ಅಮನ್ 8 ನಿಮಿಷ 35.86 ಸೆಕೆಂಡುಗಳಲ್ಲಿ ಗುರಿ ತಲುಪಿದರು. ತಮಿಳುನಾಡಿನ ಯೋಗೇಶ್ವರ್ ಆರ್. (8 ನಿ. 36.10ಸೆ.) ಬೆಳ್ಳಿ ಮತ್ತು ಮಧ್ಯಪ್ರದೇಶದ ವಿಕಾಸ್ ಕುಮಾರ್ ಬಿಂದ್ (8ನಿ. 37.33 ಸೆ.) ಕಂಚು ಗೆದ್ದರು.
ಡಿಸ್ಕಸ್ ಥ್ರೊನಲ್ಲಿ ಹರಿಯಾಣದ ರಿತಿಕ್ (ದೂರ: 56.18 ಮೀ.), ಬಾಲಕಿಯರ 3,000 ಮೀ. ಓಟದಲ್ಲಿ ಹರಿಯಾಣದ ಅಂಜು ಬಾಲಾ (10 ನಿ. 20.16 ಸೆ.), ಹ್ಯಾಮರ್ ಥ್ರೊನಲ್ಲಿ ಉತ್ತರಪ್ರದೇಶ ನೇಹಾ ಯಾದವ್ (55.80 ಮೀ.), ಲಾಂಗ್‌ಜಂಪ್‌ನಲ್ಲಿ ಲಕ್ಷದ್ವೀಪದ ಮುಬಸ್ಸಿನಾ ಮೊಹಮ್ಮದ್ (5.83 ಮೀ.), ಪೋಲ್‌ವಾಲ್ಟ್‌ನಲ್ಲಿ ತಮಿಳುನಾಡಿನ ಬಿ. ಸೌಂದರ್ಯ (3.20 ಮೀ.) ಮತ್ತು ಶಾಟ್‌ಪಟ್‌ನಲ್ಲಿ ಕೇರಳದ ಅನುಪ್ರಿಯಾ ವಿ.ಎಸ್. (15.59 ಮೀ.) ಚಿನ್ನ ಗೆದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.