ಜೈಪುರ: ಭಾರತ ಕುಸ್ತಿ ಸಂಸ್ಥೆಯ (ಡಬ್ಲ್ಯುಎಫ್‌ಐ) ಅಮಾನತುಗೊಂಡಿರುವ ಆಡಳಿತ ಮಂಡಳಿ ಪುಣೆಯಲ್ಲಿ ಆಯೋಜಿಸಿರುವ ರಾಷ್ಟ್ರೀಯ ಕುಸ್ತಿ ಚಾಂಪಿಯನ್‌ಷಿಪ್‌ಗಳಿಗೆ ಯಾವುದೇ ಮಾನ್ಯತೆ ಇಲ್ಲ ಮತ್ತು ವಿತರಿಸಿರುವ ಪ್ರಮಾಣಪತ್ರಗಳು ನಕಲಿ ಎಂದು ಕುಸ್ತಿಪಟುಗಳಾದ ಸಾಕ್ಷಿ ಮಲಿಕ್ ಮತ್ತು ವಿನೇಶಾ ಫೋಗಾಟ್ ಶನಿವಾರ ವಾಗ್ದಾಳಿ ನಡೆಸಿದ್ದಾರೆ.
ಭಾರತ ಒಲಿಂಪಿಕ್ ಅಸೋಸಿಯೇಷನ್ ರಚಿಸಿದ ತಾತ್ಕಾಲಿಕ ಸಂಸ್ಥೆ ಡಬ್ಲ್ಯುಎಫ್‌ಐ ದೈನಂದಿನ ಚಟುವಟಿಕೆಯನ್ನು ನಿರ್ವಹಿಸುತ್ತಿದೆ.
ಕ್ರೀಡಾ ಸಚಿವಾಲಯವು ಕಾನೂನು ಕ್ರಮದ ಬಗ್ಗೆ ಎಚ್ಚರಿಕೆ ನೀಡಿದ್ದರೂ, ಜನವರಿ 29-31 ರಿಂದ ಪುಣೆಯಲ್ಲಿ ಪಂದ್ಯಾವಳಿ ನಡೆಸಿತು.
ಐಒಎ ತಾತ್ಕಾಲಿಕ ಸಮಿತಿಯು ಫೆಬ್ರವರಿ 2-5 ರಿಂದ ಜೈಪುರದಲ್ಲಿ ರಾಷ್ಟ್ರೀಯ ಚಾಂಪಿಯನ್‌ಷಿಪ್ ಆಯೋಜಿಸಿದೆ. ಅಮಾನತುಗೊಂಡ ಡಬ್ಲ್ಯುಎಫ್ಐ ಆಡಳಿತ ಮಂಡಳಿ ಪುಣೆಯಲ್ಲಿ ರಾಷ್ಟ್ರೀಯ ಪಂದ್ಯಗಳನ್ನು ಆಯೋಜಿಸುವ ಮೂಲಕ ತನ್ನ ಶಕ್ತಿ ಪ್ರದರ್ಶಿಸಲು ಪ್ರಯತ್ನಿಸುತ್ತಿದೆ ಎಂದು ಸಾಕ್ಷಿ ಹೇಳಿದರು.
‘ಅವರು (ಡಬ್ಲ್ಯುಎಫ್ಐ) ಸಮಾನಾಂತರ ರಾಷ್ಟ್ರೀಯ ಚಾಂಪಿಯನ್‌ಷಿಪ್ ನಡೆಸಿ ನಕಲಿ ಪ್ರಮಾಣಪತ್ರ ವಿತರಿಸಿದ್ದಾರೆ. ಅದರ ಬಗ್ಗೆ ಟ್ವೀಟ್ ಮಾಡುತ್ತಿದ್ದೇನೆ ಮತ್ತು ಪುರಾವೆಗಳನ್ನು ಸಹ ತೋರಿಸಿದ್ದೇನೆ’ ಎಂದು ಸಾಕ್ಷಿ ತಿಳಿಸಿದರು.
ಒಲಿಂಪಿಕ್ ನಡೆಯುವ ವರ್ಷದಲ್ಲಿ ಅಮಾನತುಗೊಂಡ ಡಬ್ಲ್ಯುಎಫ್ಐ ಆಡಳಿತ ಸಮಿತಿಯು ವಿಷಯಗಳನ್ನು ಜಟಿಲಗೊಳಿಸದಂತೆ ತಡೆಯಲು ಕ್ರೀಡಾ ಸಚಿವಾಲಯ ಮಧ್ಯಪ್ರವೇಶಿಸಬೇಕು ಎಂದು ಅವರು ಮನವಿ ಮಾಡಿದರು.
‘ಅಂತಿಮವಾಗಿ ರಾಷ್ಟ್ರೀಯ ಚಾಂಪಿಯನ್‌ಷಿಪ್ ನಡೆಯುತ್ತಿರುವುದು ನನಗೆ ನಿಜವಾಗಿಯೂ ಸಂತೋಷವಾಗಿದೆ. ಇದು ಒಲಿಂಪಿಕ್ ವರ್ಷವಾಗಿರುವುದರಿಂದ, ನಮ್ಮ ದೇಶಕ್ಕಾಗಿ ಪದಕಗಳನ್ನು ಗೆಲ್ಲಲು ಪ್ರಯತ್ನಿಸಲು ಬಯಸುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.