ADVERTISEMENT

ಪಾವೊ ನೂರ್ಮಿ ಅಥ್ಲೆಟಿಕ್ ಕೂಟ: ಭಾರತದ ಜಾವೆಲಿನ್ ತಾರೆ ನೀರಜ್‌ ಚೋಪ್ರಾಗೆ ಚಿನ್ನ

ಪಿಟಿಐ
Published 19 ಜೂನ್ 2024, 0:30 IST
Last Updated 19 ಜೂನ್ 2024, 0:30 IST
<div class="paragraphs"><p>ನೀರಜ್‌ ಚೋಪ್ರಾ</p></div>

ನೀರಜ್‌ ಚೋಪ್ರಾ

   

ತುರ್ಕು (ಫಿನ್ಲೆಂಡ್): ವಿಶ್ವ ಚಾಂಪಿಯನ್ ಭಾರತದ ಜಾವೆಲಿನ್ ತಾರೆ ನೀರಜ್ ಚೋಪ್ರಾ ಮಂಗಳವಾರ ಇಲ್ಲಿ ನಡೆದ ಪಾವೊ ನೂರ್ಮಿ ಅಥ್ಲೆಟಿಕ್ಸ್ ಕೂಟದಲ್ಲಿ ಚೊಚ್ಚಲ ಚಿನ್ನದ ಪದಕ ಗೆದ್ದಿದ್ದಾರೆ. 

2022 ರಲ್ಲಿ ಇಲ್ಲಿ ಬೆಳ್ಳಿ ಗೆದ್ದಿದ್ದ ಚೋಪ್ರಾ, ತಮ್ಮ ಮೂರನೇ ಪ್ರಯತ್ನದಲ್ಲಿ 85.97 ಮೀಟರ್ ದೂರ ಎಸೆದು ಪ್ರಥಮ ಸ್ಥಾನ ಪಡೆದರು.  

ADVERTISEMENT

ಟೋನಿ ಕೆರಾನೆನ್ 84.19 ಮೀಟರ್ ಎಸೆದು ಬೆಳ್ಳಿ ಪದಕ ಗೆದ್ದರೆ, 2022ರ ಚಿನ್ನದ ಪದಕ ವಿಜೇತ ಒಲಿವರ್ ಹೆಲಾಂಡರ್ 83.96 ಮೀಟರ್ ಎಸೆದು ಮೂರನೇ ಸ್ಥಾನ ಪಡೆದರು.

19 ವರ್ಷದ ಜರ್ಮನ್ ಪ್ರತಿಭೆ ಮ್ಯಾಕ್ಸ್ ಡ್ಲೆನಿಂಗ್ ಅವರಿಂದ ನೀರಜ್‌ಗೆ ಪೈಪೋಟಿ ಎದುರಾಗುವ ನಿರೀಕ್ಷೆ ಇತ್ತು. ಆದರೆ ಅವರು 79.84 ಮೀ. ದೂರ ಎಸೆದು ಏಳನೇ ಸ್ಥಾನ ಪಡೆದರು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.