ಯೂಜಿನ್, ಅಮೆರಿಕ: ಭಾರತದ ‘ಸೂಪರ್‌ಸ್ಟಾರ್’ ಜಾವೆಲಿನ್ ಥ್ರೋ ಸ್ಪರ್ಧಿ ನೀರಜ್ ಚೋಪ್ರಾ ಅವರು ಪ್ರತಿಷ್ಠಿತ ಡೈಮಂಡ್ ಲೀಗ್ ಫೈನಲ್ಸ್ ಕಿರೀಟವನ್ನು ತಮ್ಮಲ್ಲೇ ಉಳಿಸಿಕೊಳ್ಳುವ ವಿಶ್ವಾಸದಲ್ಲಿದ್ದಾರೆ.
ಈ ಬಾರಿಯ ಫೈನಲ್ಸ್ ಅಮೆರಿಕದ ಯೂಜಿನ್‌ನಲ್ಲಿ ಶನಿವಾರ ಮತ್ತು ಭಾನುವಾರ ನಡೆಯಲಿದೆ. ಜಾವೆಲಿನ್ ಥ್ರೋ ಸ್ಪರ್ಧೆ ಶನಿವಾರ ನಿಗದಿಯಾಗಿದೆ. ಕಳೆದ ವರ್ಷ ಜೂರಿಚ್‌ನಲ್ಲಿ ನಡೆದಿದ್ದ ಡೈಮಂಡ್ಸ್ ಲೀಗ್ ಫೈನಲ್ಸ್‌ನಲ್ಲಿ ನೀರಜ್ ಚಾಂಪಿಯನ್ ಆಗಿದ್ದರು.
ಬುಡಾಪೆಸ್ಟ್‌ನಲ್ಲಿ ಆಗಸ್ಟ್‌ನಲ್ಲಿ ನಡೆದಿದ್ದ ವಿಶ್ವ ಅಥ್ಲೆಟಿಕ್ ಕೂಟದಲ್ಲಿ ಚಿನ್ನ ಜಯಿಸಿದ್ದ 25 ವರ್ಷದ ನೀರಜ್, ಉತ್ತಮ ಫಾರ್ಮ್‌ನಲ್ಲಿದ್ದಾರೆ. ಡೈಮಂಡ್ ಲೀಗ್‌ನ ದೋಹಾ ಮತ್ತು ಲೂಸಾನ್ ಲೆಗ್‌ನಲ್ಲಿ ಅವರು ಗೆದ್ದಿದ್ದರು.
ನೀರಜ್, ಪ್ರಶಸ್ತಿಯನ್ನು ತಮ್ಮಲ್ಲಿ ಉಳಿಸಿಕೊಳ್ಳುವ ಜತೆಯಲ್ಲೇ ಮೊದಲ ಬಾರಿ 90 ಮೀ. ಸಾಧನೆ ಮಾಡಲು ಪ್ರಯತ್ನಿಸಲಿದ್ದಾರೆ. ಅವರ ವೈಯಕ್ತಿಕ ಶ್ರೇಷ್ಠ ಸಾಧನೆ 89.4 ಮೀ. ಆಗಿದೆ.
ಭಾರತದ ಲಾಂಗ್‌ಜಂಪ್ ಸ್ಪರ್ಧಿ ಮುರಳಿ ಶ್ರೀಶಂಕರ್ ಮತ್ತು 3000 ಮೀ. ಸ್ಟೀಪಲ್ ಚೇಸ್ ಸ್ಪರ್ಧಿ ಅವಿನಾಶ್ ಸಬ್ಳೆ ಅವರು ಡೈಮಂಡ್ ಲೀಗ್ ಫೈನಲ್ಸ್ ಅರ್ಹತೆ ಪಡೆದುಕೊಂಡಿದ್ದರು. ಆದರೆ ಏಷ್ಯನ್ ಗೇಮ್ಸ್‌ಗೆ ಸಜ್ಜಾಗುವ ನಿಟ್ಟಿನಲ್ಲಿ ಇಬ್ಬರೂ ಕೂಟದಿಂದ ಹಿಂದೆ ಸರಿದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.