ADVERTISEMENT

ನೇಹಾ ಠಾಕೂರ್‌ಗೆ ಸೇಲಿಂಗ್ ಸಿಲ್ವರ್

ಪಿಟಿಐ
Published 26 ಸೆಪ್ಟೆಂಬರ್ 2023, 11:24 IST
Last Updated 26 ಸೆಪ್ಟೆಂಬರ್ 2023, 11:24 IST
ಸೇಲಿಂಗ್
ಸೇಲಿಂಗ್   

ನಿಂಗ್ಬೊ, ಚೀನಾ: ಏಷ್ಯನ್ ಕ್ರೀಡಾಕೂಟದಲ್ಲಿ ಭಾರತದ ಸೇಲಿಂಗ್ ಪಟು ನೇಹಾ ಠಾಕೂರ್ ಮಂಗಳವಾರ ಬೆಳ್ಳಿ ಪದಕ ಜಯಿಸಿದರು.

ಡಿಂಗಿ ಐಎಲ್‌ಸಿಎ–4 ಬಾಲಕಿಯರ ವಿಭಾಗದಲ್ಲಿ ಅವರು ಈ ಸಾಧನೆ ಮಾಡಿದರು.

ಭೋಪಾಲದ ನ್ಯಾಷನಲ್ ಸೇಲಿಂಗ್ ಸ್ಕೂಲ್ ವಿದ್ಯಾರ್ಥಿನಿಯಾಗಿರುವ ನೇಹಾ ಇಲ್ಲಿ ಒಟ್ಟು 32 ಅಂಕ ಗಳಿಸಿ ಎರಡನೇ ಸ್ಥಾನ ಪಡೆದರು.  ಅದರಲ್ಲಿ ಅವರು 27 ಸ್ಕೋರ್ ದಾಖಲಿಸಿದ್ದರು.

ADVERTISEMENT

ಥಾಯ್ಲೆಂಡಿನ ನೊಪೆಸಾರ್ನ್ ಕುಂಬೂಜಾನ್ ಚಿನ್ನ ಗೆದ್ದರು. ಸಿಂಗಪುರ್ ಕಿಯಾರಾ ಮೇರಿ ಕಾರ್ಲೈಲ್ 28 ಸ್ಕೋರ್‌ನೊಂದಿಗೆ ಕಂಚು ಪಡೆದರು.

ನೇಹಾ ಭಾಗವಹಿಸಿದ್ದ ವಿಭಾಗದಲ್ಲಿ ಒಟ್ಟು 11 ರೇಸ್‌ಗಳಿದ್ದವು. ಅವೆಲ್ಲದರಿಂದ ಒಟ್ಟು 32 ಪಾಯಿಂಟ್‌ಗಳನ್ನು ನೇಹಾ ಸಂಗ್ರಹಿಸಿದುರ. ಆದರೆ ಐದನೇ ರೇಸ್‌ನಲ್ಲಿ ಅವರು ಕೇವಲ 5 ಅಂಕ ಗಳಿಸಿದ್ದರು. ಎಲ್ಲ ರೇಸ್‌ಗಳ ಪೈಕಿ ಅತ್ಯಂತ ಕನಿಷ್ಟ ಅಂಕ ಪಡೆದ ರೇಸ್‌ಗಳನ್ನು ಒಟ್ಟು ಪಾಯಿಂಟ್‌ಗಳಿಂದ ಕಳೆಯಲಾಗುತ್ತದೆ ಮತ್ತು ಸ್ಕೋರ್ ಘೋಷಿಸಲಾಗುತ್ತದೆ. ಆದ್ದರಿಂದ ನೇಹಾ 27 ಸ್ಕೋರ್ ದಾಖಲಿಸಿದರು.

ನೇಹಾ ಅವರು ಒನ್ ಡಿಸೈನ್ ಡಿಂಘಿ ಕ್ಲಾಸ್ ಲೇಸರ್ ಸಿರಿಸ್ ಹಾಯಿದೋಣಿಯನ್ನು ರೇಸ್‌ಗೆ ಬಳಸಿದ್ದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.