ADVERTISEMENT

ರಾಷ್ಟ್ರೀಯ ಮಿಶ್ರ ನೆಟ್‌ಬಾಲ್: ಕರ್ನಾಟಕ ರನ್ನರ್ಸ್ ಅಪ್

​ಪ್ರಜಾವಾಣಿ ವಾರ್ತೆ
Published 4 ಅಕ್ಟೋಬರ್ 2024, 16:53 IST
Last Updated 4 ಅಕ್ಟೋಬರ್ 2024, 16:53 IST
ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಮಿಶ್ರ ನೆಟ್‌ಬಾಲ್ ಫೈನಲ್‌ನಲ್ಲಿ ಕರ್ನಾಟಕದ ನಂದಿನಿ ಎಲ್.ಜಿ. ಅವರು ಪಾಯಿಂಟ್ ಗಳಿಸಲು ಪ್ರಯತ್ನಿಸಿದರು  –ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್
ಬೆಂಗಳೂರಿನ ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ಶುಕ್ರವಾರ ನಡೆದ ರಾಷ್ಟ್ರೀಯ ಮಿಶ್ರ ನೆಟ್‌ಬಾಲ್ ಫೈನಲ್‌ನಲ್ಲಿ ಕರ್ನಾಟಕದ ನಂದಿನಿ ಎಲ್.ಜಿ. ಅವರು ಪಾಯಿಂಟ್ ಗಳಿಸಲು ಪ್ರಯತ್ನಿಸಿದರು  –ಪ್ರಜಾವಾಣಿ ಚಿತ್ರ/ ಕಿಶೋರ್ ಕುಮಾರ್ ಬೋಳಾರ್   

ಬೆಂಗಳೂರು: ಆತಿಥೇಯ ಕರ್ನಾಟಕ ತಂಡವು ಶುಕ್ರವಾರ ಇಲ್ಲಿ ಮುಕ್ತಾಯವಾದ ರಾಷ್ಟ್ರೀಯ ಮಿಶ್ರ ನೆಟ್‌ಬಾಲ್ ಚಾಂಪಿಯನ್‌ಷಿಪ್‌ನಲ್ಲಿ ರನ್ನರ್ಸ್ ಅಪ್ ಆಯಿತು. ಛತ್ತೀಸಗಢ ಚಾಂಪಿಯನ್ ಪಟ್ಟಕ್ಕೇರಿತು. 

ಕೋರಮಂಗಲದ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ ಟೂರ್ನಿಯ ಫೈನಲ್‌ನಲ್ಲಿ ಛತ್ತೀಸಗಢ 36–35ರಿಂದ ಕರ್ನಾಟಕದ ಎದುರು ರೋಚಕ ಜಯ ಸಾಧಿಸಿತು. 

ಸೆಮಿಫೈನಲ್ ಪಂದ್ಯಗಳಲ್ಲಿ; ಕರ್ನಾಟಕ ತಂಡವು 38–31ರಿಂದ ಉತ್ತರಾಖಂಡ ವಿರುದ್ಧ ಗೆದ್ದಿತು. ಛತ್ತೀಸಗಢ ತಂಡವು 38–27ರಿಂದ ಹರಿಯಾಣ ವಿರುದ್ಧ ಜಯಿಸಿತು. 

ADVERTISEMENT

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.