ADVERTISEMENT

ನೆಟ್ಟಕಲ್ಲಪ್ಪ ರಾಷ್ಟ್ರಮಟ್ಟದ ಈಜು ಕೂಟ: ಚಿನ್ನದ ಅಲೆ ಎಬ್ಬಿಸಿದ ಹಷಿಕಾ, ನೈಶಾ

​ಪ್ರಜಾವಾಣಿ ವಾರ್ತೆ
Published 9 ನವೆಂಬರ್ 2024, 20:28 IST
Last Updated 9 ನವೆಂಬರ್ 2024, 20:28 IST
ಬೆಂಗಳೂರಿನಲ್ಲಿ ಶನಿವಾರ ನೆಟ್ಟಕಲ್ಲಪ್ಪ ಸ್ವಿಮ್ಮಿಂಗ್ ಕಾಂಪಿಟಿಷನ್ 3ನೇ ಆವೃತ್ತಿಯಲ್ಲಿ ಮಹಿಳೆಯರ 200ಮಿ ಮಿಡ್ಲಿ ಯಲ್ಲಿ ಬಸವನಗುಡಿ ಅಕ್ವಾಟಿಕ್ಸ್ ನ ಹಾಷಿಕ ರಾಮಚಂದ್ರ ಚಿನ್ನದ ಪದಕ ಪಡೆದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನಲ್ಲಿ ಶನಿವಾರ ನೆಟ್ಟಕಲ್ಲಪ್ಪ ಸ್ವಿಮ್ಮಿಂಗ್ ಕಾಂಪಿಟಿಷನ್ 3ನೇ ಆವೃತ್ತಿಯಲ್ಲಿ ಮಹಿಳೆಯರ 200ಮಿ ಮಿಡ್ಲಿ ಯಲ್ಲಿ ಬಸವನಗುಡಿ ಅಕ್ವಾಟಿಕ್ಸ್ ನ ಹಾಷಿಕ ರಾಮಚಂದ್ರ ಚಿನ್ನದ ಪದಕ ಪಡೆದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.   

ಬೆಂಗಳೂರು: ಬಸವನಗುಡಿ ಈಜುಕೇಂದ್ರ ಹಷಿಕಾ ರಾಮಚಂದ್ರ  ಮತ್ತು  ಆತಿಥೇಯ ನೆಟ್ಟಕಲ್ಲಪ್ಪ ಅಕ್ವೇಟಿಕ್ಸ್ ಸೆಂಟರ್‌ನ ನೈಶಾ ಶೆಟ್ಟಿ ಶನಿವಾರ  ಆರಂಭವಾದ ‘ನೆಟ್ಟಕಲ್ಲಪ್ಪ ಅಖಿಲ ಭಾರತ ಈಜು ಚಾಂಪಿಯನ್‌ಷಿಪ್‌‘ನಲ್ಲಿ ತಲಾ ಮೂರು ಚಿನ್ನದ ಪದಕ ಜಯಿಸಿದರು. 

ಬೆಳಿಗ್ಗೆಯಿಂದ ನಡೆದ ವಿವಿಧ ಸ್ಪರ್ಧೆಗಳಲ್ಲಿ 3 ಚಿನ್ನ ಗೆದ್ದಿದ್ದ ಹಷಿಕಾ ಅವರನ್ನು ನೈಶಾ ಶೆಟ್ಟಿ ಅವರು ಸಂಜೆ ನಡೆದ  ಓಪನ್ ಸ್ಕಿನ್ಸ್‌ ವಿಭಾಗದ ಮಹಿಳೆಯರ 50 ಮೀ ಬಟರ್‌ಫ್ಲೈ ಸ್ಪರ್ಧೆಯಲ್ಲಿ ಹಿಂದಿಕ್ಕಿದರು. ಈ ರೋಚಕ ಸ್ಪರ್ಧೆಯಲ್ಲಿ ನೈಶಾ ಅವರು ಮೇಲುಗೈ ಸಾಧಿಸಿದರು. ನೈಶಾ ಅವರು 29.54 ಸೆಕೆಂಡುಗಳಲ್ಲಿ ಗುರಿ ಮುಟ್ಟಿದರೆ, ಹಷಿಕಾ 29.58 ಸೆಕೆಂಡುಗಳಲ್ಲಿ ತಲುಪಿದರು.  

ಇದಲ್ಲದೇ ಹಷಿಕಾ ಅವರು ಗುಂಪು 1ರ 400 ಮೀ ಫ್ರೀಸ್ಟೈಲ್, 200 ಮೀ ವೈಯಕ್ತಿಕ ಮೆಡ್ಲೆ ಮತ್ತು 100 ಮೀ ಬಟರ್‌ಫ್ಲೈನಲ್ಲಿ ಮೊದಲಿಗರಾದರು. ನೈಶಾ ಅವರು ಸೀನಿಯರ್ ವಿಭಾಗದಲ್ಲಿ 100 ಮೀ ಬ್ಯಾಕ್‌ಸ್ಟ್ರೋಕ್ ಮತ್ತು 100 ಮೀ ಬಟರ್‌ಫ್ಲೈ ವಿಭಾಗದಲ್ಲಿ ಚಿನ್ನ ಗೆದ್ದರು.  ಪುರುಷರ ವಿಭಾಗದ ಸ್ಕಿನ್ಸ್‌ ಬಟರ್‌ಫ್ಲೈನಲ್ಲಿ ಲಕ್ಷ್ಯನ್ ಅಕಾಡೆಮಿ ಆಫ್‌ ಸ್ಪೋರ್ಟ್ಸ್‌ನ ಚಿಂತಹ್ ಶೆಟ್ಟಿ (26.13ಸೆ) ಚಿನ್ನ ಗೆದ್ದರು. 

ADVERTISEMENT

ಫಲಿತಾಂಶಗಳು

‍ಪುರುಷರು: ಓಪನ್‌; ಸ್ಕಿನ್ಸ್: 50 ಮೀ ಬ್ಯಾಕ್‌ಸ್ಟ್ರೋಕ್: ಆಕಾಶ ಮಣಿ (ಬಸವನಗುಡಿ ಅಕ್ವೆಟಿಕ್ ಸೆಂಟರ್; ಕಾಲ: 26.18ಸೆ)–1, ನಿತಿಕ್ ನಟಾಲಿಯಾ (ಎಸ್‌ಆರ್‌ಎಂ ಯುನಿವರ್ಸಿಟಿ)–2, ಬಿ ಜತಿನ್ (ಗ್ಲೋಬಲ್ ಸ್ವಿಮ್ ಸೆಂಟರ್)–3. 

ಸ್ಕಿನ್ಸ್: 50 ಮೀ ಬಟರ್‌ಫ್ಲೈ: ಚಿಂತನ್ ಎಸ್ ಶೆಟ್ಟಿ (ಲಕ್ಷ್ಯನ್ ಅಕಾಡೆಮಿ  ಆಫ್‌ ಸ್ಪೋರ್ಟ್ಸ್; 26.13ಸೆ)–1, ಎಸ್‌. ವಿದಿತ್ ಶಂಕರ್ (ಡಾಲ್ಫಿನ್ ಅಕ್ವೆಟಿಕ್ಸ್)–2, ದೇವಗಣೇಶ್ ನೀಲಂ (ಜಿಎಸ್‌ಸಿ)–3

200 ಮೀ ಮಡ್ಲೆ: ಅನೀಶ್ ಎಸ್ ಗೌಡ (ಬಿಎಸಿ; 2ನಿ,13.74ಸೆ)–1, ಎಸ್. ವಿದಿತ್ ಶಂಕರ್ (ಡಾಲ್ಫಿನ್ ಅಕ್ವೇಟಿಕ್ಸ್)–2, ಶಿವಾಂಕ್ ವಿಶ್ವನಾಥ್ (ಬಿಎಸಿ)–3.   

100 ಮೀ ಬ್ಯಾಕ್‌ಸ್ಟ್ರೋಕ್: ಆಕಾಶ ಮಣಿ (ಬಿಎಸಿ; 59.24ಸೆ)–1, ನಿತಿಕ್ ನತೇಲಾ (ಎಸ್‌ಆರ್‌ಎಂ ವಿಶ್ವವಿದ್ಯಾಲಯ)–2, ಬಿ ಜತಿನ್ (ಜಿಎಸ್‌ಸಿ)–3. 

100 ಮೀ ಬಟರ್‌ಫ್ಲೈ: ಅನೀಶ್  ಎಸ್ ಗೌಡ(ಬಿಎಸಿ; 57.11ಸೆ)–1, ಕಾರ್ತಿಕೇಯನ್ ನಾಯರ್ (ಡಾಲ್ಫಿನ್)–2, ಶಿವಾಂಕ್ ವಿಶ್ವನಾಥ್ (ಬಿಎಸಿ)–3,

ಬಾಲಕರು ಗುಂಪು 1: 100 ಮೀ ಬ್ಯಾಕ್‌ಸ್ಟ್ರೋಕ್: ಅಮನ್ ಅಭಿಜಿತ್ ಸುಣಗಾರ (ಡಾಲ್ಫಿನ್; 1ನಿ, 01.26ಸೆ)–1, ಕೆ. ಕುಶಾಲ (ಬಿಎಸಿ)–2, ಇದಾಂತ್ ಚತುರ್ವೇದಿ (ಬಿಎಸಿ)–3

400 ಮೀ ಫ್ರೀಸ್ಟೈಲ್: ದಕ್ಷಣ್ (ಬಿಎಸಿ; 4ನಿ,19.70ಸೆ)–1, ಎಸ್‌. ದರ್ಶನ್ (ಬಿಎಸಿ)–2, ಪೃಥ್ವಿರಾಜ್ ಮೆನನ್ (ಬಿಎಸಿ)–3. 

200 ಮೀ ಮೆಡ್ಲೆ: ದೇವಾ ಗಣೇಶ್ ನೀಲಂ (ಜಿಎಸ್‌ಸಿ; 2ನಿ,14.35ಸೆ)–1, ಸೂರ್ಯ ಜೊಯಪ್ಪಾ (ಬಿಎಸಿ)–2, ಆರ್. ನವನೀತ್ ಗೌಡ (ಡಾಲ್ಫಿನ್)–3

100 ಮೀ ಬಟರ್‌ಫ್ಲೈ: ಎಸ್‌. ದರ್ಶನ (ಬಿಸಿ; 57.91ಸೆ)–1, ಚಿಂತನ್ ಎಸ್ ಶೆಟ್ಟಿ (ಲಕ್ಷ್ಯನ್ ಅಕಾಡೆಮಿ)–2, ದಕ್ಷಣ್ (ಬಿಎಸಿ)–3 

2ನೇ ಗುಂಪು: 100 ಮೀ ಬ್ಯಾಕ್‌ಸ್ಟ್ರೋಕ್: ಸಮರ್ಥ್ ಗೌಡ ಬಿಎಸ್ (ಬಿಎಸಿ; 1ನಿ, 02.17ಸೆ)–1, ಅದವೈತಾ ವೆಂಕಟ ಮದಿರಾ (ಬಿಎಸಿ)–2, ಗಣಪತಿ ಭಾರದ್ವಾಜ (ಗೋಲ್ಡನ್ ಫಿನ್ಸ್)–3

100 ಮೀ ಬಟರ್‌ಫ್ಲೈ: ಸಮರ್ಥ ಗೌಡ ಬಿಎಸ್ (ಬಿಎಸಿ; 1ನಿ,01.03ಸೆ)–1, ಎಸ್. ಶರಣ್ (ಮತ್ಸ್ಯ  ಇನ್‌ಕಾರ್ಪೋರೇಷನ್)–2, ಅಕ್ಷಜ್ ಠಾಕೂರಿಯಾ (ಡಾಲ್ಫಿನ್)–3.  

ಮಹಿಳೆಯರು: ಓಪನ್: ಸ್ಕಿನ್ಸ್‌: 50 ಮೀ ಬ್ಯಾಕ್‌ಸ್ಟ್ರೋಕ್: ವಿಹಿತಾ ನಯನಾ (ಬಿಎಸಿ; 30.45ಸೆ)–1, ಆರ್. ಶಾಲಿನಿ ದೀಕ್ಷಿತ್ (ಡಾಲ್ಫಿನ್)–2, ಜಿ. ಸಿದ್ಧ ಶಹಾ (ಡಾಲ್ಫಿನ್)–3

ಸ್ಕಿನ್ಸ್‌ 50 ಮೀ ಬಟರ್‌ಫ್ಲೈ: ನೈಶಾ ಶೆಟ್ಟಿ (ನೆಟ್ಟಕಲ್ಲಪ್ಪ ಅಕ್ವೆಟಿಕ್ಸ್ ಸೆಂಟರ್; 29.5 4ಸೆ)–1, ಹಷಿಕಾ ರಾಮಚಂದ್ರ (ಬಿಎಸಿ)–2, ರಿಷಿಕಾ ಯು ಮಾಂಗ್ಲೆ (ಬಿಎಸಿ)–3 

ಸೀನಿಯರ್ಸ್: 200 ಮೀ ಮೆಡ್ಲೆ: ಶ್ರುಂಗಿ ರಾಜೇಶ್ ಬಾಂದೇಕರ್ (ಜೈನ್ ಕಾಲೇಜು; 2ನಿ, 35.45ಸೆ)–1,  ಎಸ್‌. ಲಕ್ಷ್ಯ (ಇನ್ಸ್‌ಪಾಯರ್ ಇನ್ಸ್‌ಟ್ಯೂಟ್ ಆಫ್ ಸ್ಪೋರ್ಟ್ಸ್)–2, ಯಶ್ವಿ ಪ್ರದೀಪ್ ಕರಾಟ್ (ಜಿಎಸ್‌ಸಿ)–3.

100 ಮೀ ಬ್ಯಾಕ್‌ಸ್ಟ್ರೋಕ್: ನೈಶಾ ಶೆಟ್ಟಿ (ಎನ್‌ಎಸಿ; 1ನಿ, 11.44ಸೆ)–1, ಶ್ರುಂಗಿ ಬಾಂದೇಕರ್ (ಜೈನ್ ಕಾಲೇಜು)–2, ಎಸ್‌. ಲಕ್ಷ್ಯ (ಇನ್‌ಸ್ಪಾಯರ್ ಇನ್ಸ್‌ಟ್ಯೂಟ್)–3. 

100 ಮೀ ಬಟರ್‌ಫ್ಲೈ: ನೈಶಾ ಶೆಟ್ಟಿ (ಎನ್‌ಎಸಿ; 1ನಿ,06.17ಸೆ)–1, ಥಿತೀಕ್ಷಾ ಹನುಮಂತರಾಜು (ಜಿಎಸ್‌ಸಿ)–2, ಅನುಮತಿ ಚೌಗುಲೆ (ಬಿಎಸಿ)–3 

ಬಾಲಕಿಯರು: ಗುಂಪು 1: 100 ಮೀ ಬ್ಯಾಕ್‌ಸ್ಟ್ರೋಕ್: ವಿಹಿತಾ ನಯನಾ (ಬಿಎಸಿ; 1ನಿ,08.81ಸೆ)–1, ಮೀನಾಕ್ಷಿ ಮೆನನ್ (ಬಿಎಸಿ)–2,ಜಿ. ಸಿದ್ಧಿ ಶಹಾ (ಡಾಲ್ಫಿನ್)–3  

400 ಮೀ ಫ್ರೀಸ್ಟೈಲ್: ಹಷಿಕಾ ರಾಮಚಂದ್ರ (ಬಿಎಸಿ; 4ನಿ, 37.19ಸೆ)–1, ಮೀನಾಕ್ಷಿ ಮೆನನ್ (ಬಿಎಸಿ)–2, ಅದಿತಿ ಎನ್ ಮೂಲ್ಯ (ಬಿಎಸಿ)–3

200 ಮೀ ಮೆಡ್ಲೆ: ಹಷಿಕಾ ರಾಮಚಂದ್ರ (ಬಿಎಸಿ; 2ನಿ,30.75ಸೆ)–1, ಮೀನಾಕ್ಷಿ ಮೆನನ್ (ಬಿಎಸಿ)–2, ದಯನೀತಾ ಶಂಕರ್ (ಸ್ವಿಮ್ ಸ್ಕೇರ್)–3

100 ಮೀ ಬಟರ್‌ಫ್ಲೈ: ಹಷಿಕಾ ರಾಮಚಂದ್ರ (ಬಿಎಸಿ; 1ನಿ,05.92ಸೆ)–1, ರಿಷಿಕಾ ಯು ಮಾಂಗ್ಲೆ (ಬಿಎಸಿ)–2, ಅಂಜಲಿ ಹೊಸಕೆರೆ (ಬಿಎಸಿ)–3. 

ಗುಂಪು 2: 100 ಮೀ ಬ್ಯಾಕ್‌ಸ್ಟ್ರೋಕ್: ಆದ್ಯಾ ನಾಯರ್ (ಡಾಲ್ಫಿನ್,  1ನಿ,12.77ಸೆ)–1, ಆಕಾಂಕ್ಷಾ ತಗಡೂರು (ನೆಟ್ಟಕಲ್ಲಪ್ಪ ಅಕ್ವೇಟಿಕ್ ಸೆಂಟರ್)–2, ಧ್ರುತಿ ಕರಿಬಸವೇಶ್ವರ (ಅನೆಪ್ಪಾ ಸೆಂಟರ್ ಫಾರ್ ಎಕ್ಸೆಲನ್ಸ್)–3.  

100 ಮೀ ಬಟರ್‌ಫ್ಳೈ: ತ್ರಿಷಾ ಸಿಂಧು (ಜಿಎಸ್‌ಸಿ; 1ನಿ, 09.82ಸೆ)–1, ಚರಿತಾ ಫಣೀಂದ್ರನಾಥ (ಎಲೈಟ್ ಅಕ್ವೇಟಿಕ್ ಸೆಂಟರ್)–2, ಹಿತಶ್ರೀ ಎನ್ (ಎನ್‌ಎಸಿ)–3.  

ಬೆಂಗಳೂರಿನಲ್ಲಿ ಶನಿವಾರ ನೆಟ್ಟಕಳಪ್ಪ ಸ್ವಿಮ್ಮಿಂಗ್ ಕಾಂಪಿಟಿಷನ್ 3ನೇ ಆವೃತ್ತಿಯಲ್ಲಿ ಮಹಿಳೆಯರ ಸ್ಕಿನ್ಸ್ ವಿಭಾಗದ ಬಟರ್ ಫ್ಲೈ ನಲ್ಲಿ ನೈಶಾ ಶೆಟ್ಟಿ ಚಿನ್ನದ ಪದಕ ಪಡೆದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.
ಬೆಂಗಳೂರಿನಲ್ಲಿ ಶನಿವಾರ ನೆಟ್ಟಕಳಪ್ಪ ಸ್ವಿಮ್ಮಿಂಗ್ ಕಾಂಪಿಟಿಷನ್ 3ನೇ ಆವೃತ್ತಿಯಲ್ಲಿ ಪುರುಷರ ಸ್ಕಿನ್ಸ್ ವಿಭಾಗದ ಬಟರ್ ಫ್ಲೈ ನಲ್ಲಿ ಚಿಂತನ್ ಶೆಟ್ಟಿ ಚಿನ್ನದ ಪದಕ ಪಡೆದರು. ಪ್ರಜಾವಾಣಿ ಚಿತ್ರ/ ಪ್ರಶಾಂತ್ ಎಚ್.ಜಿ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.