ಒಸಾಕ, ಜಪಾನ್: ಆತಿಥೇಯ ದೇಶದ ಕೆಂಟಾ ನಿಶಿಮೊಟೊ ಮತ್ತು ಅಕಾನೆ ಯಾಮಗುಚಿ ಅವರು ಜಪಾನ್ ಓಪನ್ ಬ್ಯಾಡ್ಮಿಂಟನ್ ಟೂರ್ನಿಯಲ್ಲಿ ಕ್ರಮವಾಗಿ ಪುರುಷ ಮತ್ತು ಮಹಿಳಾ ಸಿಂಗಲ್ಸ್ ವಿಭಾಗಗಳಲ್ಲಿ ಪ್ರಶಸ್ತಿ ಜಯಿಸಿದರು.
ಭಾನುವಾರ ನಡೆದ ಪುರುಷರ ವಿಭಾಗದ ಫೈನಲ್‌ನಲ್ಲಿ ನಿಶಿಮೊಟೊ21-19, 21-23, 21-17ರಿಂದ ಚೀನಾದ ಚೊ ಟಿಯೆನ್ ಚೆನ್ ಅವರನ್ನು ಮಣಿಸಿದರು.
ವಿಶ್ವ ರ‍್ಯಾಂಕಿಂಗ್‌ನಲ್ಲಿ 21ನೇ ಸ್ಥಾನದಲ್ಲಿರುವ ನಿಶಿಮೊಟೊ ಅವರಿಗೆ ಇದು ಮೊದಲ ಅಂತರಾಷ್ಟ್ರೀಯ ಪ್ರಶಸ್ತಿಯಾಗಿದೆ. ಈ ಹಿಂದೆ ಆರು ಟೂರ್ನಿಗಳ ಫೈನಲ್‌ಗಳಲ್ಲಿ ಅವರು ನಿರಾಸೆ ಅನುಭವಿಸಿದ್ದರು.
ಮಹಿಳಾ ಸಿಂಗಲ್ಸ್ ಪ್ರಶಸ್ತಿ ಸುತ್ತಿನ ಹಣಾಹಣಿಯಲ್ಲಿ ಅಕಾನೆ21-9, 21-15ರಿಂದ ದಕ್ಷಿಣ ಕೊರಿಯಾದ ಆ್ಯನ್ ಸೆ ಯಂಗ್ ಸವಾಲು ಮೀರಿದರು. ಇದು ಈ ವರ್ಷ ಅಕಾನೆ ಗೆದ್ದ ಮೂರನೇ ಪ್ರಶಸ್ತಿಯಾಗಿದೆ. ಕಳೆದ ವಾರ ಟೋಕಿಯೊದಲ್ಲಿ ನಡೆದ ವಿಶ್ವ ಚಾಂಪಿಯನ್‌ಷಿಪ್‌ನಲ್ಲಿ ಅವರು ಕಿರೀಟ ಧರಿಸಿದ್ದರು.
ಮಹಿಳಾ ಡಬಲ್ಸ್‌ನಲ್ಲಿ ದಕ್ಷಿಣ ಕೊರಿಯಾದ ಜಿಯೊಂಗ್ ನಯುನ್–ಕಿಮ್ ಹೆ ಜಿಯೊಂಗ್, ಪುರುಷರ ಡಬಲ್ಸ್‌ನಲ್ಲಿ ಚೀನಾದ ಲಿಯಾಂಗ್ ವಿಕೆಂಗ್–ವಾಂಗ್ ಚಾನ್ ಚಾಂಪಿಯನ್ ಆಗಿ ಹೊರಹೊಮ್ಮಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.