ADVERTISEMENT

ಜೇಮ್ಸ್ ನೈಸ್ಮಿತ್‌ ಬ್ಯಾಸ್ಕೆಟ್‌ಬಾಲ್‌: ನಿಟ್ಟೆ ಕ್ಯಾಂಪಸ್‌, KMCಗೆ ಪ್ರಶಸ್ತಿ

​ಪ್ರಜಾವಾಣಿ ವಾರ್ತೆ
Published 26 ಅಕ್ಟೋಬರ್ 2024, 15:28 IST
Last Updated 26 ಅಕ್ಟೋಬರ್ 2024, 15:28 IST
ಕಾಲೇಜು ಪುರುಷರ ವಿಭಾಗದ ಪ್ರಶಸ್ತಿ ಗೆದ್ದ ನಿಟ್ಟೆ ಕ್ಯಾಂಪಸ್ ತಂಡ. ನಿಂತವರು (ಎಡದಿಂದ): ನಿಂಗರಾಜು, ಸೃಜನ್ ಶೆಟ್ಟಿ, ಆಯುಷ್ ಶೆಟ್ಟಿ, ರವಿಪ್ರಕಾಶ್ ಸಿ.ಎ (ಕೋಚ್‌), ಶುಭಂ ಶೆಟ್ಟಿ, ನಿದಿಶ್‌ ಶೆಟ್ಟಿಗಾರ್‌, ಕಾರ್ತಿಕ್‌ ಮತ್ತು ಆಶಿಕ್ ಶೆಟ್ಟಿ; (ಕುಳಿತವರು): ವಿನೀತ್ ನಾಯ್ಡು, ಅಮಿತೇಶ್ ಸಿಕ್ವೇರ, ಜೋಶುವಾ ಲೋಬೊ ಮತ್ತು ಅಶ್ಮಿತ್ ಶೆಟ್ಟಿ
ಕಾಲೇಜು ಪುರುಷರ ವಿಭಾಗದ ಪ್ರಶಸ್ತಿ ಗೆದ್ದ ನಿಟ್ಟೆ ಕ್ಯಾಂಪಸ್ ತಂಡ. ನಿಂತವರು (ಎಡದಿಂದ): ನಿಂಗರಾಜು, ಸೃಜನ್ ಶೆಟ್ಟಿ, ಆಯುಷ್ ಶೆಟ್ಟಿ, ರವಿಪ್ರಕಾಶ್ ಸಿ.ಎ (ಕೋಚ್‌), ಶುಭಂ ಶೆಟ್ಟಿ, ನಿದಿಶ್‌ ಶೆಟ್ಟಿಗಾರ್‌, ಕಾರ್ತಿಕ್‌ ಮತ್ತು ಆಶಿಕ್ ಶೆಟ್ಟಿ; (ಕುಳಿತವರು): ವಿನೀತ್ ನಾಯ್ಡು, ಅಮಿತೇಶ್ ಸಿಕ್ವೇರ, ಜೋಶುವಾ ಲೋಬೊ ಮತ್ತು ಅಶ್ಮಿತ್ ಶೆಟ್ಟಿ   

ಮಂಗಳೂರು: ಜಿದ್ದಾಜಿದ್ದಿಯ ಹಣಾಹಣಿ ಗೆದ್ದ ಕಾರ್ಕಳದ ನಿಟ್ಟೆ ಕ್ಯಾಂಪಸ್ ತಂಡ ಜೇಮ್ಸ್‌ ನೈಸ್ಮಿತ್ ಕಪ್ ಬ್ಯಾಸ್ಕೆಟ್‌ಬಾಲ್‌ ಟೂರ್ನಿಯ ಕಾಲೇಜು ಪುರುಷರ ವಿಭಾಗದ ಪ್ರಶಸ್ತಿ ತನ್ನದಾಗಿಸಿಕೊಂಡಿತು. ಮಹಿಳೆಯರ ವಿಭಾಗದ ಪ್ರಶಸ್ತಿ ಮಂಗಳೂರಿನ ಕೆಎಂಸಿ ತಂಡದ ಪಾಲಾಯಿತು. 

ದಕ್ಷಿಣ ಕನ್ನಡ ಜಿಲ್ಲಾ ಬ್ಯಾಸ್ಕೆಟ್‌ಬಾಲ್ ಸಂಸ್ಥೆಯ ಸಹಯೋಗದಲ್ಲಿ ನಗರದ ಯು.ಎಸ್‌.ಮಲ್ಯ ಒಳಾಂಗಣ ಕ್ರೀಡಾಂಗಣದಲ್ಲಿ ನಡೆದ  ಟೂರ್ನಿಯ ಪುರುಷರ ವಿಭಾಗದ ಫೈನಲ್‌ನಲ್ಲಿ ನಿಟ್ಟೆ ಕ್ಯಾಂಪಸ್, ನಿಟ್ಟೆ ವಿಶ್ವವಿದ್ಯಾಲಯ ತಂಡವನ್ನು 49–42ರಲ್ಲಿ ಮಣಿಸಿತು. ಆರಂಭದಿಂದಲೇ ಹಿಡಿತ ಸಾಧಿಸಿದ್ದ ನಿಟ್ಟೆ ಕ್ಯಾಂಪಸ್‌ ಮೊದಲಾರ್ಧದ ಮುಕ್ತಾಯದ ವೇಳೆ 26–17ರ ಮುನ್ನಡೆ ಸಾಧಿಸಿತ್ತು. ದ್ವಿತೀಯಾರ್ಧದಲ್ಲಿ ನಿಟ್ಟೆ ವಿವಿ ತಂಡ ತೀವ್ರ ಪೈಪೋಟಿ ಒಡ್ಡಿ ವೀರೋಚಿತ ಸೋಲೊಪ್ಪಿಕೊಂಡಿತು. ಕ್ಯಾಂಪಸ್ ಪರವಾಗಿ ಸೃಜನ್ 21 ಮತ್ತು ವಿನೀತ್ 12 ಪಾಯಿಂಟ್ ಗಳಿಸಿದರು.

ಮಹಿಳೆಯರ ವಿಭಾಗದ ಫೈನಲ್‌ನಲ್ಲಿ ಕೆಎಂಸಿ, ಸುರತ್ಕಲ್‌ನ ಎನ್‌ಐಟಿಕೆ ವಿರುದ್ಧ 36–10ರಲ್ಲಿ ಜಯ ಸಾಧಿಸಿತು. ವಿಜಯಿ ತಂಡಕ್ಕಾಗಿ ಖುಷಿ 10 ಮತ್ತು ಸುರಭಿ 7 ಪಾಯಿಂಟ್ ಕಲೆ ಹಾಕಿದರು.

ADVERTISEMENT

ಮೌಂಟ್ ಕಾರ್ಮೆಲ್ ತಂಡವನ್ನು 33–6ರಲ್ಲಿ ಮಣಿಸಿದ ಲೂರ್ದ್ಸ್‌ ಸೆಂಟ್ರಲ್ ಸ್ಕೂಲ್ ತಂಡ ಹೈಸ್ಕೂಲ್ ಬಾಲಕರ ವಿಭಾಗದ ಪ್ರಶಸ್ತಿ ತನ್ನದಾಗಿಸಿಕೊಂಡಿತು. ದಿವಿತ್ 14 ಮತ್ತು ಅರ್ಜುನ್ ಶೆಟ್ಟಿ 11 ಪಾಯಿಂಟ್ ಗಳಿಸಿದರು. ಮೌಂಟ್ ಕಾರ್ಮೆಲ್ ತಂಡ ಸೇಂಟ್ ತೆರೆಸಾ ತಂಡವನ್ನು 6–3ರಲ್ಲಿ ಸೋಲಿಸಿ ಹೈಸ್ಕೂಲ್ ಬಾಲಕಿಯರ ವಿಭಾಗದ ಪ್ರಶಸ್ತಿ ಗೆದ್ದುಕೊಂಡಿತು. 24–2ರಲ್ಲಿ ಮೌಂಟ್ ಕಾರ್ಮೆಲ್ ತಂಡವನ್ನು ಸೋಲಿಸಿದ ಲೂರ್ದ್ಸ್‌ ತಂಡ ಪ್ರಾಥಮಿಕ ಶಾಲಾ ಬಾಲಕರ ವಿಭಾಗದಲ್ಲಿ, ಲೂರ್ದ್ಸ್ ವಿರುದ್ಧ 11–4ರ ಗೆಲುವು ಸಾಧಿಸಿ ನಿಟ್ಟೆ ಸ್ಕೂಲ್ ಪ್ರಾಥಮಿಕ ಶಾಲಾ ಬಾಲಕಿಯರ ವಿಭಾಗದಲ್ಲಿ ಚಾಂಪಿಯನ್ ಆಯಿತು. 

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.