ನವದೆಹಲಿ: ವಿಶ್ವದ ಪ್ರತಿಷ್ಠಿತ ದ್ವಿಚಕ್ರ ವಾಹನ ರೇಸ್ ಎನಿಸಿರುವ ಮೋಟೊಜಿಪಿ (ಗ್ರ್ಯಾನ್‌ಪ್ರಿ ಮೋಟರ್‌ಸೈಕಲ್ ರೇಸಿಂಗ್) ಚಾಂಪಿಯನ್‌ಷಿಪ್ ಭಾರತದಲ್ಲಿ ಪ್ರಸಕ್ತ ವರ್ಷ ನಡೆಯುವುದಿಲ್ಲ. ಬದಲಿಗೆ 2025ರ ಮಾರ್ಚ್‌ನಲ್ಲಿ ನಡೆಯಲಿದೆ ಎಂದು ರೇಸ್‌ನ ಸ್ಥಳೀಯರ ಪ್ರವರ್ತಕರು ಮಂಗಳವಾರ ತಿಳಿಸಿದ್ದಾರೆ.
ಮೋಟೊಜಿಪಿಯ ವಾಣಿಜ್ಯ ಹಕ್ಕುಗಳನ್ನು ಹೊಂದಿರುವ ಡೋರ್ನಾ, ಸಹ-ಪ್ರವರ್ತಕರಾದ ಫೇರ್‌ಸ್ಟ್ರಿಟ್ ಸ್ಪೋರ್ಟ್ಸ್ ಮತ್ತು ಉತ್ತರಪ್ರದೇಶ ಸರ್ಕಾರವನ್ನು ಒಳಗೊಂಡ ಮಂಗಳವಾರದ ಸಭೆಯ ನಂತರ, ಮಾರ್ಚ್‌ಗೆ ರೇಸ್ ಅನ್ನು ಮುಂದೂಡಲು ನಿರ್ಧರಿಸಲಾಯಿತು.
ಉತ್ತರ ಪ್ರದೇಶದ ಗ್ರೇಟರ್ ನೊಯಿಡಾದಲ್ಲಿರುವ ಬುದ್ಧ ಇಂಟರ್‌ನ್ಯಾಷನಲ್ ಸರ್ಕಿಟ್‌ನಲ್ಲಿ 2023ರ ಸೆಪ್ಟೆಂಬರ್ 22 ರಿಂದ 24ರವರೆಗೆ ರೇಸ್ ನಿಗದಿಯಾಗಿತ್ತು. ಇದು 2023ರ ಖುತುವಿನ 14 ನೇ ರೇಸ್ ಆಗಿತ್ತು.
‘ಮುಂದಿನ ವರ್ಷದ ಮಾರ್ಚ್ ಮೊದಲ ಅಥವಾ ಎರಡನೇ ವಾರ ರೇಸ್ ನಡೆಸಲು ನಿರ್ಧರಿಸಲಾಯಿತು. ಸೆಪ್ಟೆಂಬರ್ ಹವಾಮಾನವು ರೇಸ್‌ಗೆ ಅನುಕೂಲಕರವಾಗಿಲ್ಲ. ಮತ್ತು ಕಳೆದ ವರ್ಷ ಅನುಭವಿಸಿದಂತೆ ರೈಡರ್‌ಗಳು ಮತ್ತು ಮಾರ್ಷಲ್‌ಗಳಿಗೆ ಇದು ಕಠಿಣವಾಗಿದೆ ಎಂದು ಡೋರ್ನಾ ಸೇರಿದಂತೆ ಎಲ್ಲಾ ಪಾಲುದಾರರು ಒಪ್ಪಿಕೊಂಡಿದ್ದಾರೆ’ ಎಂದು ಫೇರ್‌ಸ್ಟ್ರೀಟ್ ಸ್ಪೋರ್ಟ್ಸ್ ಸಿಇಒ ಪುಷ್ಕರ್ ನಾಥ್ ಶ್ರೀವಾಸ್ತವ ತಿಳಿಸಿದ್ದಾರೆ.
ರೇಸ್ ಮುಂದೂಡುವುದಕ್ಕೂ ಪಾವತಿಸದ ಬಾಕಿಗೂ ಏನಾದರೂ ಸಂಬಂಧವಿದೆಯೇ ಎಂದು ಕೇಳಿದಾಗ, ಶ್ರೀವಾಸ್ತವ ಸ್ಪಷ್ಟವಾಗಿ ‘ಇಲ್ಲ’ ಎಂದು ಉತ್ತರಿಸಿದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.