ನವದೆಹಲಿ: ‘ನನ್ನ ಕ್ರೀಡಾಜೀವನ ಮುಗಿದಿರಬಹುದೆಂದು ಜನರು ಭಾವಿಸಬಹುದು. ಆದರೆ ಅದರಿಂದ ನನ್ನ ಮೇಲೇನೂ ಪರಿಣಾಮವಾಗದು’ ಎಂದು ಅನುಭವಿ ಪೈಲ್ವಾನ್ ಸುಶೀಲ್ ಕುಮಾರ್ ಸ್ಪಷ್ಟಪಡಿಸಿದ್ದಾರೆ. ಆ ಮೂಲಕ ನಿವೃತ್ತಿ ಜೀವನದ ಬಗ್ಗೆ ಕೇಳಿಬಂದ ಮಾತುಗಳಿಗೆತೆರೆಯೆಳೆದಿದ್ದಾರೆ.
ಟೋಕಿಯೊ ಕ್ರೀಡೆಗಳು ಮುಂದಕ್ಕೆ ಹೋಗಿರುವುದರಿಂದ ನಾಲ್ಕನೇ ಬಾರಿ ಒಲಿಂಪಿಕ್ಸ್‌ನಲ್ಲಿ ಅರ್ಹತೆ ಪಡೆಯುವುದಕ್ಕೆ ತಮಗೆ ಅತ್ಯುತ್ತಮ ಅವ ಕಾಶ ಒದಗಿದೆ ಎಂದು ಮುಂದಿನ ತಿಂಗಳು 37 ವರ್ಷಕ್ಕೆ ಕಾಲಿಡಲಿರುವ ಈ ಕುಸ್ತಿಪಟು ಹೇಳಿದ್ದಾರೆ.
ಈ ವರ್ಷದ ಜುಲೈ 24ರಿಂದ ಆರಂಭವಾಗಬೇಕಾಗಿದ್ದ ಒಲಿಂಪಿಕ್ಸ್, ಸುಶೀಲ್, ಟೆನಿಸ್ ಆಟಗಾರ ಲಿಯಾಂಡರ್ ಪೇಸ್ ಅವರಿಗೆ ವಿದಾ ಯದ ವೇದಿಕೆಯಾಗಬಹುದೆಂಬ ನಿರೀಕ್ಷೆಯಿತ್ತು. ಆದರೆ ಕ್ರೀಡೆಗಳು ಮುಂದಕ್ಕೆ ಹೋಗಿರುವುದರಿಂದ ಇವರ ಯೋಜನೆಗಳೂ ಬದಲಾಗಿವೆ.
‘ನಾನೀಗ ಎಲ್ಲೂ ಹೋಗುವುದಿಲ್ಲ. ಹೆಚ್ಚಿನ ಅವಧಿ ದೊರಕಿದೆ. ಉತ್ತಮ ರೀತಿಯ ತಯಾರಿಗೆ ಅನುಕೂಲವಾಗಿದೆ’ ಎಂದಿದ್ದಾರೆ. ಸುಶೀಲ್, ಎರಡು ಒಲಿಂಪಿಕ್ ಪದಕಗಳನ್ನು ಗೆದ್ದ ಏಕೈಕ ಭಾರತೀಯ ಕ್ರೀಡಾಪಟು ಎನಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.