ಲಂಡನ್: ನೊವಾಕ್ ಜೊಕೊವಿಚ್ ಮತ್ತು ಅರಿನಾ ಸಬಲೆಂಕಾ ಅವರಿಗೆ ಅಂತರರಾಷ್ಟ್ರೀಯ ಟೆನಿಸ್ ಫೆಡರೇಶನ್‌ನ 2023ರ ಐಟಿಎಫ್ ವಿಶ್ವ ಚಾಂಪಿಯನ್ ಗೌರವ ನೀಡಲಾಗಿದೆ. ಇವರು ಈ ಋತುವಿನ ಎಲ್ಲಾ ನಾಲ್ಕು ಗ್ರ್ಯಾಂಡ್‌ಸ್ಲಾಮ್ ಪಂದ್ಯಾವಳಿಗಳಲ್ಲಿ ಕನಿಷ್ಠ ಸೆಮಿಫೈನಲ್ ತಲುಪಿದ ಏಕೈಕ ಸಿಂಗಲ್ಸ್ ಆಟಗಾರರು.
ದಾಖಲೆಯ ಎಂಟನೇ ಬಾರಿಗೆ ಎಟಿಪಿ ಕ್ರಮಾಂಕಪಟ್ಟಿಯಲ್ಲಿ ಅಗ್ರಸ್ಥಾನದಲ್ಲಿದ್ದ ಜೊಕೊವಿಚ್, ಆಸ್ಟ್ರೇಲಿಯನ್ ಓಪನ್, ಫ್ರೆಂಚ್ ಓಪನ್ ಮತ್ತು ಯುಎಸ್ ಓಪನ್ ಪ್ರಶಸ್ತಿಗಳನ್ನು ಗೆಲ್ಲುವ ಮೂಲಕ ಪ್ರಶಸ್ತಿಗಳ ಸಂಖ್ಯೆಯನ್ನು ದಾಖಲೆ 24ಕ್ಕೆ ಏರಿಸಿದ್ದಾರೆ. ವಿಂಬಲ್ಡನ್‌ನಲ್ಲಿ ರನ್ನರ್ ಅಪ್ ಆಗಿದ್ದರು. ಇದು ಅವರ ಎಂಟನೇ ಐಟಿಎಫ್ ವಿಶ್ವ ಚಾಂಪಿಯನ್ ಪ್ರಶಸ್ತಿಯಾಗಿದ್ದು, ದಾಖಲೆ ಎನಿಸಿದೆ.
ಮೊದಲ ಗ್ರ್ಯಾಂಡ್ ಸ್ಲಾಮ್ ಪ್ರಶಸ್ತಿ ಆಸ್ಟ್ರೇಲಿಯನ್ ಓಪನ್ ಗೆದ್ದ ನಂತರ ಸಬಲೆಂಕಾ ಅವರು ಪ್ರಥಮ ಬಾರಿಗೆ ಈ ಗೌರವ ಪಡೆದರು. ಅಮೆರಿಕ ಓಪನ್‌ನಲ್ಲಿ ರನ್ನರ್ ಅಪ್, ಫ್ರೆಂಚ್ ಓಪನ್ ಹಾಗೂ ವಿಂಬಲ್ಡನ್‌ನಲ್ಲಿ ಸೆಮಿಫೈನಲ್ ತಲುಪಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.