ADVERTISEMENT

ಲಾರೆಸ್‌ ‘ವರ್ಲ್ಡ್‌ ಬ್ರೇಕ್‌ಥ್ರೂ’ ಪ್ರಶಸ್ತಿ: ನೀರಜ್ ನಾಮನಿರ್ದೇಶನ

ಪಿಟಿಐ
Published 3 ಫೆಬ್ರುವರಿ 2022, 12:45 IST
Last Updated 3 ಫೆಬ್ರುವರಿ 2022, 12:45 IST
ನೀರಜ್ ಚೋಪ್ರಾ– ಪಿಟಿಐ ಚಿತ್ರ
ನೀರಜ್ ಚೋಪ್ರಾ– ಪಿಟಿಐ ಚಿತ್ರ   

ಲಂಡನ್‌: ಟೋಕಿಯೊ ಒಲಿಂಪಿಕ್ಸ್‌ ಚಿನ್ನದ ಪದಕ ವಿಜೇತ ಜಾವೆಲಿನ್ ಥ್ರೊ ಪಟು, ಭಾರತದ ನೀರಜ್ ಚೋಪ್ರಾ ಅವರು ಪ್ರತಿಷ್ಠಿತ ಲಾರೆಸ್‌ವರ್ಷದ ಬ್ರೇಕ್‌ಥ್ರೂ ಪ್ರಶಸ್ತಿಗೆ ನಾಮನಿರ್ದೇಶನಗೊಂಡಿದ್ದಾರೆ.

ಟೆನಿಸ್ ತಾರೆಯರಾದ ರಷ್ಯಾದ ಡ್ಯಾನಿಲ್ ಮೆಡ್ವೆಡೆವ್‌ ಮತ್ತು ಬ್ರಿಟನ್‌ನ ಎಮ್ಮಾ ರಡುಕಾನು ಕೂಡ ಈ ಪಟ್ಟಿಯಲ್ಲಿದ್ದಾರೆ.

23 ವರ್ಷದ ಚೋಪ್ರಾ ಅವರುಟೋಕಿಯೊದಲ್ಲಿ 87.58 ಮೀಟರ್ಸ್ ಜಾವೆಲಿನ್‌ ಎಸೆಯುವ ಮೂಲಕ, ಒಲಿಂಪಿಕ್ಸ್‌ನಲ್ಲಿ ವೈಯಕ್ತಿಕ ವಿಭಾಗದಲ್ಲಿ ಚಿನ್ನ ಗೆದ್ದ ಭಾರತದ ಎರಡನೇ ಅಥ್ಲೀಟ್‌ ಎನಿಸಿಕೊಂಡಿದ್ದರು. ಟ್ರ್ಯಾಕ್‌ ಮತ್ತು ಫೀಲ್ಡ್ ವಿಭಾಗದಲ್ಲಿ ಈ ಸಾಧನೆ ಮಾಡಿದ ದೇಶದ ಮೊದಲ ಕ್ರೀಡಾಪಟು ಎಂಬ ಶ್ರೇಯ ಗಳಿಸಿದ್ದರು.

ADVERTISEMENT

ಲಾರೆಸ್‌ ಪುರಸ್ಕಾರಕ್ಕೆ ನಾಮನಿರ್ದೇಶನಗೊಂಡ ಭಾರತದ ಮೂರನೇ ಕ್ರೀಡಾಪಟು ಎನಿಸಿಕೊಂಡಿದ್ದಾರೆ ನೀರಜ್‌. ಈ ಹಿಂದೆ ಕ್ರಿಕೆಟ್‌ ದಿಗ್ಗಜ ಸಚಿನ್ ತೆಂಡೂಲ್ಕರ್‌ ಮತ್ತು ಕುಸ್ತಿಪಟು ವಿನೇಶಾ ಪೋಗಟ್‌ ಈ ಪಟ್ಟಿಗೆ ಸೇರಿದ್ದರು.

ಜಗತ್ತಿನ 1,300ಕ್ಕೂ ಹೆಚ್ಚು ಕ್ರೀಡಾ ಪತ್ರಕರ್ತರು ಮತ್ತು ಪ್ರಸಾರಕರ ಸಮಿತಿಯು ಈ ವರ್ಷದ ಲಾರೆಸ್ ವಿಶ್ವ ಕ್ರೀಡಾ ಪ್ರಶಸ್ತಿಗಳಿಗಾಗಿ ಏಳು ವಿಭಾಗಗಳಲ್ಲಿ ನಾಮನಿರ್ದೇಶಿತರನ್ನು ಆಯ್ಕೆ ಮಾಡಿದೆ.

ಪ್ರಶಸ್ತಿ ವಿಜೇತರ ಹೆಸರುಗಳನ್ನು ಏಪ್ರಿಲ್‌ನಲ್ಲಿ ಬಹಿರಂಗಪಡಿಸಲಾಗುತ್ತದೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.